3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಶಾಕ್, ಗಾಯಗೊಂಡಿರುವ ಅಯ್ಯರ್‌ ಡೌಟ್!

By Suvarna NewsFirst Published Feb 9, 2024, 2:27 PM IST
Highlights

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ. ವಿರಾಟ್ ಕೊಹ್ಲಿ ಲಭ್ಯತೆ ಸ್ಪಷ್ಟವಾಗಿಲ್ಲ, ಇತ್ತ ಶ್ರೇಯಸ್ ಅಯ್ಯರ್ ಕೂಜ ಗಾಯಗೊಂಡಿದ್ದು 3ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.
 

ರಾಜ್‌ಕೋಟ್(ಫೆ.09) ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆರಂಭಿಕ 2 ಟೆಸ್ಟ್ ಪಂದ್ಯದಲ್ಲಿ ಸಮಬಲದ ಹೋರಾಟ ಮೂಡಿಬಂದಿದೆ. ಮೊದಲ ಪಂದ್ಯ ಇಂಗ್ಲೆಂಡ್ ಗೆದ್ದುಕೊಂಡರೆ, 2ನೇ ಪಂದ್ಯ ಭಾರತ ಗೆದ್ದುಕೊಂಡಿದೆ. ಇದೀಗ 3ನೇ ಪಂದ್ಯ ಭಾರಿ ಮಹತ್ವ ಪಡೆದುಕೊಂಡಿದೆ. ಆದರೆ ಭಾರತ ತಂಡದಲ್ಲಿನ ಕೆಲ ಗಾಯದ ಸಮಸ್ಯೆ, ಕೆಲ ಆಟಗಾರರ ಲಭ್ಯತೆಯಿಂದ ತಂಡ ಇನ್ನೂ ಪ್ರಕಟಗೊಂಡಿಲ್ಲ. ಬಿಸಿಸಿಐ ತಂಡದ ಘೋಷಣೆ ವಿಳಂಬ ಮಾಡಿದೆ. ಈ ಬೆಳವಣಿಗೆ ನಡುವೆ ಪ್ರಮುಖ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದಾರೆ. ಹೀಗಾಗಿ 3ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

ಗಾಯಕ್ಕೆ ತುತ್ತಾಗಿರುವ ಶ್ರೇಯಸ್ ಅಯ್ಯರ್‌ಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ 3ನೇ ಟೆಸ್ಟ್ ಪಂದ್ಯದಿಂದ ಶ್ರೇಯಸ್ ಅಯ್ಯರ್ ಹೊರಗುಳಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಯ್ಯರ್ ಇದೀಗ 30 ಎಸೆತ ಎದುರಿಸುತ್ತಿದ್ದಂತೆ ಗಾಯದ ನೋವು ಕಾಣಿಸಿಕೊಳ್ಳುತ್ತಿದೆ. ಅಭ್ಯಾಸದ ವೇಳೆ ಈ ಸಮಸ್ಯೆ ಮತ್ತೆ ಕಾಣಿಸಿಕೊಂಡಿದ್ದು, ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿಗ ಸೂಚಿಸಿದ್ದಾರೆ.

ಕೊಹ್ಲಿ-ಅನುಷ್ಕಾ 2ನೇ ಮಗು ನಿರೀಕ್ಷೆ ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದೆ, ಎಬಿಡಿ ಯು ಟರ್ನ್!

ಇತ್ತ ಆರಂಭಿಕ 2 ಪಂದ್ಯದಿಂದ ಹೊರಗುಳಿದ ವಿರಾಟ್ ಕೊಹ್ಲಿ ಇದೀಗ 3 ಮತ್ತು 4ನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೊಹ್ಲಿ ಲಭ್ಯತೆ ಕುರಿತು ಯಾವುದೇ ಸ್ಪಷ್ಟನೆ ಬಂದಿಲ್ಲ. ಹೀಗಾಗಿ ಮುಂದಿನ 2 ಪಂದ್ಯದಲ್ಲೂ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೆ ಮಾ.6ಕ್ಕೆ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಕೊನೆ ಟೆಸ್ಟ್‌ಗೆ ಅವರು ತಂಡಕ್ಕೆ ಮರಳಬಹುದು ಎಂದು ವರದಿಯಾಗಿದೆ.

ಇನ್ನು ಗಾಯದಿಂದಾಗಿ ಕಳೆದ ಪಂದ್ಯಕ್ಕೆ ಗೈರಾಗಿದ್ದ ಕೆ.ಎಲ್‌.ರಾಹುಲ್‌ ಹಾಗೂ ರವೀಂದ್ರ ಜಡೇಜಾ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದು, ಸರಣಿಯ ಉಳಿದ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿದೆ. ಸಿರಾಜ್‌ ಕೂಡಾ ತಂಡಕ್ಕೆ ಮರಳುವ ನಿರೀಕ್ಷೆಯಿದೆ. 3ನೇ ಪಂದ್ಯ ಫೆ.15ರಿಂದ ರಾಜ್‌ಕೋಟ್‌ನಲ್ಲಿ ಆರಂಭಗೊಳ್ಳಲಿದೆ. ಅಜಿತ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇಂದು ತಂಡ ಪ್ರಕಟಿಸುವ ಸಾಧ್ಯತೆ ಇದೆ. ಆದರೆ ಆಟಗಾರರ ಇಂಜುರಿ ವರದಿ, ಲಭ್ಯತೆ ಕಾರಣದಿಂದ ತಂಡ ಆಯ್ಕೆ ವಿಳಂಬಾಗುತ್ತಿದೆ.

ರಣಜಿ ಆಡೆಂದ ಮುಖ್ಯ ಕೋಚ್‌ ದ್ರಾವಿಡ್‌ ಸೂಚನೆ ಮತ್ತೊಮ್ಮೆ ಧಿಕ್ಕರಿಸಿದ ಇಶಾನ್‌ ಐಪಿಎಲ್‌ಗಾಗಿ ಸಿದ್ಧತೆ!

click me!