ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿರುವ ಟೀಂ ಇಂಡಿಯಾ ಇದೀಗ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾರಿಗೆಲ್ಲಾ ಸಿಕ್ಕಿದೆ ಚಾನ್ಸ್?
ನ್ಯೂಯಾರ್ಕ್(ಜೂ.12) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿರುವ ಟೀಂ ಇಂಡಿಯಾ ಇದೀಗ ಹ್ಯಾಟ್ರಿಕ್ ಗೆಲುವಿಗೆ ತಯಾರಿ ನಡೆಸಿದೆ. ಆತಿಥೇಯ ಅಮೆರಿಕ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅಮೆರಿಕ ಮಣಿಸಿ ಸೂಪರ್ 8ಗೆ ಪ್ರವೇಶ ಪಡೆಯಲು ಟೀಂ ಇಂಡಿಯಾ ಕಾತರಗೊಂಡಿದೆ. ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತ ಅಮೆರಿಕ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ.
ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯ ಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್
ಕುಕ್ಕೆ ಸುಬ್ರಹ್ಮಣ್ಯ: ಸರ್ಪ ಸಂಸ್ಕಾರ ಮಾಡಿಸಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್!
ಅಮೆರಿಕ ಪ್ಲೇಯಿಂಗ್ 11
ಸ್ಟೀವನ್ ಟೇಲರ್, ಶ್ಯಾನ್ ಜಹಾಂಗೀರ್, ಆ್ಯಂಡ್ರಿಸ್ ಗೌಸ್, ಆ್ಯರೋನ್ ಜೋನ್ಸ್(ನಾಯಕ), ನಿತೀಶ್ ಕುಮಾರ್, ಕೊರಿ ಆ್ಯಂರ್ಸನ್, ಹರ್ಮೀತ್ ಸಿಂಗ್, ಶ್ಯಾಡ್ಲಿ ವ್ಯಾನ್ ಶಾಲ್ಕ್, ಜಸ್‌ದೀಪ್ ಸಿಂಗ್, ಸೌರಬ್ ನೇತ್ರಾವಾಲ್ಕರ್, ಆಲಿ ಖಾನ್
ಆತಿಥೇಯ ಅಮೆರಿಕ ಇದೇ ಮೊದಲ ಬಾರಿಗೆ ಭಾರತ ವಿರುದ್ದ ಹೋರಾಟ ನಡೆಸುತ್ತಿದೆ. ಅಮೆರಿಕದಲ್ಲಿ ಬೇಸ್ ಬಾಲ್ ಅತ್ಯಂತ ಜನಪ್ರಿಯ. ಆದರೆ ಕ್ರಿಕೆಟ್ ಅಷ್ಟಕಷ್ಟೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯನ್ನು ಅಮೆರಿಕ ಆತಿಥ್ಯವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಈ ಮೂಲಕ ಅಮೆರಿಕದಲ್ಲಿ ಕ್ರಿಕೆಟ್ ಬೆಳೆಸಲು ಅಮೆರಿಕ ಮುಂದಾಗಿದೆ.
ಕಳೆದ ಪಂದ್ಯದಲ್ಲಿ ಭಾರತ ಬದ್ಧವೈರಿ ಪಾಕಿಸ್ತಾನವನ್ನು ಲೋ ಸ್ಕೋರಿಂಗ್ ಥ್ರಿಲ್ಲರ್‌ನಲ್ಲಿ 6 ರನ್‌ಗಳಿಂದ ಮಣಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 19 ಓವರಲ್ಲಿ 119ಕ್ಕೆ ಸರ್ವಪತನ ಕಂಡಿತು. ಗುರಿ ಸಣ್ಣದಾದರೂ ತನ್ನ ಬೌಲಿಂಗ್ ಪಡೆಯ ಮೇಲೆ ಹೆಚ್ಚಿನ ನಂಬಿಕೆ ಇರಿಸಿದ್ದ ಭಾರತ, ಗೆಲುವಿನ ವಿಶ್ವಾಸದೊಂದಿಗೆ ಫೀಲ್ಡ್‌ಗೆ ಇಳಿಯಿತು. ಒಂದೊಂದು ರನ್ ನೀಡಲೂ ಚೌಕಾಸಿ ಮಾಡಿದ ಭಾರತ, ಪಾಕ್‌ಅನ್ನು 7 ವಿಕೆಟ್ ಪಡೆದು 113 ರನ್‌ಗೆ ನಿಯಂತ್ರಿಸಿತು.