T20 World Cup ಭಾರತ ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ, ಸೆಮಿಫೈನಲ್ ಲೆಕ್ಕಾಚಾರ!

Published : Nov 05, 2022, 05:40 PM IST
T20 World Cup ಭಾರತ ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ, ಸೆಮಿಫೈನಲ್ ಲೆಕ್ಕಾಚಾರ!

ಸಾರಾಂಶ

ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 2ರ ಸೆಮಿಫೈನಲ್ ಲೆಕ್ಕಾಚಾರ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಇದೀಗ ಭಾರತ, ಸೌತ್ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದೆ. ಇತ್ತ ಪಾಕಿಸ್ತಾನ ಕೂಡ ಹೊಂಚು ಹಾಕುತ್ತಿದೆ. ನಾಳೆ ಜಿಂಬಾಬ್ವೆ ನಡುವಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ಆದರೆ ಮಳೆಯಿಂದ ಈ ಪಂದ್ಯ ರದ್ದಾದರೆ ಭಾರತದ ಗತಿಯೇನು?  

ಸಿಡ್ನಿ(ನ.05): ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನಿಂದ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್ ಸೆಮೀಸ್ ಖಚಿತಪಡಿಸಿದೆ. ಇತ್ತ ಆಸ್ಟ್ರೇಲಿಯಾ ಹೊರಬಿದ್ದಿದೆ. ಇದೀಗ ಎರಡನೇ ಗುಂಪಿನ ಸೆಮಿಫೈನಲ್ ಲೆಕ್ಕಾಚಾರ ತೀವ್ರ ಕುತೂಹಲ ಕೆರಳಿಸಿದೆ. ಭಾರತ, ಸೌತ್ ಆಫ್ರಿಕಾ ಸೆಮಿಫೈನಲ್ ರೇಸ್‌ನಲ್ಲಿ ಗುರಿತಿಸಿಕೊಂಡ ನೆಚ್ಚಿನ ತಂಡ. ಇತ್ತ ಪಾಕಿಸ್ತಾನ ಕೂಡ ಕೊನೆಯ ಅವಕಾಶದಲ್ಲಿ ಸೆಮೀಸ್ ಟಿಕೆಟ್ ಪಡೆಯಲು ಯತ್ನಿಸುತ್ತಿದೆ. ಹೀಗಾಗಿ ಕುತೂಹಲ ಹಾಗೇ ಉಳಿದುಕೊಂಡಿದೆ. ಜಿಂಬಾಬ್ವೆ ವಿರುದ್ಧದ ಅಂತಿಮ ಲೀಗ್ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ. ಜಿಂಬಾಬ್ವೆ ಮಣಿಸಿದರೆ ಭಾರತ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದೆ.  ಆದರೆ ಈ ಪಂದ್ಯ ಮಳೆಯಿಂದ ರದ್ದಾದರೆ ಭಾರತದ ಸೆಮಿಫೈನಲ್ ಲೆಕ್ಕಾಚಾರ ಹೇಗೆ? ಅನ್ನೋ ಚರ್ಚೆ ಶುರುವಾಗಿದೆ. ಒಂದು ವೇಳೆ ಭಾರತ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳು ಒಂದೊಂದು ಅಂಕ ಸಂಪಾದಿಸಲಿದೆ. ಹೀಗಾದಲ್ಲಿ ಭಾರತ 7 ಅಂಕ ಸಂಪಾದಿಸಿ ಸೆಮಿಫೈನಲ್ ಪ್ರವೇಶಿಸಲಿದೆ. 

ಸದ್ಯ ಅಂಕಪಟ್ಟಿಯಲ್ಲಿ ಭಾರತ 6 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 5 ಅಂಕ ಸಂಪಾದಿಸಿರುವ ಸೌತ್ ಆಫ್ರಿಕಾ 2 ಹಾಗೂ 4 ಅಂಕ ಸಂಪಾದಿಸಿರುವ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.  ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ದಾಖಿಲಿಸಿದರೆ 8 ಅಂಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಲಿದೆ. ಇಷ್ಟೇ ಅಲ್ಲ ನೇರವಾಗಿ ಸೆಮಿಫೈನಲ್ ಪ್ರವೇಶಸಲಿದೆ. ಇನ್ನು ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವು ದಾಖಲಿಸಿದರೆ 7 ಅಂಕದೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ. ಸೌತ್ ಆಫ್ರಿಕಾ ಗೆಲುವು ದಾಖಲಿಸುತ್ತಿದ್ದಂತೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಟೂರ್ನಿಯಿಂದ ಹೊರಬೀಳಲಿದೆ. ಲೀಗ್ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನ ಇಲ್ಲ. ಹೀಗಾಗಿ ಮಳೆ ಬಂದರೆ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚು. 

T20 WORLD CUP ಲಂಕಾ ಬಗ್ಗುಬಡಿದು ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್..! ಬೆನ್ ಸ್ಟೋಕ್ಸ್ ಗೆಲುವಿನ ಹೀರೋ

ಲೀಗ್ ಹಂತದಿಂದ ಸೆಮಿಫೈನಲ್ ಪ್ರವೇಶ ಟೀಂ ಇಂಡಿಯಾಗೆ ಪ್ರಯಾಸವಲ್ಲ. ಆದರೆ ಸೆಮಿಫೈನಲ್ ಹೋರಾಟ ಕಠಿಣವಾಗಲಿದೆ. ಕಾರಣ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಮೊದಲ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿದೆ. ಈ ಎರಡು ತಂಡಗಳ ಪೈಕಿ ಒಂದು ತಂಡದ ವಿರುದ್ಧ ಸೆಮಿಫೈನಲ್ ಹೋರಾಟ ನಡೆಯಲಿದೆ. ಇದು ಭಾರತಕ್ಕೆ ಸುಲಭ ತುತ್ತಲ್ಲ. 

ಮೊದಲ ಗುಂಪಿನಿಂದ ಆಸ್ಟ್ರೇಲಿಯಾ, ಶ್ರೀಲಂಕಾ, ಐರ್ಲೆಂಡ್, ಹಾಗೂ ಆಫ್ಘಾನಿಸ್ತಾನ ತಂಡ ಹೊರಬಿದ್ದಿದೆ. ಇನ್ನು ಎರಡನೇ ಗುಂಪನಿಯಿಂದ ನೆದರ್ಲೆಂಡ್ ಹಾಗೂ ಜಿಂಬಾಬ್ವೆ ಈಗಾಗಲೇ ಹೊರಬಿದ್ದಿದೆ. 

Virat Kohli Birthday: ಕಿಂಗ್‌ ಕೊಹ್ಲಿಗೆ ಮುದ್ದಾಗಿ ಶುಭಕೋರಿದ ಮಡದಿ ಅನುಷ್ಕಾ ಶರ್ಮಾ..!

ನಾಯಕತ್ವ ತ್ಯಜಿಸಿದ ನಬಿ
 ಟಿ20 ವಿಶ್ವಕಪ್‌ನಲ್ಲಿ ಒಂದೂ ಗೆಲುವು ಕಾಣದೆ ಅಷ್ಘಾನಿಸ್ತಾನ ಹೊರಬಿದ್ದ ಬಿನ್ನಲ್ಲೇ ಮೊಹಮದ್‌ ನಬಿ ತಂಡದ ನಾಯಕತ್ವ ತ್ಯಜಿಸಿದ್ದಾರೆ. ‘ವಿಶ್ವಕಪ್‌ಗೆ ನಮಗೆ ಸರಿಯಾಗಿ ಸಿದ್ಧತೆ ನಡೆಸಲು ಆಗಿಲ್ಲ. ತಂಡದ ಮ್ಯಾನೇಜರ್‌, ಆಯ್ಕೆ ಸಮಿತಿ ಮತ್ತು ನಾಯಕನ ನಡುವೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಇದು ತಂಡದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ನಾಯಕತ್ವ ತ್ಯಜಿಸುತ್ತಿದ್ದೇನೆ. ತಂಡದ ಆಡಳಿತ ಬಯಸುವುದಾದರೆ ಆಟಗಾರನಾಗಿ ಮುಂದುವರಿಯಲು ಸಿದ್ಧನಿದ್ದೇನೆ’ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಆಫ್ಘನ್‌ನ 2 ಪಂದ್ಯ ರದ್ದಾದರೆ, 3 ಪಂದ್ಯಗಳಲ್ಲಿ ಸೋತಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!