IND vs BAN ಬಾಂಗ್ಲಾಗೆ ಆಸರೆಯಾದ ಶಕೀಬ್, ಭಾರತದ ಗೆಲುವಿಗೆ ಬೇಕಿದೆ 4 ವಿಕೆಟ್!

By Suvarna NewsFirst Published Dec 17, 2022, 4:29 PM IST
Highlights

ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಬಾಂಗ್ಲಾದೇಶ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಆತಂಕ ಹೆಚ್ಚಿಸಿತ್ತು. ಆದರೆ ದಿನದಾಟದ ಅಂತ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಟೆಸ್ಟ್ ಕುತೂಹಲಕ್ಕೆ ಅಂತಿಮ ದಿನದಲ್ಲಿ ಉತ್ತರ ಸಿಗಲಿದೆ.

ಚಿತ್ತಗಾಂಗ್(ಡಿ.17) ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಇದೀಗ ಮತ್ತಷ್ಟು ರೋಚಕ ಘಟ್ಟಕ್ಕೆ ತಲುಪಿದೆ. ನಾಲ್ಕನೇ ದಿನದಾಟದಲ್ಲಿ ಬಾಂಗ್ಲಾದೇಶ ಬ್ಯಾಟಿಂಗ್ ಮೂಲಕ ಅಬ್ಬರಿಸಿದೆ. ಈ ಮೂಲಕ ಟೀಂ ಇಂಡಿಯಾದ ಸುಲಭ ಗೆಲುವಿನ ಲೆಕ್ಕಾಚಾರಕ್ಕೆ ಬ್ರೇಕ್ ಹಾಕಿದೆ. ಇದೀಗ ಶಕೀಬ್ ಅಲ್ ಹಸನ್ ಹಾಗೂ ಮಹೆದಿ ಹಸನ್ ಬಾಂಗ್ಲಾದೇಶ ತಂಡಕ್ಕೆ ಆಸರೆಯಾಗಿದ್ದಾರೆ. ಹೀಗಾಗಿ ಅಂತಿಮ ದಿನಾದಟದಲ್ಲಿ ಫಲಿತಾಂಶ ಯಾವ ಕಡೆಗೂ ವಾಲುವ ಸಾಧ್ಯತೆ ಇದೆ. ಭಾರತದ ಗೆಲುವಿಗೆ ಇನ್ನು 4 ವಿಕೆಟ್ ಬೇಕಿದೆ. ಇತ್ತ ಬಾಂಗ್ಲಾದೇಶಕ್ಕೆ 241 ರನ್ ಅವಶ್ಯಕತೆ ಇದೆ. 

4ನೇ ದಿನದಾಟದಲ್ಲಿ ಬಾಂಗ್ಲಾದೇಶ ದಿಟ್ಟ ಹೋರಾಟ ಟೀಂ ಇಂಡಿಯಾವನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿತು. ಕಾರಣ ಜಾಕೀರ್ ಹಸನ್ ಶತಕ ಹಾಗೂ ನಜ್ಮುಲ್ ಹೊಸೈನ್ ಹಾಫ್ ಸೆಂಚುರಿ ಬಾಂಗ್ಲಾದೇಶ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. 4ನೇ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾದೇಶಕ್ಕೆ ಆರಂಭಿಕರಾದ ನಜ್ಮುಲ್ ಹೊಸೈನ್ ಹಾಗೂ ಜಾಕಿರ್ ಹಸನ್ ಜೊತೆಯಾಟ ನೆರವಾಯಿತು. 513 ರನ್ ಟಾರ್ಗೆಟ್ ಚೇಸ್ ಮಾಡಲೇ ಬೇಕು ಅನ್ನೋ ಹಠದಲ್ಲಿ ಬ್ಯಾಟ್ ಬೀಸಿದರು. 

BLIND CRICKET ಬಾಂಗ್ಲಾದೇಶ ಮಣಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾ!

ನಜ್ಮುಲ್ ಹೊಸೈನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ನಜ್ಮುಲ್ 67 ರನ್ ಸಿಡಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಪಡೆದ ಟೀಂ ಇಂಡಿಯಾ ದಾಳಿಯನ್ನು ಚುರುಕುಗೊಳಿಸಿತು. ಇದರ ಪರಿಣಾಮ ಯಾಸಿರ್ ಆಲಿ ಹಾಗೂ ಲಿಟ್ಟನ್ ದಾಸ್ ವಿಕೆಟ್ ಬಹುಬೇಗ ಪತನಗೊಂಡಿತು. ಯಾಸಿರ್ ಆಲಿ ಕೇವಲ 5 ರನ್ ಸಿಡಿಸಿದರೆ, ಲಿಟ್ಟನ್ ದಾಸ್ 19 ರನ್ ಸಿಡಿಸಿ ಔಟಾದರು.

ಇತ್ತ ಜಾಕಿರ್ ಹಸನ್ ದಿಟ್ಟ ಹೋರಾಟದ ಮೂಲಕ ಸೆಂಚುರಿ ಸಿಡಿಸಿದರು. ಜಾಕಿರ್ ಸೆಂಚುರಿಯಿಂದ ಬಾಂಗ್ಲಾದೇಶ ರನ್ ಚೇಸ್ ಟ್ರ್ಯಾಕ್‌ನಲ್ಲೇ ಸಾಗಿತು. ಶತಕ ಸಿಡಿಸಿದ ಬೆನ್ನಲ್ಲೇ ಜಾಕಿರ್ ಹಸನ್ ವಿಕೆಟ್ ಪತನಗೊಂಡಿತು. ಇತ್ತ ಮುಶ್ಫಿಕರ್ ರಹೀಮ್ 23 ರನ್ ಸಿಡಿಸಿ ಔಟಾದರು. ನೂರುಲ್ ಹಸನ್ 3 ರನ್ ಸಿಡಿಸಿ ಔಟಾದರು. ವಿಕೆಟ್ ಪತನದಿಂದ ಆತಂಕಗೊಂಡ ಬಾಂಗ್ಲಾದೇಶ ತಂಡಕ್ಕೆ ನಾಯಕ ಶಕೀಬ್ ಅಲ್ ಹಸನ್ ಆಸರೆಯಾದರು. ಮೆಹದಿ ಹಸನ್ ಜೊತೆ ಸೇರಿಕೊಂಡು ತಂಡಕ್ಕೆ ಚೇತರಿಸಿಕೆ ನೀಡಿದರು.

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತ, 15 ರನ್‌ಗೆ ಸಿಡ್ನಿ ಥಂಡರ್ ಆಲೌಟ್!

ಶಕೀಬ್ ಅಲ್ ಹಸನ್ ಅಜೇಯ 40 ರನ್ ಸಿಡಿಸಿದರೆ, ಮೆಹದಿ ಹಸನ್ 9 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಬಾಂಗ್ಲಾದೇಶ 4ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸಿದೆ. ಇದೀಗ ಬಾಂಗ್ಲಾ ಗೆಲಿವಿಗೆ 241 ರನ್ ಅವಶ್ಯಕತೆ ಇದೆ. ಆದರೆ ಉಳಿದಿರುವ 4 ವಿಕೆಟ್ ಮಾತ್ರ. ಇತ್ತ ಟೀಂ ಇಂಡಿಯಾ ಶಕೀಬ್ ಹಾಗೂ ಹಸನ್ ಜೋಡಿ ಜೊತೆಯಾಟಕ್ಕೆ ಬ್ರೇಕ್ ಹಾಕಿ ಅದಷ್ಟು ಬೇಗ ಪಂದ್ಯ ಗೆಲ್ಲುವ ತವಕದಲ್ಲಿದೆ.

ಬಾಂಗ್ಲಾದೇಶಕ್ಕೆ 513 ರನ್ ಟಾರ್ಗೆಟ್
ಎರಡನೇ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ್‌ ಪೂಜಾರ, ಶುಭ್‌ಮನ್‌ ಗಿಲ್‌ ಆಕರ್ಷಕ ಶತಕದ ನೆರವಿನಿಂದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶಕ್ಕೆ 513 ರನ್‌ ಗುರಿ ನೀಡಿದೆ. ಟೆಸ್ಟ್‌ ತಂಡದಿಂದ ಹೊರಬಿದ್ದು ಆ ಬಳಿಕ ಇಂಗ್ಲೆಂಡ್‌ ಕೌಂಟಿಯಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ವಾಪಸಾಗಿದ್ದ ಪೂಜಾರ ಶತಕದ ಬರ ನೀಗಿಸಿಕೊಂಡಿದ್ದಾರೆ. 1443 ದಿನ, 52 ಇನ್ನಿಂಗ್ಸ್‌ಗಳ ಬಳಿಕ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದಾರೆ. 130 ಎಸೆತಗಳಲ್ಲಿ 100 ರನ್‌ ಪೂರೈಸಿದ ಪೂಜಾರ, ಟೆಸ್ಟ್‌ನಲ್ಲಿ ತಮ್ಮ ವೇಗದ ಶತಕ ದಾಖಲಿಸಿದರು.

click me!