
ನವದೆಹಲಿ[ಫೆ.04]: ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಪುಟ್ಟ ಕಂದನ ಆಗಮನವಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಮೊಹಮ್ಮದ್ ಶಮಿ ತನ್ನ ಅಭಿಮಾನಿಗಳೊಂದಿಗೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಅಲ್ಲದೇ ಪುಟ್ಟ ರಾಜಕುಮರಿಗೆ ಆದರದ ಸ್ವಾಗತ ಕೋರಿದ್ದಾರೆ.
ಹೌದು ಸದ್ಯ ಕಿವೀಸ್ ಪ್ರವಾಸದಲ್ಲಿರುವ ಮೊಹಮ್ಮದ್ ಶಮಿ ಪುಟ್ಟ ಕಂದಮ್ಮನ ಫೋಟೋ ಟ್ವೀಟ್ ಮಾಡುತ್ತಾ 'ನಮ್ಮ ಕುಟುಂಬಕ್ಕೆ ಮತ್ತೊಂದು ಹೆಣ್ಮಗುವಿನ ಆಗಮನವಾಗಿದೆ. ರಾಜಕುಮಾರೀ ನಿನಗೆ ಆದರದ ಸ್ವಾಗತ. ಅಣ್ಣನ ಕುಟುಂಬಕ್ಕೆ ಅಭಿನಂದನೆಗಳು' ಎಂದು ಬರೆದಿದ್ದಾರೆ.
ಮೊಹಮ್ಮದ್ ಶಮಿ ಪತ್ನಿ ಅರೆಸ್ಟ್- ಹಸೀನಾ ಜಹಾನ್ ಬದುಕಲ್ಲಿ ಹೊಸ ಟ್ವಿಸ್ಟ್!
ಇತ್ತೀಚೆಗಷ್ಟೇ ಮಗಳ ಫೋಟೋ ಶೇರ್ ಮಾಡಿಕೊಂಡಿದ್ದ ಶಮಿ
ಇತ್ತೀಚೆಗಷ್ಟೇ ಶಮಿ ತನ್ನ ಮಗಳ ಫೋಟೋ ಶೇರ್ ಮಾಡಿಕೊಂಡಿದ್ದರು. ಈ ವೇಳೆ ನೀನು ತುಂಬಾ ಮುದ್ದಾಗಿ ಕಾಣಿಸುತ್ತೀ ಮಗಳೇ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಭಗವಂತ ನಿನಗೆ ಒಳ್ಳೆದು ಮಾಡಲಿ. ಮುದ್ದಿನ ಮಗಳೇ ಶೀಘ್ರದಲ್ಲೇ ಬರುತ್ತೇನೆ' ಎಂದು ಬರೆದಿದ್ದರು. ಈ ಫೋಟೋ ಭಾರೀ ವೈರಲ್ ಆಗಿತ್ತು.
ಹೆಂಡತಿ ಹಸೀನಾ ಜಹಾಂ ಜೊತೆ ವಿವಾದ
ಶಮಿ ಹೆಂಡತಿ ಹಸೀನಾ ಜಹಾಂ ತನ್ನ ಗಂಡನ ವಿರುದ್ಧ ಫಿಕ್ಸಿಂಗ್ ಹಾಗೂ ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಇದೆ ಎಂಬ ಆರೋಪವೆಸಗಿದ್ದರು. ಅಲ್ಲದೇ ಶಮಿ ಅಣ್ಣನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು.
ಪೂಜೆ ಮಾಡಿದ ಮೊಹಮ್ಮದ್ ಶಮಿ ಪುತ್ರಿ, ಮುಸ್ಲಿಂ ಸಂಪ್ರದಾಯವಾದಿಗಳು ಗರಂ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.