ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಭಾವುಕ ಪೋಸ್ಟ್..!

By Kannadaprabha News  |  First Published Jul 10, 2024, 11:18 AM IST

ಐಸಿಸಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಟೀಂ ಇಂಡಿಯಾವನ್ನು ಸಜ್ಜುಗೊಳಿಸಿದ ರಾಹುಲ್ ದ್ರಾವಿಡ್ ಅವರ ಕುರಿತಂತೆ ರೋಹಿತ್ ಶರ್ಮಾ ಸೋಷಿಯಲ್ ಮೀಡಿಯಾ ಮೂಲಕ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಮಾಜಿ ಕೋಚ್ ದ್ರಾವಿಡ್ ಬಗ್ಗೆ ನಾಯಕ ರೋಹಿತ್ ಶರ್ಮಾ ಇನ್ ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿ ಕೊಂಡಿದ್ದು, ನಾವು ಒಟ್ಟಿಗೇ ವಿಶ್ವಕಪ್ ಗೆದ್ದಿದ್ದು ನನ್ನ ಅದೃಷ್ಟ ಎಂದು ಬಣ್ಣಿಸಿದ್ದಾರೆ. 

'ಪ್ರೀತಿಯ ದ್ರಾವಿಡ್, ನಾನು ಎಲ್ಲರಂತೆ ನಿಮ್ಮ ಕ್ರಿಕೆಟ್ ನೋಡುತ್ತಲೇ ಬೆಳೆದಿದ್ದೇನೆ. ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ನೀವು ಅಪಾರ ಸಾಧನೆ ಮಾಡಿದ್ದೀರಿ. ಆದರೆ ಅದೆಲ್ಲವನ್ನೂ ಪಕ್ಕಕ್ಕಿಟ್ಟು ನಮ್ಮೊಂದಿಗೆ ಕೋಚ್ ಆಗಿ ಕೆಲಸ ಮಾಡಲು ಬಂದಿದ್ದೀರಿ. ಅದು ನಮಗೆ ಸಿಕ್ಕ ದೊಡ್ಡ ಕೊಡುಗೆ. ನೀವು ನನ್ನ ಕೆಲಸದ ವೈಫ್ ಎಂದು ನನ್ನ ಹೆಂಡತಿ ಕಾಲೆಳೆಯುತ್ತಾಳೆ. ಹಾಗೆ ಕರೆಸಿಕೊಳ್ಳುವುದಲ್ಲಿ ನನಗೆ ಸಂತೋಷವಿದೆ' ಎಂದಿದ್ದಾರೆ.

 
 
 
 
 
 
 
 
 
 
 
 
 
 
 

Tap to resize

Latest Videos

undefined

A post shared by Rohit Sharma (@rohitsharma45)

ಇಂದು 3ನೇ ಟಿ20 ಮ್ಯಾಚ್: ಜಿಂಬಾಬ್ವೆ ವಿರುದ್ಧ ಸರಣಿ ಮುನ್ನಡೆಗೆ ಯಂಗ್‌ ಇಂಡಿಯಾ ಕಾತರ

ದಶಕದ ಬಳಿಕ ಟ್ರೋಫಿ ಬರ ನೀಗಿಸಿಕೊಂಡ ಭಾರತ: ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಪದೇ ಪದೇ ಐಸಿಸಿ ಟ್ರೋಫಿ ಗೆಲ್ಲಲು ಭಾರತ ತಂಡವು ಎಡವುತಿತ್ತು. ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಟಿ20 ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗುವ ಮೂಲಕದ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು.

ಜೇಮ್ಸ್‌ ಆ್ಯಂಡರ್‌ಸನ್‌ ಆಡಲಿರುವ ಕೊನೆ ಟೆಸ್ಟ್‌ ಇಂದು ಶುರು

ಲಾರ್ಡ್ಸ್‌: ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿರುವ ದಿಗ್ಗಜ ವೇಗಿ ಜೇಮ್ಸ್ ಆ್ಯಂಡರ್‌ಸನ್‌ ಇಂಗ್ಲೆಂಡ್‌ ಪರ ಕೊನೆ ಬಾರಿ ಟೆಸ್ಟ್‌ ಆಡಲು ಸಜ್ಜಾಗಿದ್ದು, ಬುಧವಾರದಿಂದ ಲಾರ್ಡ್ಸ್‌ನಲ್ಲಿ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್‌ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯದೊಂದಿಗೆ ಆ್ಯಂಡರ್‌ಸನ್‌ರ 22 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ತೆರೆ ಬೀಳಲಿದೆ.

ಟೀಂ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಘೋಷಿಸಿದ ಜಯ್ ಶಾ!

41 ವರ್ಷದ ಆ್ಯಂಡರ್‌ಸನ್‌ ಈ ವರೆಗೂ ಇಂಗ್ಲೆಂಡ್‌ ಪರ 187 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 700 ವಿಕೆಟ್‌ ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌ ಕಿತ್ತ ವೇಗಿಗಳ ಪೈಕಿ ಅಗ್ರಸ್ಥಾನ, ಒಟ್ಟಾರೆ ಟೆಸ್ಟ್‌ನ ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 2002ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಆ್ಯಂಡರ್‌ಸನ್‌, ಇಂಗ್ಲೆಂಡ್‌ ಪರ 2009ರಲ್ಲಿ ಕೊನೆ ಟಿ20, 2015ರಲ್ಲಿ ಕೊನೆ ಬಾರಿ ಏಕದಿನ ಪಂದ್ಯವಾಡಿದ್ದಾರೆ.

ಪಂದ್ಯ: ಮಧ್ಯಾಹ್ನ 3.30ಕ್ಕೆ ಆರಂಭ(ಭಾರತೀಯ ಕಾಲಮಾನ)

ಬುಮ್ರಾ, ಸ್ಮೃತಿ ಜೂನ್ ತಿಂಗಳ ಶ್ರೇಷ್ಠ ಕ್ರಿಕೆಟರ್ಸ್‌

ದುಬೈ: ಭಾರತ ತಾರಾ ಕ್ರಿಕೆಟಿಗರಾದ ಜಸ್‌ಪ್ರೀತ್‌ ಬುಮ್ರಾ ಹಾಗೂ ಸ್ಮೃತಿ ಮಂಧನಾ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಐಸಿಸಿ ಜೂನ್‌ ತಿಂಗಳ ಶ್ರೇಷ್ಠ ಕ್ರಿಕೆಟಿಗರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಮೊದಲ ಬಾರಿ ಒಂದೇ ದೇಶದ ಇಬ್ಬರು ಒಟ್ಟಿಗೇ ಶ್ರೇಷ್ಠ ಕ್ರಿಕೆಟರ್ಸ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ವಿಶ್ವಕಪ್‌ನಲ್ಲಿ ತೋರಿದ ಅಮೋಘ ಪ್ರದರ್ಶನದಿಂದಾಗಿ ಬುಮ್ರಾ ಅವರು ರೋಹಿತ್‌ ಶರ್ಮಾ ಹಾಗೂ ಅಫ್ಘಾನಿಸ್ತಾನದ ರಹ್ಮಾನುಲ್ಲಾ ಗುರ್ಬಾಜ್‌ರನ್ನು ಹಿಂದಿಕ್ಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅತ್ತ ಸ್ಮೃತಿ ಅವರು ಇಂಗ್ಲೆಂಡ್‌ನ ಮೈಯಾ ಬೌಷಿರ್ ಹಾಗೂ ಶ್ರೀಲಂಕಾದ ವಿಶ್ಮಿ ಗುಣರತ್ನೆಯನ್ನು ಹಿಂದಿಕ್ಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

click me!