ಟೂರ್ನಿಯಲ್ಲಿ ಶ್ರೀಲಂಕಾ 3 ಪಂದ್ಯಗಳಲ್ಲಿ 1 ರದ್ದು, 2 ಸೋಲು ಕಂಡಿದ್ದು, ಕೇವಲ 1 ಅಂಕ ಸಂಪಾದಿಸಿ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ. ಗುಂಪಿನಿಂದ ದಕ್ಷಿಣ ಆಫ್ರಿಕಾ(8 ಅಂಕ) ಈಗಾಗಲೇ ಸೂಪರ್-8 ಹಂತ ಪ್ರವೇಶಿಸಿದ್ದು, ಮತ್ತೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ(2 ಅಂಕ), ನೆದರ್‌ಲೆಂಡ್ಸ್(2 ಅಂಕ), ನೇಪಾಳ(1 ಅಂಕ) ಹಾಗೂ ಶ್ರೀಲಂಕಾ ನಡುವೆ ಪೈಪೋಟಿ ಇದೆ.
ಫ್ಲೋರಿಡಾ: ಮಾಜಿ ಚಾಂಪಿಯನ್ ಶ್ರೀಲಂಕಾ ಹಾಗೂ ನೇಪಾಳ ನಡುವಿನ ಟಿ20 ವಿಶ್ವಕಪ್‌ನ ‘ಡಿ’ ಗುಂಪಿನ ಬುಧವಾರದ ಪಂದ್ಯ ಮಳೆಯಿಂದಾಗಿ ಟಾಸ್ ಕೂಡಾ ಕಾಣದೆ ರದ್ದುಗೊಂಡಿದೆ. ಇದರಿಂದ ಇತ್ತಂಡಗಳೂ ತಲಾ 1 ಅಂಕ ಹಂಚಿಕೊಂದ್ದು, ಶ್ರೀಲಂಕಾದ ಸೂಪರ್-8 ಕನಸು ಬಹುತೇಕ ಭಗ್ನಗೊಂಡಿದೆ.
ಟೂರ್ನಿಯಲ್ಲಿ ಶ್ರೀಲಂಕಾ 3 ಪಂದ್ಯಗಳಲ್ಲಿ 1 ರದ್ದು, 2 ಸೋಲು ಕಂಡಿದ್ದು, ಕೇವಲ 1 ಅಂಕ ಸಂಪಾದಿಸಿ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ. ಗುಂಪಿನಿಂದ ದಕ್ಷಿಣ ಆಫ್ರಿಕಾ(8 ಅಂಕ) ಈಗಾಗಲೇ ಸೂಪರ್-8 ಹಂತ ಪ್ರವೇಶಿಸಿದ್ದು, ಮತ್ತೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ(2 ಅಂಕ), ನೆದರ್‌ಲೆಂಡ್ಸ್(2 ಅಂಕ), ನೇಪಾಳ(1 ಅಂಕ) ಹಾಗೂ ಶ್ರೀಲಂಕಾ ನಡುವೆ ಪೈಪೋಟಿ ಇದೆ.
"ಓರ್ವ ನಾಲಾಯಕ್ ಮಾತ್ರ...": ಮತ್ತೊಮ್ಮೆ ಮಾಜಿ ಕ್ರಿಕೆಟಿಗನ ಮೇಲೆ ಬೆಂಕಿಯುಗುಳಿದ ಭಜ್ಜಿ..!
ಆದರೆ ಶ್ರೀಲಂಕಾ ಹೊರತುಪಡಿಸಿ ಇತರ 3 ತಂಡಕ್ಕೂ ತಲಾ 2 ಪಂದ್ಯಗಳು ಬಾಕಿಯಿವೆ. ಲಂಕಾ ತಂಡ ನೆದರ್‌ಲೆಂಡ್ಸ್ ವಿರುದ್ಧ ಕೊನೆ ಪಂದ್ಯದಲ್ಲಿ ಸೆಣಸಲಿದ್ದು, ಸೂಪರ್-8 ಹಂತಕ್ಕೆ ಪ್ರವೇಶಿಸಬೇಕಿದ್ದರೆ ದೊಡ್ಡ ಅಂತರದಲ್ಲಿ ಗೆಲ್ಲುವುದರ ಜೊತೆಗೆ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬರಬೇಕಿದೆ. ಆದರೆ ಸದ್ಯದ ಮಟ್ಟಿಗೆ ಇದು ಅಸಾಧ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ.
ನಮೀಬಿಯಾವನ್ನು ಬಗ್ಗುಬಡಿದು ಸೂಪರ್-8ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ
ಆ್ಯಂಟಿಗಾ: ಆ್ಯಡಂ ಝಂಪಾ ಮಾರಕ ದಾಳಿ, ಬ್ಯಾಟರ್‌ಗಳ ಸ್ಫೋಟಕ ಆಟದ ನೆರವಿನಿಂದ ನಮೀಬಿಯಾವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ, ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೂಪರ್-8ಗಗೆ ಅಧಿಕೃವಾಗಿ ಪ್ರವೇಶಿಸಿದೆ. ಆಸೀಸ್ ಹ್ಯಾಟ್ರಿಕ್ ಗೆಲುವಿನೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾದರೆ, ನಮೀಬಿಯಾ ಸತತ 2ನೇ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ನಮೀಬಿಯಾ 17 ಓವರ್‌ಗಳಲ್ಲಿ 72 ರನ್‌ಗೆ ಸರ್ವಪತನ ಕಂಡಿತು. ನಾಯಕ ಎರಾಸ್ಮಸ್(36), ಮೈಕಲ್ ವ್ಯಾನ್ ಲಿಂಗನ್(10) ಹೊರತುಪಡಿಸಿ ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ.
T20 World Cup 2024 ಅಮೆರಿಕ ಮಣಿಸಿದ ಭಾರತ ಭರ್ಜರಿಯಾಗಿ ಸೂಪರ್ 8 ಹಂತಕ್ಕೆ ಲಗ್ಗೆ..!
43ಕ್ಕೆ 8 ವಿಕೆಟ್ ಕಳೆದುಕೊಂಡರೂ 9ನೇ ವಿಕೆಟ್‌ಗೆ ಎರಾಸ್ಮಸ್-ಬ್ರಾಸೆಲ್(02) 29 ರನ್ ಜೊತೆಯಾಟವಾಡಿದರು. ಝಂಪಾ 4 ಓವರಲ್ಲಿ12 ರನ್‌ಗೆ 4, ಸ್ಟೋಯ್ನಿಸ್ ಹಾಗೂ ಹೇಜಲ್‌ವುಡ್ ತಲಾ 2 ವಿಕೆಟ್ ಕಿತ್ತರು.
ಸುಲಭ ಗುರಿಯನ್ನು ಆಸೀಸ್ ಕೇವಲ 5.4 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತು. ಟ್ರ್ಯಾವಿಸ್ ಹೆಡ್ 17 ಎಸೆತಗಳಲ್ಲಿ ಔಟಾಗದೆ 34, ವಾರ್ನರ್ 20, ಮಿಚೆಲ್ ಮಾರ್ಷ್ ಔಟಾಗದೆ 18 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಸ್ಕೋರ್: ನಮೀಬಿಯಾ 17 ಓವರಲ್ಲಿ 72/10 (ಎರಾಸ್ಮಸ್ 36, ಲಿಂಗನ್ 10, ಝಂಪಾ 4-12, ಸ್ಟೋಯ್ನಿಸ್ 2-9, ಹೇಜಲ್‌ವುಡ್ 1-18), ಆಸ್ಟ್ರೇಲಿಯಾ 5.4 ಓವರಲ್ಲಿ 74/1 (ಹೆಡ್ 34*, ವಾರ್ನರ್ 20, ವೀಸಾ 1-15)
ಪಂದ್ಯಶ್ರೇಷ್ಠ: ಆ್ಯಡಂ ಝಂಪಾ.
86 ಎಸೆತ: ಆಸೀಸ್ 86 ಎಸೆತ ಬಾಕಿ ಉಳಿಸಿ ಜಯಗಳಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ 2ನೇ ಗರಿಷ್ಠ. 2014ರಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಶ್ರೀಲಂಕಾ 90 ಎಸೆತ ಬಾಕಿಯಿಟ್ಟು ಗೆದ್ದಿದ್ದು ದಾಖಲೆ.