ಟೆಸ್ಟ್‌ ವಿಶ್ವಕಪ್‌: ಬಾಂಗ್ಲಾ ಮಣಿಸಿ 2ನೇ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

By Kannadaprabha NewsFirst Published Dec 19, 2022, 8:37 AM IST
Highlights

ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ಎದುರು ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ
188 ರನ್‌ಗಳ ಅಂತರದ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

ದುಬೈ(ಡಿ.19) ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಸದ್ಯ ಭಾರತ ಶೇ.55.77 ಗೆಲುವಿನ ಪ್ರತಿಶತದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದು, ಇನ್ನುಳಿದ 5 ಪಂದ್ಯಗಳನ್ನು ಗೆದ್ದು ಫೈನಲ್‌ಗೇರುವ ನಿರೀಕ್ಷೆಯಲ್ಲಿದೆ. ಆಸ್ಪ್ರೇಲಿಯಾ ವಿರುದ್ಧ ದ.ಆಫ್ರಿಕಾ ಸೋತಿದ್ದು ಭಾರತಕ್ಕೆ ಅಂಕಪಟ್ಟಿಯಲ್ಲಿ ಮೇಲೇರಲು ನೆರವಾಯಿತು.

ಭಾರತಕ್ಕೆ 188 ರನ್‌ ಗೆಲುವು!

ಚಿತ್ತಗಾಂಗ್‌: ಕುಲ್ದೀಪ್‌ ಯಾದವ್‌ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 188 ರನ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು. 2ನೇ ಟೆಸ್ಟ್‌ ಪಂದ್ಯ ಡಿ.22ಕ್ಕೆ ಢಾಕಾದಲ್ಲಿ ಆರಂಭವಾಗಲಿದ್ದು, ಭಾರತ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.

513 ರನ್‌ ಗುರಿ ಬೆನ್ನತ್ತಿ 4ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 272 ರನ್‌ ಕಲೆ ಹಾಕಿದ್ದ ಬಾಂಗ್ಲಾ, ಭಾನುವಾರ 241 ರನ್‌ ಗಳಿಸಬೇಕಿತ್ತು. ಆದರೆ ತಂಡ ಮೊದಲ ಅವಧಿಯಲ್ಲೇ 324ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಭಾರತೀಯ ಬೌಲರ್‌ಗಳು ಕೊನೆ ದಿನ ಕೇವಲ 11.2 ಓವರಲ್ಲಿ ಆತಿಥೇಯ ಬ್ಯಾಟರ್‌ಗಳನ್ನು ಆಲೌಟ್‌ ಮಾಡಿದರು. 40 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ನಾಯಕ ಶಕೀಬ್‌ ವೇಗವಾಗಿ ಬ್ಯಾಟ್‌ ಬೀಸಿದರು. 108 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್‌ ಒಳಗೊಂಡ 84 ರನ್‌ ಸಿಡಿಸಿದ ಅವರನ್ನು ಕುಲ್ದೀಪ್‌ ಬೌಲ್ಡ್‌ ಮಾಡಿದರು. ಶಕೀಬ್‌ ನಿರ್ಗಮನದ ಬೆನ್ನಲ್ಲೇ ಬಾಂಗ್ಲಾ ಸರ್ವಪತನ ಕಂಡಿತು. ಅಕ್ಷರ್‌ ಪಟೇಲ್‌ 4, ಕುಲ್ದೀಪ್‌ 3 ವಿಕೆಟ್‌ ಪಡೆದರು. ಮೊದಲ ಇನ್ನಿಂಗ್‌್ಸನಲ್ಲಿ ಆಕರ್ಷಕ 40 ರನ್‌ ಸಿಡಿಸಿ, ಪಂದ್ಯದಲ್ಲಿ 113 ರನ್‌ಗೆ 8 ವಿಕೆಟ್‌ ಪಡೆದ ಕುಲ್ದೀಪ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IND vs BAN ಬಾಂಗ್ಲಾಗೆ ಆಸರೆಯಾದ ಶಕೀಬ್, ಭಾರತದ ಗೆಲುವಿಗೆ ಬೇಕಿದೆ 4 ವಿಕೆಟ್!

ಸ್ಕೋರ್‌: ಭಾರತ 404/10 ಮತ್ತು 258/2 ಡಿ., 
ಬಾಂಗ್ಲಾ 150/10 ಮತ್ತು 324/10(ಶಕೀಬ್‌ 84, ಅಕ್ಷರ್‌ 4-77, ಕುಲ್ದೀಪ್‌ 3-73)

3ನೇ ಟೆಸ್ಟ್‌: ಪಾಕ್‌ ವಿರುದ್ಧ ಇಂಗ್ಲೆಂಡ್‌ ಇನ್ನಿಂಗ್ಸ್‌ ಲೀಡ್‌

ಕರಾಚಿ(ಡಿ.19): ಪಾಕಿಸ್ತಾನ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಇನ್ನಿಂಗ್‌್ಸ ಮುನ್ನಡೆ ಪಡೆದಿದೆ. ಪಾಕ್‌ನ 304 ರನ್‌ಗೆ ಉತ್ತರವಾಗಿ ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಭಾನುವಾರ 354ಕ್ಕೆ ಆಲೌಟಾಗಿ 50 ರನ್‌ ಮುನ್ನಡೆ ಪಡೆಯಿತು. 145ಕ್ಕೆ 5 ವಿಕೆಟ್‌ ಕಳೆದುಕೊಂಡ ಬಳಿಕ ಹ್ಯಾರಿ ಬ್ರೂಕ್‌-ಬೆನ್‌ ಫೋಕ್ಸ್‌ 6ನೇ ವಿಕೆಟ್‌ಗೆ 117 ರನ್‌ ಜೊತೆಯಾಟವಾಡಿದರು. ಸತತ 3ನೇ ಪಂದ್ಯದಲ್ಲೂ ಶತಕ ಬಾರಿಸಿದ 23 ವರ್ಷದ ಬ್ರೂಕ್‌ 111 ರನ್‌ ಗಳಿಸಿದರು. ಫೋಕ್ಸ್‌ 64, ಪೋಪ್‌ 51 ರನ್‌ ಕೊಡುಗೆ ನೀಡಿದರು. 2ನೇ ಇನ್ನಿಂಗ್‌್ಸ ಆರಂಭಿಸಿರುವ ಪಾಕ್‌ 2ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 21 ರನ್‌ ಗಳಿಸಿದ್ದು, 29 ರನ್‌ ಹಿನ್ನಡೆಯಲ್ಲಿದೆ.

ಟೆಸ್ಟ್‌: ಎರಡೇ ದಿನದಲ್ಲಿ ಆಸೀಸ್‌ಗೆ ಶರಣಾದ ಆಫ್ರಿಕಾ

ಬ್ರಿಸ್ಬೇನ್‌: ಆಸ್ಪ್ರೇಲಿಯಾ-ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ ಎರಡೇ ದಿನದಲ್ಲಿ ಮುಕ್ತಾಯಗೊಂಡಿದ್ದು, ಆಸೀಸ್‌ 6 ವಿಕೆಟ್‌ ಗೆಲುವು ಸಾಧಿಸಿತು. ಗೆಲುವಿಗೆ 34 ರನ್‌ ಗುರಿ ಪಡೆದ ಆಸೀಸ್‌ 4 ವಿಕೆಟ್‌ ಕಳೆದುಕೊಂಡಿತು. ಇದರಲ್ಲಿ 19 ರನ್‌ ಇತರೆ ರೂಪದಲ್ಲಿ ದೊರೆತಿದ್ದು ಗಮನಾರ್ಹ. 2ನೇ ದಿನ ಒಟ್ಟು 19 ವಿಕೆಟ್‌ ಪತನಗೊಂಡವು. ದ.ಆಫ್ರಿಕಾವನ್ನು 115ಕ್ಕೆ ಆಲೌಟ್‌ ಮಾಡಿ ಮೊದಲ ದಿನ 5 ವಿಕೆಟ್‌ಗೆ 145 ರನ್‌ ಗಳಿಸಿದ್ದ ಆಸೀಸ್‌, ಭಾನುವಾರ 218ಕ್ಕೆ ಆಲೌಟಾಯಿತು. ಹೆಡ್‌(92) ಶತಕ ವಂಚಿತರಾದರು. ಬಳಿಕ 2ನೇ ಇನ್ನಿಂಗ್ಸಲ್ಲೂ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ ದ.ಆಫ್ರಿಕಾ ಕೇವಲ 99 ರನ್‌ಗೆ ಸರ್ವಪತನ ಕಂಡಿತು. ಕಮಿನ್ಸ್‌ 5 ವಿಕೆಟ್‌ ಪಡೆದರು.

click me!