15ರಲ್ಲಿ 13 ಇನ್ನಿಂಗ್ಸ್ನಲ್ಲಿ ತಿಲಕ್, ದೊಡ್ಡ ಇನ್ನಿಂಗ್ಸ್ ಆಡಿಯೇ ಇಲ್ಲ. ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಹಾಫ್ ಸೆಂಚುರಿ ಬಾರಿಸಿದ್ದೇ ಇವರ ಬಿಗ್ ಇನ್ನಿಂಗ್ಸ್. ಉಳಿದವೆಲ್ಲವೂ ಹೋದ ಪುಟ್ಟ ಬಂದ ಪುಟ್ಟ ಇನ್ನಿಂಗ್ಸ್ಗಳೇ. 10, 20, 30 ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಸಿದ್ದಾರೆ.
ಬೆಂಗಳೂರು(ಜ.13): ಈತ ಐಪಿಎಲ್‌ನಲ್ಲಿ ಅದ್ಭುತ ಬ್ಯಾಟರ್. ಮುಂಬೈ ಇಂಡಿಯನ್ಸ್ ತಂಡದ ಫಿನಿಶರ್ ಕೂಡ. ಆದ್ರೆ ಟೀಂ ಇಂಡಿಯಾದಲ್ಲಿ ಮಾತ್ರ ಈತನ ಆಟ ನಡೆಯುತ್ತಿಲ್ಲ. ಆರಂಭದಲ್ಲಿ ರನ್ ಹೊಡೆದರಾದ್ರೂ ಈಗೀಗ ಯಾಕೋ ಮಂಕಾಗಿದ್ದಾರೆ. ಚುಟುಕು ಇನ್ನಿಂಗ್ಸ್ಗಳೇ ಈತನಿಗೆ ಮಾರಕವಾಗಿವೆ.
ಟಿ20 ವಿಶ್ವಕಪ್‌ಗೆ ಸೆಲೆಕ್ಟ್ ಆಗೋದು ಡೌಟ್..!
ತಿಲಕ್ ವರ್ಮಾ, ಆಂಧ್ರಪ್ರದೇಶದ ಬ್ಯಾಟಿಂಗ್ ಆಲ್ರೌಂಡರ್.. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫಿನಿಶರ್. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಹೆಚ್ಚು ಸದ್ದು ಮಾಡದಿದ್ದರೂ ಕಲರ್ ಫುಲ್ ಟೂರ್ನಿಯಲ್ಲಿ ತಿಲಕ್ ಆರ್ಭಟ ಜೋರಾಗಿದೆ. ಮುಂಬೈ ಇಂಡಿಯನ್ಸ್ ರನ್ ಹೊಳೆಯನ್ನೇ ಹರಿಸಿದ್ರು. ಮುಂಬೈನ ನಯಾ ಫಿನಿಶರ್ ಎನಿಸಿಕೊಂಡಿರುವ ಹೈದ್ರಾಬಾದ್ ಹೈದ, ಐಪಿಎಲ್ ಪರ್ಫಾಮೆನ್ಸ್ನಿಂದ ಭಾರತ ಟಿ20 ತಂಡಕ್ಕೆ ಸೆಲೆಕ್ಟ್ ಆದ್ರು. ಸದ್ಯ ಅವರು ಟಿ20 ತಂಡದ ಖಾಯಂ ಮೆಂಬರ್.
ರಿಂಕು ಸಿಂಗ್ ಆರ್ಭಟದ ಹಿಂದೆ ಧೋನಿ ಮಾಸ್ಟರ್ ಮೈಂಡ್..!
15 ಇನ್ನಿಂಗ್ಸ್ನಿಂದ ಎರಡು ಅರ್ಧಶತಕ.. 3 ಇನ್ನಿಂಗ್ಸ್ನಲ್ಲಿ 2 ವಿಕೆಟ್..!
ಕಳೆದ ವರ್ಷ ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಆಡೋ ಮೂಲ್ಕ ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯು ಮಾಡಿದ ತಿಲಕ್, ಇದುವರೆಗೂ 16 ಟಿ20 ಮ್ಯಾಚ್ಗಳನ್ನಾಡಿದ್ದಾರೆ. 15 ಇನ್ನಿಂಗ್ಸ್ನಿಂದ 673 ರನ್ ಹೊಡೆದಿದ್ದಾರೆ. 139ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, 2 ಅರ್ಧಶತಕ ಬಾರಿಸಿದ್ದಾರೆ. 3 ಇನ್ನಿಂಗ್ಸ್ನಿಂದ ಐದು ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ 2 ವಿಕೆಟ್ ಸಹ ಪಡೆದಿದ್ದಾರೆ.
ಬಿಗ್ ಇನ್ನಿಂಗ್ಸ್ ಆಡುವಲ್ಲಿ ತಿಲಕ್ ವಿಫಲ
15ರಲ್ಲಿ 13 ಇನ್ನಿಂಗ್ಸ್ನಲ್ಲಿ ತಿಲಕ್, ದೊಡ್ಡ ಇನ್ನಿಂಗ್ಸ್ ಆಡಿಯೇ ಇಲ್ಲ. ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಹಾಫ್ ಸೆಂಚುರಿ ಬಾರಿಸಿದ್ದೇ ಇವರ ಬಿಗ್ ಇನ್ನಿಂಗ್ಸ್. ಉಳಿದವೆಲ್ಲವೂ ಹೋದ ಪುಟ್ಟ ಬಂದ ಪುಟ್ಟ ಇನ್ನಿಂಗ್ಸ್ಗಳೇ. 10, 20, 30 ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಸಿದ್ದಾರೆ. ಮೊನ್ನೆ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಯಲ್ಲೂ 26 ರನ್ ಗಳಿಸಿ ಔಟಾದ್ರು. ಇನ್ನೂ ಓವರ್ಗಳು ಬಾಕಿ ಇದ್ದರೂ, ಒಳ್ಳೆ ಇನ್ನಿಂಗ್ಸ್ ಆಡಲು ಅವಕಾಶವಿದ್ದರೂ ತಿಲಕ್ ವರ್ಮಾ ಮಾತ್ರ ಆತುರಕ್ಕೆ ಬಿದ್ದು ನಿರ್ಗಮಿಸಿದ್ರು.
ಜೂನಿಯರ್ ಯುವರಾಜ್ ಸಿಂಗ್ ನಮ್ಮ ಶಿವಂ ದುಬೆ.! ಧೋನಿ ಸೈನ್ಯ ಸೇರಿದ ನಂತರ ಬಯಲಾಯ್ತು ಅಸಲಿ ಟ್ಯಾಲೆಂಟ್..!
ಈ ಚುಟುಕು ಇನ್ನಿಂಗ್ಸ್ಗಳೇ ತಿಲಕ್ ವರ್ಮಾಗೆ ಮಾರಕವಾಗ್ತಿವೆ. ಮುಂಬರುವ ಟಿ20 ವರ್ಲ್ಡ್ಕಪ್ನಲ್ಲಿ ಆಡಬೇಕು ಅಂತ ಕನಸು ಕಾಣ್ತಿದ್ದ ತಿಲಕ್ಗೆ ಈಗ ನಿರಾಸೆಯಾಗುವ ಸಾಧ್ಯತೆ ದಟ್ಟವಾಗಿದೆ. ಅಫ್ಘನ್ ವಿರುದ್ಧ ಉಳಿದ ಎರಡು ಮ್ಯಾಚ್ ಸಹ ಆಡಲ್ಲ. ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ರಿಟರ್ನ್ ಆದ್ರೆ ತಿಲಕ್ ಕಿಕೌಟ್ ಆಗಲಿದ್ದಾರೆ. ಅಲ್ಲಿಗೆ ಅವರ ಟಿ20 ಕೆರಿಯರ್ ಸಹ ಸದ್ಯದ ಮಟ್ಟಿಗೆ ಸ್ಟಾಪ್ ಆಗಲಿದೆ.
ಐಪಿಎಲ್‌ನಲ್ಲಿ ಫಿನಿಶರ್, ಭಾರತದಲ್ಲಿ ಮಿಡಲ್ ಆರ್ಡರ್ ಬ್ಯಾಟರ್..!
ಐಪಿಎಲ್‌ನಲ್ಲಿ ಚುಟುಕು ಇನ್ನಿಂಗ್ಸ್ಗಳು ವರ್ಕ್ ಔಟ್ ಆಗ್ತಾವೆ. ಯಾಕಂದ್ರೆ ಅಲ್ಲಿ ತಿಲಕ್ ಆಡೋದು 5ನೇ ಕ್ರಮಾಂಕದಲ್ಲಿ. ಮ್ಯಾಚ್ ಫಿನಿಶ್ ಮಾಡೋದು ಅವಕ ಕೆಲಸ. ಆದ್ರೆ ಟೀಂ ಇಂಡಿಯಾ ಪರ ತಿಲಕ್ ಮಿಡಲ್ ಆರ್ಡರ್ ಬ್ಯಾಟರ್. ಇಲ್ಲಿ ತಂಡದ ಆಧಾರ ಸ್ಥಂಭವಾಗಬೇಕು. ಕ್ರೀಸಿಗೆ ಕಚ್ಚಿ ಆಡಬೇಕು. ಪಂದ್ಯವನ್ನೂ ಮುಗಿಸಬೇಕು. ಆಗ ಮಾತ್ರ ಟೀಂ ಇಂಡಿಯಾದಲ್ಲಿ ಪರ್ಮನೆಂಟ್ ಪ್ಲೇಸ್ ಆಗೋದು. ಒಟ್ನಲ್ಲಿ ಸಿಕ್ಕ ಅವಕಾಶವನ್ನ ತಿಲಕ್ ವರ್ಮಾ ಸದ್ಭಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಸದ್ಯದಲ್ಲೇ ಅವರು ಭಾರತ ಟಿ20 ತಂಡದಿಂದ ಕಿಕೌಟ್ ಆಗಲಿದ್ದಾರೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್