ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸತತ ಕ್ರಿಕೆಟ್ ಆಡಿ ಬಳಲಿದ್ದು, ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಅ.20]: ನ.3ರಿಂದ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ರಾಂಚಿ ಟೆಸ್ಟ್: ಹರಿಣಗಳಿಗೆ ಆರಂಭಿಕ ಆಘಾತ
undefined
ಕಳೆದ ಅಕ್ಟೋಬರ್‌ನಿಂದ ಭಾರತ ಆಡಿದ 56 ಪಂದ್ಯಗಳ ಪೈಕಿ ಕೊಹ್ಲಿ 48 ಪಂದ್ಯಗಳಲ್ಲಿ ಆಡಿದ್ದು, ಅವರಿಗೆ ವಿಶ್ರಾಂತಿ ಅಗತ್ಯವೆನಿಸಿದೆ. ಬಾಂಗ್ಲಾ ವಿರುದ್ಧ ಸರಣಿಗೆ ಅ.24ರಂದು ಭಾರತ ತಂಡದ ಆಯ್ಕೆ ನಡೆಯಲಿದ್ದು, ರೋಹಿತ್ ಶರ್ಮಾ ಹೆಗಲಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗುತ್ತದೆ ಎನ್ನಲಾಗಿದೆ.
ಇಂದಿನಿಂದ ಐಎಸ್‌ಎಲ್ ಫುಟ್ಬಾಲ್ ಟೂರ್ನಿ ಆರಂಭ
ನ.3ಕ್ಕೆ ಡೆಲ್ಲಿ, ನ.7ಕ್ಕೆ ರಾಜ್‌ಕೋಟ್ ಹಾಗೂ ನ.10ಕ್ಕೆ ನಾಗ್ಪುರದಲ್ಲಿ ಪಂದ್ಯಗಳು ನಡೆಯಲಿವೆ. ಟಿ20 ಸರಣಿ ಬಳಿಕ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಆ ಸರಣಿಗೆ ಕೊಹ್ಲಿ ತಂಡಕ್ಕೆ ವಾಪಸಾಗಲಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ