ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಅಯ್ಕೆ; ಪ್ರಕಟಣೆಯಷ್ಟೇ ಬಾಕಿ..!

By Suvarna NewsFirst Published Sep 7, 2021, 11:43 AM IST
Highlights

* ಟಿ20 ವಿಶ್ವಕಪ್‌ ಟೂರ್ನಿಗೆ ಟೀಂ ಇಂಡಿಯಾ ಆಟಗಾರರ ಅಂತಿಮ ಪಟ್ಟಿಗೆ ಕ್ಷಣಗಣನೆ

* ಇಂದು ಅಥವಾ ನಾಳೆ ಬಿಸಿಸಿಐನಿಂದ ಅಧಿಕೃತ ಪ್ರಕಟಣೆ

* ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸಲು ಸೆಪ್ಟೆಂಬರ್ 10 ಕಡೆಯ ದಿನ

ನವದೆಹಲಿ(ಸೆ.07): ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಮಂಗಳವಾರ(ಸೆ.7) ಅಥವಾ ಬುಧವಾರ(ಸೆ.08) ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ತಂಡ ಆಯ್ಕೆಯಾಗಿದ್ದು, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಉಳಿದಿದೆ ಎಂದು ವರದಿಯಾಗಿದೆ

ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್‌ ಶರ್ಮಾ ನೇತೃತ್ವದಲ್ಲಿ ಮುಂಬೈನ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಈ ವೇಳೆ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೋಚ್‌ ರವಿಶಾಸ್ತ್ರಿರನ್ನು ಇನ್ನೆರಡು ದಿನದಲ್ಲಿ ಸಂಪರ್ಕಿಸುವ ನಿರೀಕ್ಷೆಯಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ಮುಕ್ತಾಯದ ಬೆನ್ನಲ್ಲೇ ಟೀಂ ಇಂಡಿಯಾ ಪ್ರಕಟಿಸುವ ಸಾಧ್ಯತೆಯಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಕೋಚ್‌ ರವಿಶಾಸ್ತ್ರಿಗೆ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಒಂದು ದಿನ ತಡವಾಗಿ ಬಿಸಿಸಿಐ ಆಯ್ಕೆ ಸಮಿತಿ ಟೀಂ ಇಂಡಿಯಾದ ಅಂತಿಮ ಆಟಗಾರರ ಹೆಸರನ್ನು ಇಂದು ಅಥವಾ ನಾಳೆ ಪ್ರಕಟಿಸುವುದು ಬಹುತೇಕ ಖಚಿತ ಎನಿಸಿದೆ.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಪಾಕ್‌ ತಂಡ ಪ್ರಕಟ, ಬಾಬರ್ ಅಜಂ ನಾಯಕ

ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ಶಿಖರ್ ಧವನ್‌ ಮುಂದುವರೆಯುತ್ತಾರಾ ಅಥವಾ ಬೇರೆ ಕ್ರಿಕೆಟಿಗರಿಗೆ ಮಣೆಹಾಕಲಾಗುತ್ತಾ? ಹಾರ್ದಿಕ್‌ ಪಾಂಡ್ಯ ಸಂಪೂರ್ಣ ಫಿಟ್‌ ಆಗಿದ್ದಾರಾ? ಹಾಗೂ ವಾಷಿಂಗ್ಟನ್ ಸುಂದರ್ ಬದಲಿಗೆ ಟೀಂ ಇಂಡಿಯಾದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎನ್ನುವ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಅಕ್ಟೋಬರ್ 17ರಿಂದ ಯುಎಇನಲ್ಲಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಪ್ರಕಟವಾಗಲಿದೆ. ತಂಡವನ್ನು ಪ್ರಕಟಿಸಲು ಸೆಪ್ಟೆಂಬರ್ 10 ಕಡೆಯ ದಿನವಾಗಿದೆ. ಭಾರತ ಅಕ್ಟೋಬರ್ 24ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 

click me!