
ಬೆಂಗಳೂರು(ಮೇ.09): 2021 ಹಾಗೂ 2022. ಈ ಎರಡು ವರ್ಷಗಳಲ್ಲಿ ಚೇಶೇಶ್ವರ್ ಪೂಜಾರ ಅನ್ನೋ ಟೆಸ್ಟ್ ಸ್ಪೆಶಲಿಸ್ಟ್ ಸತತ ವೈಫಲ್ಯ ಕಂಡಿದ್ರು. ದೇಶಿ ಹಾಗೂ ವಿದೇಶಿ ಪಿಚ್ನಲ್ಲಿ ರನ್ ಬರ ಅನುಭವಿಸಿದ್ರು. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮುಗ್ಗರಿಸಿ ಮುಖಭಂಗಕ್ಕೆ ತುತ್ತಾದ್ರು. ಏಕಾಂಗಿಯಾಗಿ ನಿಂತು ಪಂದ್ಯ ಗೆಲ್ಲಿಸಿಕೊಡ್ತಿದ್ದ ಸೆಕೆಂಡ್ ವಾಲ್ ಒಂದೊಂದು ರನ್ಗೂ ಹೆಣಗಾಡಿದ್ರು. ಈ ಎರಡು ವರ್ಷಗಳಲ್ಲಿ ಒಂದೂ ಶತಕ ಗಳಿಸಲಿಲ್ಲ. ಯಾವಾಗ ಪೂಜಾರ ಹಳೇ ಚಾರ್ಮ್ ಕಳೆದುಕೊಂಡ್ರೋ ಸೆಲೆಕ್ಟರ್ಸ್ ಹಿಂದೆ ಮುಂದೆ ನೋಡದೇ ಜೂನಿಯರ್ ವಾಲ್ರನ್ನ ಟೀಂ ಇಂಡಿಯಾದಿಂದ ಕೈಬಿಟ್ಟು ಶಾಕ್ ನೀಡಿದ್ರು.
ಮತ್ತೆ ತಂಡಕ್ಕೆ ಮರಳಬೇಕಾದ್ರೆ ಡೊಮೆಸ್ಟಿಕ್ ಆಡಬೇಕು. ಅಲ್ಲಿ ಅದ್ಭುತ ಪ್ರದರ್ಶನ ನೀಡಿದರಷ್ಟೇ ಟೀಂ ಇಂಡಿಯಾ ಬಾಗಿಲು ತೆರೆಯಲಿದೆ ಎಂದು ಖಡಕ್ ಸೂಚನೆ ಕೊಟ್ಟಿದ್ರು. ಎಷ್ಟೇ ಆದ್ರೂ ಪೂಜಾರ ಛಲದಂಕ ಮಲ್ಲ ನೋಡಿ. ಡ್ರಾಪ್ ಆದ ದಿನವೇ ಮತ್ತೆ ಟೀಂ ಇಂಡಿಯಾಗೆ ಎಂಟ್ರಿ ಕೊಡುವ ಶತಪಗೈದ್ರು. ಅಂದಿನಿಂದಲೇ ಸಿದ್ಧತೆ ಆರಂಭಿಸಿದ್ರು. ಪರಿಣಾಮ ಕಳೆದ ವರ್ಷಾಂತ್ಯದಲ್ಲಿ ತಂಡದಿಂದ ಹೊರಬಿದ್ದ ಪೂಜಾರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ರನ್ ಹೊಳೆ ಹರಿಸಿದ್ದಾರೆ. ಆ ಮೂಲಕ ಮೈ ಟೆಸ್ಟ್ ಕೆರಿಯರ್ ಇಸ್ ನಾಟ್ ಓವರ್ ಅನ್ನೋ ಸ್ಟ್ರಾಂಗ್ ಮೆಸೆಜ್ ಅನ್ನ ಆಯ್ಕೆಗಾರರಿಗೆ ರವಾನಿಸಿದ್ದಾರೆ.
ಕೌಂಟಿ ಚಾಂಪಿಯನ್ಶಿಪ್ನಲ್ಲಿ ಪೂಜಾರ ರನ್ ಭರಾಟೆ:
ಇಂಗ್ಲೀಷ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಪೂಜಾರ ಸಸ್ಸೆಕ್ಸ್ ಪರ ಆಡ್ತಿದ್ದು ಧೂಳೆಬ್ಬಿಸಿದ್ದಾರೆ. ಈವರೆಗೆ ಆಡಿದ 4 ಪಂದ್ಯಗಳಲ್ಲಿ ಸತತ 4 ಸೆಂಚುರಿ ಸಹಿತ ಅಮೋಘ 701 ರನ್ ಗಳಿಸಿದ್ದಾರೆ. ಆ ಮೂಲಕ ವೈಟ್ ರೆಡ್ ಬಾಲ್ನಲ್ಲಿ ಪೂಜಾರರ ಹಳೆ ಖದರ್ ಮತ್ತೆ ಮರುಕಳಿಸಿದೆ.
2 ಡಬಲ್ ಸೆಂಚುರಿ ವೈಭವ:
ಇನ್ನು ನಾಲ್ಕು ಶತಕಗಳ ಪೈಕಿ, ಎರಡೂ ಅತ್ಯಾಮೋಘ ಡಬಲ್ ಸೆಂಚುರಿ ಗಳಿಸಿದ್ದಾರೆ. ಡಹ್ರಾಮ್ ವಿರುದ್ಧ 203 ರನ್ ಗಳಿಸಿದ್ರೆ, ಡರ್ಬಿಶೈರ್ ವಿರುದ್ಧ 201 ರನ್ ಗಳಿಸಿ ಮಿಂಚಿದ್ರು. ಸದ್ಯ ಈ ಎರಡು ದ್ವಿಶತಕಗಳು ಪೂಜಾರರ ಕಾನ್ಫಿಡೆಂಟ್ ಹೆಚ್ಚಿಸಿವೆ.
2007ರ ಟಿ20 ವಿಶ್ವಕಪ್‌ಗೆ ನಾನು ಟೀಂ ಇಂಡಿಯಾ ಕ್ಯಾಪ್ಟನ್ ಆಗ್ಬೇಕಿತ್ತು: ಯುವಿ ಸ್ಪೋಟಕ ಹೇಳಿಕೆ
ಪೂಜಾರಗೆ ಮತ್ತೆ ತೆರೆಯಲಿದೆ ಟೀಂ ಇಂಡಿಯಾ ಬಾಗಿಲು:
ಕೌಂಟಿ ಚಾಂಪಿಯನ್ಶಿಪ್ನಲ್ಲಿ ರನ್ ಗೋಪುರ ಕಟ್ಟಿರೋ ಪೂಜಾರ, ಮತ್ತೆ ಟೀಂ ಇಂಡಿಯಾ ಮೇಲೆ ಕಣ್ಣಿಟ್ಟಿದ್ದಾರೆ. ಐಪಿಎಲ್ ಮುಗಿಯದ ಬಳಿಕ ಭಾರತ ತಂಡಕ್ಕೆ ಯಾವುದೇ ಟೆಸ್ಟ್ ಸರಣಿಗಳಿಲ್ಲ. ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡಲಿದೆ. ಬಳಿಕ ಆಫ್ರಿಕಾ ಪ್ರವಾಸ ಕೈಗೊಳ್ಳುವ ರೋಹಿತ್ ಪಡೆ ಟೆಸ್ಟ್ ಆಡಲಿದೆ. ಆ ವೇಳೆ ಪೂಜಾರ ಸೆಲೆಕ್ಟ್ ಆಗೋದು ಬಹುತೇಕ ಫಿಕ್ಸ್. ಡ್ರಾಪ್ ಅವಮಾನಕ್ಕೆ ತಕ್ಕ ಪ್ರತೀಕಾರ ನೀಡಿದಂತಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.