ಟೀಂ ಇಂಡಿಯಾಗೆ ಶಾಕ್: ಇಂಗ್ಲೆಂಡ್ ಎದುರಿನ ಕೊನೆ 3 ಟೆಸ್ಟ್‌ಗಿಲ್ಲ ಶ್ರೇಯಸ್‌ ಅಯ್ಯರ್?

By Kannadaprabha NewsFirst Published Feb 10, 2024, 8:37 AM IST
Highlights

ಕಳೆದ ವರ್ಷವಷ್ಟೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರಿಗೆ ತೊಂದರೆ ಮರುಕಳಿಸುವ ಸಂಭವವಿದೆ. ಕಳೆದ 2 ಟೆಸ್ಟ್‌ ಪಂದ್ಯಗಳಲ್ಲಿ ಅವರಿಂದ ಅಷ್ಟೇನು ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. 4 ಇನ್ನಿಂಗ್ಸ್‌ಗಳಲ್ಲಿ 35, 13, 27, 29 ರನ್‌ ಕಲೆಹಾಕಿದ್ದಾರೆ. ಈಗಾಗಲೇ ರವೀಂದ್ರ ಜಡೇಜಾ ಹಾಗೂ ಕೆ.ಎಲ್‌.ರಾಹುಲ್‌ ಗಾಯಗೊಂಡಿದ್ದು, 3ನೇ ಪಂದ್ಯಗಳಿಗೆ ಲಭ್ಯವಿರುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. 

ನವದೆಹಲಿ(ಫೆ.10): ಇಂಗ್ಲೆಂಡ್‌ ವಿರುದ್ಧದ ಮಹತ್ವದ ಟೆಸ್ಟ್‌ ಸರಣಿಯಲ್ಲಿ ಆಡುತ್ತಿರುವ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಬೆನ್ನು ಮತ್ತು ತೊಡೆ ನೋವಿನ ಕಾರಣದಿಂದ ಪ್ರಮುಖ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಕೊನೆ 3 ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

ಕಳೆದ ವರ್ಷವಷ್ಟೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರಿಗೆ ತೊಂದರೆ ಮರುಕಳಿಸುವ ಸಂಭವವಿದೆ. ಕಳೆದ 2 ಟೆಸ್ಟ್‌ ಪಂದ್ಯಗಳಲ್ಲಿ ಅವರಿಂದ ಅಷ್ಟೇನು ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. 4 ಇನ್ನಿಂಗ್ಸ್‌ಗಳಲ್ಲಿ 35, 13, 27, 29 ರನ್‌ ಕಲೆಹಾಕಿದ್ದಾರೆ. ಈಗಾಗಲೇ ರವೀಂದ್ರ ಜಡೇಜಾ ಹಾಗೂ ಕೆ.ಎಲ್‌.ರಾಹುಲ್‌ ಗಾಯಗೊಂಡಿದ್ದು, 3ನೇ ಪಂದ್ಯಗಳಿಗೆ ಲಭ್ಯವಿರುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. 

ರಣಜಿ ಆಡೆಂದ ಮುಖ್ಯ ಕೋಚ್‌ ದ್ರಾವಿಡ್‌ ಸೂಚನೆ ಮತ್ತೊಮ್ಮೆ ಧಿಕ್ಕರಿಸಿದ ಇಶಾನ್‌ ಐಪಿಎಲ್‌ಗಾಗಿ ಸಿದ್ಧತೆ!

ಅತ್ತ ವಿರಾಟ್‌ ಕೊಹ್ಲಿ ಕೂಡಾ ಸರಣಿಯಿಂದ ಹೊರಗುಳಿಯುವ ಬಗ್ಗೆ ಸುದ್ದಿಯಿದೆ. ಈ ನಡುವೆ ಶ್ರೇಯಸ್‌ ಅಯ್ಯರ್‌ ಕೂಡಾ ಗೈರಾದರೆ ಮಧ್ಯಮ ಕ್ರಮಾಂಕದಲ್ಲಿ ಭಾರತ ಅನುಭವ ಬ್ಯಾಟರ್‌ಗಳ ಕೊರತೆ ಎದುರಿಸಲಿದೆ. ಸರಣಿಯ ಕೊನೆ 3 ಪಂದ್ಯಗಳಿಗೆ ಬಿಸಿಸಿಐ ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ.

ಎಲ್ಲಾ 2 ಮಾದರಿ 100ನೇ ಪಂದ್ಯದಲ್ಲೂ ಪಂದ್ಯಶ್ರೇಷ್ಠ: ವಾರ್ನರ್‌ ವಿಶೇಷ ದಾಖಲೆ!

ಹೊಬಾರ್ಟ್: ಎಲ್ಲಾ ಮೂರು ಮಾದರಿ ಕ್ರಿಕೆಟ್‌ನ ತಮ್ಮ 100ನೇ ಪಂದ್ಯದಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾದ ತಾರಾ ಬ್ಯಾಟರ್‌ ಡೇವಿಡ್‌ ವಾರ್ನರ್ ವಿಶೇಷ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಟಿ20 ವಾರ್ನರ್‌ರ 100ನೇ ಟಿ20 ಪಂದ್ಯ. 70 ರನ್‌ ಸಿಡಿಸಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 

ಇದಕ್ಕೂ ಮುನ್ನ 2017ರಲ್ಲಿ ಬೆಂಗಳೂರಿನಲ್ಲಿ ಭಾರತ ವಿರುದ್ಧ 100ನೇ ಏಕದಿನ, 2022ರಲ್ಲಿ ಮೆಲ್ಬರ್ನ್‌ನಲ್ಲಿ ದ.ಆಫ್ರಿಕಾ ವಿರುದ್ಧ 100ನೇ ಟೆಸ್ಟ್‌ ಮೈಲಿಗಲ್ಲು ಸಾಧಿಸಿದ್ದರು. ಆ ಎರಡೂ ಪಂದ್ಯದಲ್ಲೂ ವಾರ್ನರ್‌ಗೆ ಪಂದ್ಯಶ್ರೇಷ್ಠ ಲಭಿಸಿತ್ತು. ವಾರ್ನರ್‌ 3 ಮಾದರಿಯಲ್ಲಿ ಕನಿಷ್ಠ 100 ಪಂದ್ಯಗಳನ್ನಾಡಿದ ವಿಶ್ವದ 3ನೇ ಕ್ರಿಕೆಟಿಗ. ವಿರಾಟ್‌ ಕೊಹ್ಲಿ, ನ್ಯೂಜಿಲೆಂಡ್‌ನ ರಾಸ್‌ ಟೇಲರ್‌ ಇತರ ಸಾಧಕರು.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಶ್ರೀಲಂಕಾ ಬ್ಯಾಟ್ಸ್‌ಮನ್‌ ಎನಿಸಿಕೊಂಡ ಪಥುಮ್‌ ನಿಸ್ಸಾಂಕ!

ವಾರ್ನರ್‌ 112 ಟೆಸ್ಟ್‌, 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನ್ಯೂಜಿಲೆಂಡ್‌ನ ರಾಸ್‌ ಟೇಲರ್‌ 112 ಟೆಸ್ಟ್‌, 236 ಏಕದಿನ, 102 ಟಿ20 ಪಂದ್ಯಗಳನ್ನಾಡಿದ್ದು, ಭಾರತದ ವಿರಾಟ್‌ ಕೊಹ್ಲಿ 113 ಟೆಸ್ಟ್‌, 292 ಏಕದಿನ, 117 ಟಿ20 ಆಡಿದ್ದಾರೆ.

ಶ್ರೀಲಂಕಾದ ನಿಸ್ಸಾಂಕ ಡಬಲ್‌ ಸೆಂಚುರಿ!

ಪಲ್ಲೆಕೆಲೆ: ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಪಥುಂ ನಿಸ್ಸಾಂಕ ದ್ವಿಶತಕ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ಹಾಗೂ ವಿಶ್ವದ 10ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ನಿಸ್ಸಾಂಕ ಕೇವಲ 139 ಎಸೆತಗಳಲ್ಲಿ 210 ರನ್‌ ಚಚ್ಚಿದರು. ಇದು ಪುರುಷರ ಏಕದಿನದಲ್ಲಿ ದಾಖಲಾದ 12ನೇ ದ್ವಿಶತಕ. ಈ ಮೊದಲು ಭಾರತದ ರೋಹಿತ್‌ ಶರ್ಮಾ(3 ಬಾರಿ), ಸಚಿನ್‌ ತೆಂಡುಲ್ಕರ್‌, ವಿರೇಂದ್ರ ಸೆಹ್ವಾಗ್‌, ಶುಭ್‌ಮನ್‌ ಗಿಲ್‌, ಇಶಾನ್‌ ಕಿಶನ್‌, ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌, ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್‌, ಪಾಕಿಸ್ತಾನದ ಫಾಖರ್‌ ಜಮಾನ್‌, ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ್ದರು.
 

click me!