T20 World Cup ಸೆಮೀಸ್ ಹೋರಾಟಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್, ಅಭ್ಯಾಸ ವೇಳೆ ಕೊಹ್ಲಿಗೆ ಗಾಯ!

By Suvarna News  |  First Published Nov 9, 2022, 7:33 PM IST

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಹೋರಾಟಕ್ಕೆ ಭಾರತ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಕಾರಣ ಅಭ್ಯಾಸದ ವೇಳೆ ಹರ್ಷಲ್ ಪಟೇಲ್ ಎಸೆತ ಕೊಹ್ಲಿಯನ್ನು ಗಾಯಗೊಳಿಸಿದೆ.
 


ಆಡಿಲೇಡ್(ನ.09): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತಕ್ಕೆ ಕಠಿಣ ಸವಾಲು ಎದುರಾಗುವುದು ಖಚಿತ. ಇತ್ತ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಪಾಕಿಸ್ತಾನ ನೇರವಾಗಿ ಫೈನಲ್ ತಲುಪಿದೆ. ಇದೀಗ ನಾಳೆ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್  ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಭಾರತ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಆದರೆ ಅಭ್ಯಾಸ ಮಾಡುತ್ತಿದ್ದ ವಿರಾಟ್ ಕೊಹ್ಲಿಗೆ ಹರ್ಷಲ್ ಪಟೇಲ್ ಎಸೆದ ಎಸೆತವೊಂದು ಬಡಿದು ಗಾಯಗೊಂಡಿದ್ದಾರೆ. ತಕ್ಷಣವೇ ಕೊಹ್ಲಿ ಬಳಿ ಹೋದ ಹರ್ಷಲ್ ಪಟೇಲ್ ವಿಚಾರಿಸಿದ್ದಾರೆ. ಅದೃಷ್ಟವಶಾತ್ ಕೊಹ್ಲಿಗೆ ಆದ ಗಾಯ ಗಂಭೀರವಾಗಿಲ್ಲ. ಹೀಗಾಗಿ ಚೇತರಿಸಿಕೊಂಡು ಮತ್ತೆ ಬ್ಯಾಟಿಂಗ್ ನಡೆಸಿದ್ದಾರೆ. ಈ ಸುದ್ದಿ ಟೀಂ ಇಂಡಿಯಾ ಅಭಿಮಾನಿಗಳನ್ನು ಕೆಲ  ಹೊತ್ತು ಬೆಚ್ಚಿ ಬೀಳಿಸಿತ್ತು. ಕೊಹ್ಲಿ ಫಿಟ್ ಆಗಿದ್ದಾರೆ ಅನ್ನೋ ಖಚಿತತೆ ಹೊರಬೀಳುವ ವರೆಗೆ ಆತಂಕ ಕಡಿಮೆಯಾಗಿರಲಿಲ್ಲ.

ಆಡಿಲೇಡ್ ಓವಲ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದೆ. ಅಭ್ಯಾಸದ ವೇಳೆ ಕೊಹ್ಲಿ ಟೀಂ ಇಂಡಿಯಾ ವೇಗಿಗಳ ಎಸೆತ ಎದುರಿಸಿದ್ದಾರೆ. ಇಂಗ್ಲೆಂಡ್ ವೇಗಿಗಳನ್ನು ಸಮರ್ಥವಾಗಿ ಎದುರಿಸಲು ಕೊಹ್ಲಿ ಸತತ ಅಭ್ಯಾಸ ಮಾಡಿದ್ದಾರೆ. ವೇಗಿ ಹರ್ಷಲ್ ಪಟೇಲ್ ಎಸತವೊಂದು ಕೊಹ್ಲಿಗೆ ತಾಗಿದೆ. ಮರುಕ್ಷಣದಲ್ಲೇ ಕೊಹ್ಲಿ ಪಿಚ್‌ನಲ್ಲಿ ಕುಳಿತಿದ್ದಾರೆ. ಗಾಬರಿಗೊಂಡ ಹರ್ಷಲ್ ಪಟೇಲ್ ಓಡೋಡಿ ಬಂದು ಕೊಹ್ಲಿಯನ್ನು ವಿಚಾರಿಸಿದ್ದಾರೆ.

Tap to resize

Latest Videos

undefined

ಬಾಬರ್-ರಿಜ್ವಾನ್ ಜುಗಲ್ಬಂದಿ: 13 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆಯಿಟ್ಟ ಪಾಕಿಸ್ತಾನ..!

ಕೆಲಕಾಲ ಪಿಚ್‌ನಲ್ಲೇ ಕುಳಿತು ವಿಶ್ರಾಂತಿ ಪಡೆದ ವಿರಾಟ್ ಕೊಹ್ಲಿ ನಿಧಾನವಾಗಿ ಚೇತರಿಸಿಕೊಂಡಿದ್ದಾರೆ. ಕೊಹ್ಲಿಗೆ ಆಗಿರುವ ಗಾಯ ಗಂಭೀರವಾಗಿಲ್ಲ. ಹೀಗಾಗಿ ಕೊಹ್ಲಿ ಮತ್ತೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ನಾಯಕ ರೋಹಿತ್ ಶರ್ಮಾ ಕೂಡ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ರೋಹಿತ್ ಗಾಯವೂ ಗಂಭೀರವಾಗಿಲ್ಲ. ಹೀಗಾಗಿ ಇಬ್ಬರೂ ಕ್ರಿಕೆಟಿಗರು ನಾಳಿನ ಪಂದ್ಯಕ್ಕೆ ಫಿಟ್ ಆಗಿದ್ದಾರೆ. 

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಸೂಪರ್ 12 ಹಂತದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ  ವಿರಾಟ್‌ ಕೊಹ್ಲಿ ಐಸಿಸಿ ಪುರುಷರ ವಿಭಾಗದ ಅಕ್ಟೋಬರ್‌ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಸ್ಪ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ತೋರಿದ ಅಭೂತಪೂರ್ವ ಪ್ರದರ್ಶನ ಅವರಿಗೆ ಈ ಪ್ರಶಸ್ತಿ ತಂದುಕೊಟ್ಟಿದೆ. ಪ್ರಶಸ್ತಿ ರೇಸ್‌ನಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ಹಾಗೂ ಜಿಂಬಾಬ್ವೆಯ ಸಿಕಂದರ್‌ ರಾಜಾ ಇದ್ದರೂ ಅವರನ್ನು ಹಿಂದಿಕ್ಕಿ ಕೊಹ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ಪಾಕಿಸ್ತಾನ ನಿದಾ ದಾರ್‌ಗೆ ತಿಂಗಳ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. ಅವರು ಭಾರತದ ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್‌ ಹಿಂದಿಕ್ಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಸೆಮೀಸ್‌ನಲ್ಲಿ ಕಾರ್ತಿಕ್-ಪಂತ್ ಇಬ್ಬರಿಗೂ ಚಾನ್ಸ್: ಕ್ಯಾಪ್ಟನ್ ರೋಹಿತ್ ಶರ್ಮಾ ಸುಳಿವು

ಐಸಿಸಿ ಟಿ20 ವಿಶ್ವಕಪ್‌ ಗುರುವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಸೆಮಿಫೈನಲ್‌ ಪಂದ್ಯದ ಟಿಕೆಟ್‌ಗಳು ಸೋಲ್ಡ್‌ಔಟ್‌ ಆಗಿದೆ ಎಂದು ತಿಳಿದುಬಂದಿದೆ. ಅಡಿಲೇಡ್‌ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್‌ ಪಂದ್ಯಗಳು ನಡೆಯಲಿದ್ದು, ಮಾರಾಟಕ್ಕಿಟ್ಟಹೆಚ್ಚುವರಿ ಟಿಕೆಟ್‌ಗಳು ಕೂಡಾ ಕೆಲ ಗಂಟೆಗಳಲ್ಲೇ ಮಾರಾಟವಾಗಿದೆ ಎಂದು ವರದಿಯಾಗಿದೆ. 

click me!