ಐಪಿಎಲ್‌ಗೆ ಮತ್ತೆರಡು ಹೊಸ ತಂಡ: 5 ಸಾವಿರ ಕೋಟಿ ರೂ ಗಳಿಸಲು ಬಿಸಿಸಿಐ ಪ್ಲಾನ್‌..!

Kannadaprabha News   | Asianet News
Published : Sep 01, 2021, 08:37 AM IST
ಐಪಿಎಲ್‌ಗೆ ಮತ್ತೆರಡು ಹೊಸ ತಂಡ: 5 ಸಾವಿರ ಕೋಟಿ ರೂ ಗಳಿಸಲು ಬಿಸಿಸಿಐ ಪ್ಲಾನ್‌..!

ಸಾರಾಂಶ

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಹೊಸ 2 ತಂಡಗಳ ಸೇರ್ಪಡೆ * ಬಿಡ್ ಸಲ್ಲಿಸಲು ಬಿಸಿಸಿಐನಿಂದ ಅರ್ಜಿ ಆಹ್ವಾನ * 10 ಲಕ್ಷ ಪಾವತಿ ಮಾಡಿ ಯಾವುದೇ ಕಂಪನಿ ಬಿಡ್‌ನ ದಾಖಲೆಗಳನ್ನು ಖರೀದಿಸಬಹುದಾಗಿದೆ.

ಮುಂಬೈ(ಸೆ.01) ಮುಂಬರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ಗೆ 2 ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳುವ ಸಾಧ್ಯತೆಯಿದ್ದು, ಇದರಿಂದ ಬಿಸಿಸಿಐ 5,000 ಕೋಟಿ ರುಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ. ಒಂದೊಮ್ಮೆ ಹೊಸ ಫ್ರಾಂಚೈಸಿಗಳು ಅಸ್ತಿತ್ವಕ್ಕೆ ಬಂದಲ್ಲಿ, ಮುಂದಿನ ಆವೃತ್ತಿಯಲ್ಲಿ 10 ತಂಡಗಳು ಪಂದ್ಯಾವಳಿ ಸ್ಪರ್ಧೆಗಿಳಿಯಲಿವೆ.

15ನೇ ಆವೃತ್ತಿಯ ಐಪಿಎಲ್‌ಗೆ ಪಾಲ್ಗೊಳ್ಳಲು ಇಚ್ಚಿಸುವವರು 10 ಲಕ್ಷ ಪಾವತಿ ಮಾಡಿ ಯಾವುದೇ ಕಂಪನಿ ಬಿಡ್‌ನ ದಾಖಲೆಗಳನ್ನು ಖರೀದಿಸಬಹುದಾಗಿದೆ. ಈ ಮೊದಲು ಹೊಸ ತಂಡಗಳಿಗೆ 1,700 ಕೋಟಿ ರುಪಾಯಿ ಮೂಲ ಬೆಲೆ ನಿಗದಿ ಪಡಿಸಲು ಯೋಚಿಸಲಾಗಿತ್ತು. ಬಳಿಕ 2,000 ಕೋಟಿ ರುಪಾಯಿ ನಿಗದಿ ಪಡಿಸಲು ನಿರ್ಧರಿಸಲಾಯಿತು ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.

ಐಪಿಎಲ್‌ ಭಾಗ-2 ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್

ದೊಡ್ಡ ಉದ್ಯಮ ಸಂಸ್ಥೆಗಳು ಫ್ರಾಂಚೈಸಿ ಖರೀದಿಸಿದರೆ ಕನಿಷ್ಠ 5,000 ಕೋಟಿ ರುಪಾಯಿ ಆದಾಯದ ನಿರೀಕ್ಷೆಯಲ್ಲಿ ಬಿಸಿಸಿಐ ಇದೆ. ವಾರ್ಷಿಕ 3000 ಕೋಟಿ ರುಪಾಯಿ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಹೊಸ ತಂಡಗಳಿಗೆ ಅಹಮದಾಬಾದ್‌, ಲಖನೌ ಮತ್ತು ಪುಣೆಯಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ. ಮುಂದಿನ ಆವೃತ್ತಿಯಲ್ಲಿ 74 ಪಂದ್ಯಗಳು ಇರಲಿವೆ ಎಂದು ತಿಳಿದುಬಂದಿದೆ. ಅದಾನಿ ಗ್ರೂಪ್‌, ಆರ್‌ಪಿಜಿ ಸಂಜೀವ್‌ ಗೋಯಾಂಕ್‌ ಗ್ರೂಪ್‌, ಟೊರೆಂಟ್‌ ಕಂಪನಿಗಳು ತಂಡಗಳ ಖರೀದಿಗೆ ಆಸಕ್ತಿ ಹೊಂದಿವೆ ಎಂದು ಹೇಳಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈನಲ್ಲಿ ಸಚಿನ್, ಛೆಟ್ರಿ ಭೇಟಿಯಾಗಲಿರುವ ಮೆಸ್ಸಿ; ಈ ಲಿಸ್ಟ್‌ನಲ್ಲಿದ್ದಾರೆ ಹಲವು ಸೆಲಿಬ್ರಿಟೀಸ್!
U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು