BMW M8 ಹೊಸ ಕಾರು ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್‌..! ಏನಿದರ ವಿಶೇಷತೆ?

By Suvarna News  |  First Published Sep 1, 2021, 5:34 PM IST

* ಗಬ್ಬರ್ ಸಿಂಗ್ ಧವನ್ ಮನೆಗೆ ಹೊಸ ಅತಿಥಿ ಆಗಮನ

* BMW M8 ಹೊಸ ಕಾರು ಖರೀದಿಸಿದ ಶಿಖರ್ ಧವನ್

* ಕಳೆದ ವರ್ಷವಷ್ಟೇ BMW M8 ಕಾರನ್ನು ಭಾರತದಲ್ಲಿ ಲಾಂಚ್‌ ಮಾಡಲಾಗಿದೆ


ನವದೆಹಲಿ(ಸೆ.01): ಗಬ್ಬರ್‌ ಸಿಂಗ್ ಖ್ಯಾತಿಯ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ ಹೊಸ BMW M8 ಐಷಾರಾಮಿ ಕಾರೊಂದನ್ನು ಖರೀದಿಸಿದ್ದಾರೆ. ಕಳೆದ ವರ್ಷವಷ್ಟೇ BMW M8 ಕಾರನ್ನು ಭಾರತದಲ್ಲಿ ಲಾಂಚ್‌ ಮಾಡಲಾಗಿದ್ದು, ಸದ್ಯ ಭಾರತದಲ್ಲಿ ಲಭ್ಯವಿರುವ ಅತ್ಯಂತ ಪವರ್‌ಫುಲ್‌ BMW ಕಾರು ಇದು ಎನಿಸಿದೆ.

ಈ ವರ್ಷದ ಆರಂಭದಲ್ಲೇ BMW M8 'ಫರ್ಫಾರ್ಮೆನ್ಸ್‌ ಕಾರ್‌ ಆಫ್‌ ದಿ ಇಯರ್' ಪ್ರಶಸ್ತಿಗೆ ಭಾಜನವಾಗಿತ್ತು. BMW M8 ಕಾರು ಆಡಿ RS7 ಸ್ಪೋರ್ಟ್ಸ್‌ಬ್ಯಾಕ್‌ ಹಾಗೂ ಮರ್ಸಿಡೀಸ್‌ AMG GT 63 ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ನಾಲ್ಕು ಸೀಟ್‌ ವ್ಯವಸ್ಥೆ ಇರುವ ಈ ಕಾರು 4395 ಸಿಸಿ ಹೊಂದಿದ್ದು, ಶಿಖರ್ ಧವನ್ ಈ ಕಾರಿನ ಬೆಲೆ ಕೇವಲ 2.17 ಕೋಟಿ ರುಪಾಯಿಯಷ್ಟೇ..!

An icon of Indian cricket meets .
Congratulations to on his brand new BMW Coupé.
Welcome to the family! pic.twitter.com/aiHBjAlQ9H

— bmwindia (@bmwindia)

Caught in the act. The BMW M8 Gran Coupé First Edition in Aurora Diamant Green Metallic—1 of 400.

📸: Captured by the talented on Instagram. pic.twitter.com/oAErvDH4x7

— BMW AGMC (@BMW_AGMC)

Tap to resize

Latest Videos

undefined

ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ವೀರೂ-ದಾದಾ; ಸೆಹ್ವಾಗ್‌ ಮಾತಿಗೆ ಬಿದ್ದು ಬಿದ್ದು ನಕ್ಕ ಸೌರವ್‌..!

ಎರಡು ಡೋರ್ ಮಾಡೆಲ್‌ನ ಈ ಕಾರು ಸ್ವೆಪ್ಟ್‌ ಬ್ಯಾಕ್‌ ಹೆಡ್‌ಲ್ಯಾಂಪ್ಸ್‌ ಹೊಂದಿದೆ. BMW M8 ಕಾರ್ಬನ್‌ ಫೈಬರ್‌ನ್ನು ಹೆಚ್ಚಾಗಿ ಬಳಸಲಾಗಿದೆ. ಈ ಕಾರು 10.25 ಇಂಚಿನ ಇನ್‌ಫೋಟೈನ್‌ಮೆಂಡ್‌ ಸಿಸ್ಟಂ ಹೊಂದಿದೆ. ಈ ಐಷಾರಾಮಿ ಕಾರಿಗೆ ಮೆರಿನೋ ಲೆದರ್ ಸೀಟ್‌ ಅಳವಡಿಸಲಾಗಿದೆ. ಇದಷ್ಟೇ ಅಲ್ಲದೇ ಈ ಕಾರಿನಲ್ಲಿ ಆಂಬಿಯಂಟ್ ಲೈಟಿಂಗ್, ಹರ್ಮನ್‌ ಸೌಂಡ್‌ ಸಿಸ್ಟಂ, ಎಂ ಸ್ಪೋರ್ಟ್‌ ಸೀಟ್, ವೈರ್‌ಲೆಸ್‌ ಚಾರ್ಜಿಂಗ್, ಆ್ಯಪಲ್‌ ಕಾರ್ ಪ್ಲೇ, ಬಿಎಂಡಬ್ಲ್ಯೂ ಡಿಸ್‌ಪ್ಲೇ ಕೀ ಇನ್ನಿತರ ವ್ಯವಸ್ಥೆಗಳಿವೆ. ಕೇವಲ 3.3 ಸೆಕೆಂಡ್‌ಗಳಲ್ಲಿ ಈ ಕಾರು ಮೂರಂಕಿ ಸ್ಪೀಡ್‌ ವೇಗ ತಲುಪುತ್ತದೆ ಎಂದರೆ ನೀವೇ ಲೆಕ್ಕಾ ಹಾಕಿ ಇದರ ಕ್ಷಮತೆ ಹೇಗಿದೆ ಎಂದು. 
 

click me!