4 ದಿನಗಳ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ವಿರೋಧ!

By Naveen Kodase  |  First Published Jan 5, 2020, 12:36 PM IST

ಸಾಂಪ್ರದಾಯಿಕ 5 ದಿನಗಳ ಪಂದ್ಯಗಳ ಬದಲಿಗೆ 4 ದಿನಗಳ ಪಂದ್ಯ ಆಯೋಜನೆ ಬಗ್ಗೆ ಐಸಿಸಿ ಯೋಚಿಸುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಗುವಾಹಟಿ[ಜ.05]: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಟೆಸ್ಟ್‌ ಪಂದ್ಯವನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಈ ಬೆಳವಣಿಗೆ ಟೆಸ್ಟ್‌ ಕ್ರಿಕೆಟ್‌ಗೆ ಮಾರಕ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಇಂದು ಭಾರತ-ಲಂಕಾ ಮೊದಲ ಟಿ20 

Latest Videos

undefined

2023ರಿಂದ 2031ರ ಅವಧಿಯಲ್ಲಿ 4 ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಿ, ಉಳಿಯುವ ದಿನಗಳಲ್ಲಿ ಹೆಚ್ಚು ಸೀಮಿತ ಓವರ್‌ ಪಂದ್ಯಗಳನ್ನು ನಡೆಸಲು ಐಸಿಸಿ ಯೋಜನೆ ರೂಪಿಸಿದೆ.

ರಣಜಿ ಟ್ರೋಫಿ: ಕರ್ನಾಟಕಕ್ಕೆ ಗೆಲ್ಲಲು 126 ರನ್ ಟಾರ್ಗೆಟ್

ಶನಿವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿರಾಟ್‌, ‘ನನ್ನ ಪ್ರಕಾರ ಬದಲಾವಣೆ ಮಾಡಬಾರದು. ಟೆಸ್ಟ್‌ ಕ್ರಿಕೆಟ್‌ ಅನ್ನು ವಾಣಿಜ್ಯೀಕರಣಗೊಳಿಸಲು ಈಗಾಗಲೇ ಹಗಲು-ರಾತ್ರಿ ಮಾದರಿಯಲ್ಲಿ ಪರಿಚಯಿಸಲಾಗಿದೆ. ಇದಕ್ಕಿಂತ ಹೆಚ್ಚು ಪ್ರಯೋಗ ಸಲ್ಲ. ಈಗ 4 ದಿನಗಳ ಪಂದ್ಯ ನಡೆಸಿದರೆ, ಮುಂದಿನ ದಿನಗಳಲ್ಲಿ ಅದನ್ನು 3 ದಿನಗಳಿಗೆ ಇಳಿಸುವ ಯೋಜನೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ, ಐಸಿಸಿ ಪ್ರಸ್ತಾಪವನ್ನು ನಾನು ಬೆಂಬಲಿಸುವುದಿಲ್ಲ’ ಎಂದರು.
 

click me!