RT-PCR ಟೆಸ್ಟ್‌ನಲ್ಲೂ ರವಿಶಾಸ್ತ್ರಿಗೆ ಕೋವಿಡ್ ಪಾಸಿಟಿವ್, ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ಅಲಭ್ಯ..!

By Suvarna NewsFirst Published Sep 7, 2021, 8:47 AM IST
Highlights

* ಟೀಂ ಇಂಡಿಯಾ ಕೋಚ್‌ ರವಿಶಾಸ್ತ್ರಿಗೆ ಮತ್ತೆ ಕೋವಿಡ್ ದೃಢ

* ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ರವಿಶಾಸ್ತ್ರಿ ಅಲಭ್ಯರಾಗಲಿದ್ದಾರೆ

* ಶಾಸ್ತ್ರಿ ಕನಿಷ್ಠ 10 ದಿನಗಳ ಐಸೋಲೇಷನ್‌ನಲ್ಲಿ ಇರಬೇಕಾಗಿದೆ

ಲಂಡನ್‌(ಸೆ.07): ಟೀಂ ಇಂಡಿಯಾ ಕೋಚ್‌ ರವಿಶಾಸ್ತ್ರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲೂ ಕೋವಿಡ್‌ 19 ಖಚಿತವಾಗಿದ್ದು, ಕನಿಷ್ಠ 10 ದಿನಗಳ ಐಸೋಲೇಷನ್‌ನಲ್ಲಿ ಇರಬೇಕಾಗಿದೆ. ಹೀಗಾಗಿ ಇಂಗ್ಲೆಂಡ್‌ ವಿರುದ್ಧ ಮ್ಯಾಚೆಂಸ್ಟರ್‌ನಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟಪಂದ್ಯದ ವೇಳೆ ರವಿಶಾಸ್ತ್ರಿ ತಂಡ ಜತೆ ಇರುವುದಿಲ್ಲ.

ಭಾನುವಾರ ನಡೆಸಿದ ರ‍್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ನಲ್ಲಿ 59 ವರ್ಷದ ರವಿಶಾಸ್ತ್ರಿಗೆ ಸೋಂಕು ಹಬ್ಬಿರುವುದು ಪತ್ತೆಯಾಗಿತ್ತು. ಸೋಮವಾರ ನಡೆಸಿದ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ರವಿಶಾಸ್ತ್ರಿ ಸಂಪರ್ಕದಲ್ಲಿದ್ದ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌, ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಮತ್ತು ಪಿಸಿಯೊ ಥೆರಪಿಸ್ಟ್‌ ನಿತಿನ್‌ ಪಟೇಲ್‌ ಸಹ ಐಸೋಲೇಷನ್‌ನಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಇಂಗ್ಲೆಂಡ್ ಬಗ್ಗುಬಡಿದ ಟೀಂ ಇಂಡಿಯಾ; ಓವಲ್ ಟೆಸ್ಟ್‌ನಲ್ಲಿ ಕೊಹ್ಲಿ ಸೈನ್ಯಕ್ಕೆ 157 ರನ್ ಗೆಲುವು!

ಮ್ಯಾಂಚೆಸ್ಟರ್‌ನಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರರಿಗಾಗಿಯೇ ಬಿಸಿಸಿಐ ವಿಶೇಷ ಬಯೋ ಬಬಲ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಮ್ಯಾಂಚೆಸ್ಟರ್‌ನಲ್ಲಿನ ಬಯೋ ಬಬಲ್‌ನಿಂದ ಸೆಪ್ಟೆಂಬರ್ 15ರಂದು ಯುಎಇನಲ್ಲಿ ಐಪಿಎಲ್‌ನ ಬಯೋ ಬಬಲ್‌ಗೆ ಈ ಆಟಗಾರರು ನೇರ ಪ್ರವೇಶ ಪಡೆಯಲಿದೆ. 14ನೇ ಆವೃತ್ತಿಯ ಐಪಿಎಲ್‌ ಭಾಗ-2 ಟೂರ್ನಿಯು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಇನ್ನು ಸೆಪ್ಟೆಂವರ್ 10ರಿಂದ ಭಾರತ ಹಾಗೂ ಇಂಗ್ಲೆಂಡ್‌ ನಡುವೆ 5ನೇ ಹಾಗೂ ಕೊನೆಯ ಟೆಸ್ಟ್‌ ಮ್ಯಾಂಚೆಸ್ಟರ್‌ನಲ್ಲಿ ಆರಂಭಗೊಳ್ಳಲಿದೆ.

click me!