ಡೇ & ನೈಟ್ ಟೆಸ್ಟ್‌ಗಾಗಿ ಕೋಲ್ಕಾತಾಗೆ ಬಂದಳಿದ ಟೀಂ ಇಂಡಿಯಾ!

Published : Nov 19, 2019, 09:31 PM ISTUpdated : Nov 19, 2019, 09:32 PM IST
ಡೇ & ನೈಟ್ ಟೆಸ್ಟ್‌ಗಾಗಿ ಕೋಲ್ಕಾತಾಗೆ ಬಂದಳಿದ ಟೀಂ ಇಂಡಿಯಾ!

ಸಾರಾಂಶ

ಇದೇ ಮೊದಲ ಬಾರಿಗೆ ಭಾರತ ಡೇ ಅಂಡ್ ಟೆಸ್ಟ್ ಪಂದ್ಯ ಆಯೋಜಿಸಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಕೋಲ್ಕತಾಗೆ ಆಗಮಿಸಿದೆ. ಬಾಂಗ್ಲಾ ವಿರುದ್ದ ಮೊದಲ ಪಂದ್ಯ ಗೆದ್ದ ಟೀಂ ಇಂಡಿಯಾ ಇದೀಗ 2ನೇ ಗೆಲುವಿಗೆ ಹೊಂಚು ಹಾಕಿದೆ

ಕೋಲ್ಕತಾ(ನ.19): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಗೂ 130 ರನ್ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾದಿಸಿದೆ. ಇದೀಗ  2ನೇ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡೋ ಲೆಕ್ಕಾಚಾರದಲ್ಲಿದೆ. 2ನೇ ಹಾಗೂ ಅಂತಿಮ ಪಂದ್ಯಕ್ಕಾಗಿ ಟೀಂ ಇಂಡಿಯಾ ಕೋಲ್ಕತಾಗೆ ಆಗಮಿಸಿದೆ.

ಇದನ್ನೂ ಓದಿ: ಟೆಸ್ಟ್ ರ‍್ಯಾಂಕಿಂಗ್‌: ಟಾಪ್‌ 10ಗೆ ಲಗ್ಗೆಯಿಟ್ಟ ಶಮಿ..!

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯ ಹಗಲು ರಾತ್ರಿ ನಡೆಯಲಿದೆ. ಇದೇ ಮೊದಲ ಭಾರಿಗೆ ಭಾರತ ಡೇ ಅಂಡ್ ನೈಟ್ ಟೆಸ್ಟ್ ಆಯೋಜಿಸಿದೆ. ನವೆಂಬರ್ 22 ರಿಂದ 26ರ ವರೆಗೆ ನಡೆಯಲಿರುವ ಮಹತ್ವದ ಪಂದ್ಯಕ್ಕೆ ಭಾರತ ಹಾಗೂ  ಬಾಂಗ್ಲಾದೇಶ ಪಿಂಕ್ ಬಾಲ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದೆ.

 

ಇದನ್ನೂ ಓದಿ: ಶೀಘ್ರದಲ್ಲಿ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಗೆ ವಾಪಸ್!

ಡೆ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಬಂಗಾಳ ಕ್ರಿಕೆಟ್ ಸಂಸ್ಥೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಮಾರ್ಗದರ್ಶನದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಕಾರ್ಯಕ್ರಮ ಸಿದ್ಧವಾಗಿದೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!