Rishabh Pant ವಿಶ್ವಕಪ್ ತಂಡದಲ್ಲಿದ್ದರೂ ಪ್ಲೇಯಿಂಗ್-11ನಲ್ಲಿ ಇರಲ್ವಾ..?

Published : Jul 09, 2022, 12:55 PM IST
Rishabh Pant ವಿಶ್ವಕಪ್ ತಂಡದಲ್ಲಿದ್ದರೂ ಪ್ಲೇಯಿಂಗ್-11ನಲ್ಲಿ ಇರಲ್ವಾ..?

ಸಾರಾಂಶ

* ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ರಿಷಭ್ ಪಂತ್ * ಇಂಗ್ಲೆಂಡ್ ಎದುರು ಸ್ಪೋಟಕ ಶತಕ ಸಿಡಿಸಿ ಭಾರತಕ್ಕೆ ಆಸರೆಯಾಗಿದ್ದ ಪಂತ್ * ಟೆಸ್ಟ್​ ಕ್ರಿಕೆಟ್​ನಲ್ಲಿ ಸೆಂಚುರಿಗಳನ್ನ ಸಿಡಿಸೋ ಪಂತ್, ಟಿ20 ಕ್ರಿಕೆಟ್​ಗೆ ಬಂದರೆ ಠುಸ್ ಪಟಾಕಿ

ಬೆಂಗಳೂರು(ಜು.09): ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್​ನಲ್ಲಿ ರಿಷಭ್ ಪಂತ್ ಸೆಂಚುರಿ ಸಿಡಿಸಿದ್ದೇ ಬಂತು. ಅವರ ಕಳಪೆ ಆಟಗಳೆಲ್ಲಾ ಒಂದೊಂದಾಗಿ ಮಾಯವಾಗ್ತಿವೆ. ಸತತ ವೈಫಲ್ಯ ಅನುಭವಿಸಿದ್ದ ಡೆಲ್ಲಿ ಕೀಪರ್, ಒಂದು ಇನ್ನಿಂಗ್ಸ್​ನಲ್ಲಿ ಎಲ್ಲವನ್ನೂ ಮರೆಸಿದ್ದಾರೆ. ಆಂಗ್ಲರ ಬೇಟೆಯಾಡಿದ ರಿಷಭ್ ಪಂತ್, ಫಸ್ಟ್​ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾಗೆ ಆಸರೆಯಾಗಿದ್ದರು. ಅವರ ಬ್ಯಾಟಿಂಗ್ ಸ್ಟೈಲ್​ಗೆ ಫಿದಾ ಆಗಿ ಎಲ್ಲರೂ ಪಂತ್​-ಪಂತ್-ಪಂತ್ ಎನ್ನುತ್ತಿದ್ದಾರೆ.

ಆದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಸೆಂಚುರಿಗಳನ್ನ ಸಿಡಿಸೋ ರಿಷಭ್ ಪಂತ್ (Rishabh Pant), ಟಿ20 ಕ್ರಿಕೆಟ್​ಗೆ ಬಂದರೆ ಠುಸ್ ಪಟಾಕಿ. ಇದು ನಾವ್ ಹೇಳ್ತಿಲ್ಲ. ಅವರ ಅಂಕಿ-ಅಂಶಗಳೇ ಹೇಳ್ತಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್​​​​​, ಸೌತ್ ಆಫ್ರಿಕಾದಲ್ಲಿ ಟೆಸ್ಟ್​ ಶತಕಗಳನ್ನ ಸಿಡಿಸಿದ್ದಾರೆ. ಆದರೆ ಶಾರ್ಟ್​ ಫಾಮ್ಯಾಟ್​ಗೆ ಬಂದರೆ ಅವರ ಆಟ ಅಷ್ಟಕಷ್ಟೆ. ಒನ್​ಡೇ ಕ್ರಿಕೆಟ್​ನಲ್ಲಿ ಪರವಾಗಿಲ್ಲ. ಟಿ20 ಕ್ರಿಕೆಟ್​ನಲ್ಲಿ ಅವರ ಆಟ ತೀರ ಕಳಪೆಯಾಗಿದೆ. ಐಪಿಎಲ್​ನಲ್ಲೂ ಅವರ ಆಟ ಹೇಳಿಕೊಳ್ಳುವಂತಿಲ್ಲ.

42 ಇನ್ನಿಂಗ್ಸ್ ಆಡಿದ್ರೂ 123ರ ಬ್ಯಾಟಿಂಗ್ ಸ್ಟ್ರೈಕ್​ರೇಟ್

ಟೆಸ್ಟ್ ಕ್ರಿಕೆಟ್​ನಲ್ಲಿ ಆಟಗಾರನ ಪರ್ಫಾಮೆನ್ಸ್ ಅನ್ನು ಆತನ ಸರಾಸರಿ ಮೇಲೆ ಹೇಳಲಾಗುತ್ತೆ. ಆದ್ರೆ ಟಿ20 ಕ್ರಿಕೆಟ್​ನಲ್ಲಿ ಸರಾಸರಿ ಇಂಪಾಡೆಂಟೇ ಅಲ್ಲ. ಟಿ20ಯಲ್ಲಿ ಏನಿದ್ದರೂ ಸ್ಟ್ರೈಕ್​ರೇಟ್. ಜಸ್ಟ್ 10 ಬಾಲ್​ನಲ್ಲಿ 30 ರನ್ ಹೊಡೆದ್ರೆ ಸಾಕು, ಆತ ಅದ್ಭುತ ಬ್ಯಾಟ್ಸ್​​ಮನ್ ಎನಿಸಿಕೊಂಡು ಬಿಡುತ್ತಾನೆ. ರಿಷಭ್ ಪಂತ್​, ಟೀಂ ಇಂಡಿಯಾ ಪರ 42 ಟಿ20 ಇನ್ನಿಂಗ್ಸ್ ಆಡಿದ್ರೂ ಅವರ ಸ್ಟ್ರೈಕ್​ರೇಟ್​ ಜಸ್ಟ್​ 123 ಅಷ್ಟೆ. ಕಡಿಮೆ ಸ್ಟೈಕ್​ರೇಟ್ ಇದೆ ಅನ್ನೋ ಕಾರಣಕ್ಕೆ ಕನ್ಸಿಟೆನ್ಸಿ ಪರ್ಫಾಮೆನ್ಸ್ ನೀಡುತ್ತಿದ್ದರೂ ಶಿಖರ್ ಧವನ್ ಅವರನ್ನ ಟಿ20 ಫಾಮ್ಯಾಟ್​ನಿಂದ ಡ್ರಾಪ್ ಮಾಡಲಾಗಿದೆ. ಅದೇ ಮಾನದಂಡ ಇಟ್ಟುಕೊಂಡ್ರೆ ರಿಷಭ್ ಪಂತ್ ಸಹ ಟಿ20 ಟೀಮ್​ನಿಂದ ಕಿಕೌಟ್ ಆಗಲಿದ್ದಾರೆ.

ದಿನೇಶ್‌ ಕಾರ್ತಿಕ್ ಸೇರಿ ಈ ನಾಲ್ವರಿಗೂ ಒಲಿಯಲಿಲ್ಲ ಟೆಸ್ಟ್​ ಕ್ರಿಕೆಟ್‌ ಯಶಸ್ಸು..!

ವಿಶ್ವಕಪ್​ನಲ್ಲಿ ಪಂತ್​ಗೆ ಕಾಂಪಿಟೇಟರ್​ ಡಿಕೆ  ಸ್ಟ್ರೈಕ್​ರೇಟ್ 145: 

ಯೆಸ್, ಟಿ20 ವರ್ಲ್ಡ್​ಕಪ್​​​ ಟೀಮ್​ನಲ್ಲಿ ಪಂತ್ ಮತ್ತು ದಿನೇಶ್ ಕಾರ್ತಿಕ್ (Dinesh Karthik) ಇಬ್ಬರೂ ಸ್ಥಾನ ಪಡೆಯುತ್ತಾರೆ. ಆದ್ರೆ ಪ್ಲೇಯಿಂಗ್-11ನಲ್ಲಿ ಇರೋದು ಮಾತ್ರ ಒಬ್ಬರೇ. ಟಿ20 ಫ್ಯಾಮ್ಯಾಟ್​ಗೆ ಬಂದರೆ ಪಂತ್​ ಅವರನ್ನ ಡಿಕೆ ಹಿಂದಿಕ್ಕಲಿದ್ದಾರೆ. ಯಾಕಂದರೆ ಪಂತ್ 123ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದರೆ, ಡಿಕೆ ಸ್ಟ್ರೈಕ್​ರೇಟ್ ಬರೋಬ್ಬರಿ 145.45. ರಿಷಭ್ ಪಂತ್ 48 ಟಿ20 ಪಂದ್ಯಗಳಿಂದ 741 ರನ್ ಬಾರಿಸಿದ್ದಾರೆ. 123.91ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ 3 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ 39 ಟಿ20 ಮ್ಯಾಚ್​ಗಳಲ್ಲಿ 496 ರನ್​ ಹೊಡೆದಿದ್ದಾರೆ. 145.45ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ ಒಂದು ಹಾಫ್ ಸೆಂಚುರಿಯನ್ನೂ ಬಾರಿಸಿದ್ದಾರೆ.

ಟಿ20 ಫಾರ್ಮ್ಯಾಟ್​ನಲ್ಲಿ ಸ್ಟ್ರೈಕ್​​​ರೇಟ್​ಗೆ ಹೆಚ್ಚು ಮಹತ್ವ. ನಂಬರ್ 3 ಸ್ಲಾಟ್​ನಲ್ಲಿ ಕೊಹ್ಲಿ, ನಾಲ್ಕರಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav), ಐದರಲ್ಲಿ ಹಾರ್ದಿಕ್ ಪಾಂಡ್ಯ, ನಂಬರ್ 6 ಸ್ಲಾಟ್​ನಲ್ಲಿ ಡಿಕೆ ಆಡೋದ್ರಿಂದ ಪಂತ್​ಗೆ ಜಾಗವಿಲ್ಲ. ಆಕಸ್ಮಾತ್ ಅವರನ್ನ ಆಡಿಸಿದ್ರೆ ಈ ನಾಲ್ವರಲ್ಲಿ ಒಬ್ಬರನ್ನ ಡ್ರಾಪ್ ಮಾಡ್ಬೇಕು. ಹಾಗಾಗಿ ಪಂತ್ ಪ್ಲೇಯಿಂಗ್-11ನಿಂದ ಡ್ರಾಪ್ ಆಗೋ ಎಲ್ಲಾ ಚಾನ್ಸಸ್ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?