T20 World cup ಭಾರತ ಇಂಗ್ಲೆಂಡ್ ಪಂದ್ಯಕ್ಕೆ ಆತಂಕ, ಆಡಿಲೇಡ್‌ನಲ್ಲಿ ಗುಡುಗು ಸಿಡಿಲು!

By Suvarna NewsFirst Published Nov 9, 2022, 8:26 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ನಾಳೆ(ನ.10) ಆಡಿಲೇಡ್‌ನಲ್ಲಿ ನಡೆಯಲಿದೆ. ಆದರೆ ಇಂದು ಭಾರಿ ಗುಡುಗು ಸಿಡಿಲು ಅಬ್ಬರಿಸಿದೆ. ನಾಳೆ ಮಳೆಯ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಒಂದು ವೇಳೆ ಮಳೆ ಬಂದರೆ ಮುಂದೇನು? ಇಲ್ಲಿದೆ ವಿವರ.
 

ಆಡಿಲೇಡ್(ನ.09): ಟಿ20 ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ನಾಳೆ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಹೋರಾಟ ನಡೆಸಲಿದೆ. ಸೆಮಿಫೈನಲ್ ಪಂದ್ಯಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್ ಭರ್ಜರಿ ಅಭ್ಯಾಸ ನಡೆಸಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಮಳೆರಾಯನ ಲಕ್ಷಣಗಳು ಗೋಚರಿಸುತ್ತಿದೆ. ಇಂದು ಆಡಿಲೇಡ್ ಸುತ್ತ ಮುತ್ತ ಭಾರಿ ಗುಡುಗು ಸಿಡಿಲು ಕಾಣಿಸಿಕೊಂಡಿದೆ. ಸದ್ಯ ಮಳೆ ಮೋಡ ದಟ್ಟವಾಗಿದೆ. ನಾಳೆಯ ಮಳೆ ವಕ್ಕರಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ. ಇದೀಗ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ಪೈಕಿ ಫೈನಲ್ ಪ್ರವೇಶಿಸುವ ತಂಡ ಯಾವುದು ಅನ್ನೋ ಚರ್ಚೆ ಶುರುವಾಗಿದೆ. ಇದರ ನಡುವೆ ಮಳೆಯ ಮುನ್ಸೂಚನೆ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಒಂದು ವೇಳೆ ಮಳೆ ವಕ್ಕರಿಸಿದರೆ ಮುಂದೇನು ಅನ್ನೋ ಚರ್ಚೆಯು ಶುರುವಾಗಿದೆ. 

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮಳೆರಾಯ ಎಂಟ್ರಿಕೊಡುವ ಸಾಧ್ಯತೆ ಇದೆ.  ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ಇಡಲಾಗಿದೆ. ಹೀಗಾಗಿ ನಾಳೆ ಮಳೆಯಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ  ಸಂಪೂರ್ಣ ಪಂದ್ಯ ರದ್ದಾದರೆ ಎರಡನೇ ದಿನ ಪಂದ್ಯ ನಡೆಯಲಿದೆ. ಮೀಸಲು ದಿನದಲ್ಲೂ ಮಳೆ ಬಂದು ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಟೀಂ ಇಂಡಿಯಾ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಕಾರಣ ಸೂಪರ್ 12 ಹಂತದ ಅಂಕಪಟ್ಟಿಯಲ್ಲಿ ಇಂಗ್ಲೆಂಡ್‌ಗಿಂತ ಟೀಂ ಇಂಡಿಯಾ ಉತ್ತಮ ಸ್ಥಾನದಲ್ಲಿದೆ. ಹೀಗಾಗಿ ಭಾರತ ಫೈನಲ್ ಪ್ರವೇಶಿಸಲಿದೆ.

T20 WORLD CUP ಸೆಮೀಸ್ ಹೋರಾಟಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್, ಅಭ್ಯಾಸ ವೇಳೆ ಕೊಹ್ಲಿಗೆ ಗಾಯ!

ಹವಾಮಾನ ವರದಿ ಪ್ರಕಾರ ಆಡಿಲೇಡ್‌ನಲ್ಲಿ ಗುಡುಗು ಸಿಡಿಲು ಹೆಚ್ಚಾಗಿದೆ. ಇಂದು ಮಳೆ ಬರುವ ಸಾಧ್ಯತೆ ಇದೆ. ನಾಳೆ ಪಂದ್ಯದ ನಡುವ ಮಳೆ ಬರುವ ಸಾಧ್ಯತೆ ಇದೆ. ಆದರೆ ಸಂಪೂರ್ಣ ಪಂದ್ಯವನ್ನು ರದ್ದು ಮಾಡುವ ರೀತಿಯ ಮಳೆ ವಕ್ಕರಿಸುವ ಸಾಧ್ಯತೆ ಕಡಿಮೆ ಎಂದಿದೆ. ಮಳೆ ಬಂದರೆ ಓವರ್ ಕಡಿತಗೊಳ್ಳುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದೀಗ ಇಂಗ್ಲೆಂಡ್ ಮಣಿಸಿ, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಬೇಕಾದ ಸವಾಲು ಟೀಂ ಇಂಡಿಯಾ ಮುಂದಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಭಾರಿ ಟ್ರೆಂಡ್ ಆಗಿದೆ. ಬ್ಯಾಗ್ ಪ್ಯಾಕ್ ಮಾಡಿ ಸೂಪರ್ 12 ಹಂತದಿಂದ ಮನಗೆ ತೆರಳು ಸಿದ್ದವಾಗಿದ್ದ ಪಾಕಿಸ್ತಾನ ಇದೀಗ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಹೀಗಾಗಿ 1992ರ ವಿಶ್ವಕಪ್ ರೀತಿಯಲ್ಲಿ ಈ ಬಾರಿ ಪಾಕಿಸ್ತಾನ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ಹಲವು ಭವಿಷ್ಯ ನುಡಿದಿದ್ದಾರೆ. 

ಬಾಬರ್-ರಿಜ್ವಾನ್ ಜುಗಲ್ಬಂದಿ: 13 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆಯಿಟ್ಟ ಪಾಕಿಸ್ತಾನ..!

ಟ್ವಿಟರ್‌ನಲ್ಲಿ ಪಾಕಿಸ್ತಾನ ಚಾಂಪಿಯನ್ ಎಂದು ಟ್ರೆಂಡ್ ಆಗುತ್ತಿದೆ. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಹೊರಬೀಳಲಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿ ಪಾಕಿಸ್ತಾನ ಕಪ್ ಗೆಲ್ಲಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 
 

click me!