
ನವದೆಹಲಿ(ಸೆ.05): ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 4ನೇ ಟೆಸ್ಟ್ ಪಂದ್ಯ ಗೆದ್ದು ಬೀಗಿದೆ. ಕೊಹ್ಲಿ ಸೈನ್ಯದ ಗೆಲುವಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನ ಹಾಗೂ ಟೀಂ ಇಂಡಿಯಾ ಗೆಲುವಿಗೆ ಜೊತೆಜೊತೆಯಾಗಿ ಅಭಿನಂದನೆ ಸಲ್ಲಿಸಿದ್ದದಾರೆ.
ಇಂಗ್ಲೆಂಡ್ ಬಗ್ಗುಬಡಿದ ಟೀಂ ಇಂಡಿಯಾ; ಓವಲ್ ಟೆಸ್ಟ್‌ನಲ್ಲಿ ಕೊಹ್ಲಿ ಸೈನ್ಯಕ್ಕೆ 157 ರನ್ ಗೆಲುವು!
ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಲಸಿಕಾ ಅಭಿಯಾನ ದಿನ ದಿನಕ್ಕೆ ಹೊಸ ಹೊಸ ದಾಖಲೆ ಬರೆಯುತ್ತಿದೆ. ಲಸಿಕಾ ಅಭಿಯಾನದ ವೇಗ ಹಾಗೂ ಟೀಂ ಇಂಡಿಯಾದ ಭರ್ಜರಿ ಗೆಲುವಿಗೆ ಸುಂದರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಂದು ಅತ್ಯುತ್ತಮ ದಿನ. ಒಂದೆಡೆ ಲಸಿಕಾ ಅಭಿಯಾನದಲ್ಲಿ ದಾಖಲೆ ಮತ್ತೊಂದೆಡೆ ಕ್ರಿಕೆಟ್ ಪಿಚ್‌ನಲ್ಲಾ ಸಾಧನೆ. ಯಾವತ್ತೂ ಟೀಂ ಇಂಡಿಯಾ ಗೆಲ್ಲುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇಂದು(ಸೆ.06) ಭಾರತ ಮತ್ತೆ 1 ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ದಾಖಲೆ ಬರೆದಿದೆ. ಕಳೆದ 11 ದಿನದಲ್ಲಿ ಇದೀಗ 3ನೇ ಬಾರಿ ಭಾರತ ಒಂದೇ 1 ಕೋಟಿ ಲಸಿಕೆ ದಾಟಿದೆ. ಇಂದು ಭಾರತ 1,05,76,911 ಡೋಸ್ ಹಾಕಿದೆ. ಈ ಸಾಧನೆ ಹಾಗೂ ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತ್ರೀವ್ ಹಿನ್ನಡೆ ಅನುಭವಿಸಿ, ಫೀನಿಕ್ಸ್‌ನಂತೆ ಎದ್ದುಬಂತು ಗೆಲುವು ಸಾಧಿಸಿದ ಟೀಂ ಇಂಡಿಯಾವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ಓವಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ 368 ರನ್ ಟಾರ್ಗೆಟ್ ಬೆನ್ನಟ್ಟಲು ವಿಫಲವಾದ ಇಂಗ್ಲೆಂಡ್ 210 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 157 ರನ್ ಭರ್ಜರಿ ಗೆಲುವಿನೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.