
ಆಡಿಲೇಡ್(ನ.01): ಟಿ20 ವಿಶ್ವಕಪ್ ಟೂರ್ನಿ ಪ್ರತಿ ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಕಾರಣ ಅನಿರೀಕ್ಷಿತ ಫಲಿತಾಂಶ, ಮಳೆಯಿಂದ ಪಂದ್ಯ ರದ್ದಾಗುತ್ತಿರುವ ಕಾರಣ ಸೆಮಿಫೈನಲ್ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಟೀಂ ಇಂಡಿಯಾ ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಪಂದ್ಯ ಸೋತಿದೆ. ಹೀಗಾಗಿ ಸೆಮಿಫೈನಲ್ ಪ್ರವೇಶಕ್ಕೆ ಇನ್ನುಳಿದ ಪಂದ್ಯಗಳ ಗೆಲುವು ಕೂಡ ಮುಖ್ಯವಾಗಿದೆ. ನಾಳೆ ನಡೆಯಲಿರು ಬಾಂಗ್ಲಾದೇಶ ವಿರುದ್ಧದ ಪಂದ್ಯ ಮುಖ್ಯವಾಗಿದೆ ಆದರೆ ಈ ಮಹತ್ವದ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹವಾಮಾನ ವರದಿ ಪ್ರಕಾರ ಆಡಿಲೇಡ್‌ನಲ್ಲಿ ಭುದವಾರ ಮಳೆಯಾಗಲಿದೆ. ಸತತ 3ನೇ ವರ್ಷ ಆಸ್ಟ್ರೇಲಿಯಾಕ್ಕೆ ಲಾ ನೀನಾ ಹವಾಮಾನದಿಂದ ಮಳೆಯಾಗುತ್ತಿದೆ. ಆಡಿಲೇಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಸದ್ಯದ ಹವಾಮಾನ ವರದಿ ಪ್ರಕಾರ ಆಡಿಲೇಡ್‌ನಲ್ಲಿ ನಾಳೆ ಪಂದ್ಯ ನಡೆಯುವ ವೇಳೆ ಮಳೆ ಬರವು ಸಾಧ್ಯತೆ ಶೇಕಡಾ 60 ಎಂದಿದೆ. ಇಂದೂ ಕೂಡ ಅತೀವ ಶೀತಲ ಹವಾಮಾನ, ಅತೀಯಾದ ಗಾಳಿ, ತುಂತುರು ಮಳೆಯಿಂದ ಬಾಂಗ್ಲಾದೇಶ ಅಭ್ಯಾಸ ಮಾಡಿಲ್ಲ. ಇತ್ತ ಟೀಂ ಇಂಡಯಾ ಕ್ರಿಕೆಟಿಗರು ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದ್ದಾರೆ.
T20 WORLD CUP ಕಿವೀಸ್ ಮಣಿಸಿ ಸೆಮೀಸ್ ಆಸೆ ಜೀವಂತವಾಗಿರಿಸಿಕೊಂಡ ಇಂಗ್ಲೆಂಡ್..!
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಹೋರಾಟ ನಡೆಸಲಿದೆ. ಆದರೆ ಮಳೆ ಅಡ್ಡಿಯಾಗಿ ಪಂದ್ಯ ರದ್ದಾದರೆ ಒಂದೊಂದು ಅಂಕ ಹಂಚಿಕೆಯಾಗಲಿದೆ. ಹೀಗಾದಲ್ಲಿ ಇದು ಭಾರತದ ಸೆಮಿಫೈನಲ್ ಹಾದಿಯನ್ನ ಕಠಿಣಗೊಳಿಸಲಿದೆ. ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 3 ಪಂದ್ಯಗಳ ಪೈಕಿ 2 ಗೆಲುವು 1 ಸೋಲು ಕಂಡಿದೆ. ಈ ಮೂಲಕ 4 ಅಂಕ ಸಂಪಾದಿಸಿದೆ. ಮೊದಲ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 3 ರಲ್ಲಿ 2 ಗೆಲುವು ಹಾಗೂ 1 ಪಂದ್ಯ ರದ್ದಾದ ಕಾರಣ 5 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲಿದೆ. ಬಾಂಗ್ಲಾದೇಶ ಕೂಡ ಆಡಿದ 3ರಲ್ಲಿ 2 ಗೆಲುವು 1 ಸೋಲು ಕಂಡು 4 ಅಂಕ ಸಂಪಾದಿಸಿದೆ. ಇಷ್ಟೇ ಅಲ್ಲ 3ನೇ ಸ್ಥಾನದಲ್ಲಿದೆ.
ಆಫ್ಘಾನ್ ಎದುರು ಜಯ ತಂದುಕೊಟ್ಟ ಧನಂಜಯ..! ಲಂಕಾ ಸೆಮೀಸ್ ಕನಸು ಜೀವಂತ
ಸೆಮೀಸ್ ರೇಸಲ್ಲಿ ಉಳಿದ ಪಾಕ್
ಸಾಧಾರಣ ಬ್ಯಾಟಿಂಗ್ ಪ್ರದರ್ಶನ ತೋರಿದರೂ ನೆದರ್‌ಲೆಂಡ್‌್ಸ ವಿರುದ್ಧ 6 ವಿಕೆಟ್ ಜಯ ಸಾಧಿಸುವಲ್ಲಿ ಯಶಸ್ವಿಯಾದ ಪಾಕಿಸ್ತಾನ ಟಿ20 ವಿಶ್ವಕಪ್‌ನ ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ನೆದರ್‌ಲೆಂಡ್‌್ಸ, ಪಾಕಿಸ್ತಾನದ ಗುಣಮಟ್ಟದ ವೇಗದ ಬೌಲಿಂಗ್ ದಾಳಿ ಎದುರು ನಲುಗಿತು. 20 ಓವರಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 91 ರನ್ ಗಳಿಸಿತು. 92 ರನ್‌ಗಳ ಸುಲಭ ಗುರಿ ಬೆನ್ನತ್ತಲು ಪಾಕಿಸ್ತಾನಕ್ಕೆ 13.5 ಓವರ್ ಬೇಕಾಯಿತು. 4 ವಿಕೆಟ್‌ಗಳು ಬಿದ್ದವು. ವಿಶ್ವ ನಂ.1 ಬ್ಯಾಟರ್ ಮೊಹಮದ್ ರಿಜ್ವಾನ್ 39 ಎಸೆತದಲ್ಲಿ 49 ರನ್ ಗಳಿಸಿದರು. ಬಾಬರ್ ಆಜಂ(04) ಮತ್ತೊಮ್ಮೆ ನಿರಾಸೆ ಅನುಭವಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.