T20 World Cup ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಇದೀಗ ವಿರಾಟ್ ಕೊಹ್ಲಿ ಪಾಲು..!

By Kannadaprabha News  |  First Published Oct 25, 2022, 9:34 AM IST

ಪಾಕಿಸ್ತಾನ ವಿರುದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ
ಅಜೇಯವಾಗಿ 82 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ ಕಿಂಗ್ ಕೊಹ್ಲಿ
ಗುರು ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ ಟೀಂ ಇಂಡಿಯಾ ಮಾಜಿ ನಾಯಕ


ಮೆಲ್ಬರ್ನ್‌(ಅ.25): ರನ್‌ ಮೆಷಿನ್‌, ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಭಾನುವಾರದ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಡಿಸಿದ 82 ರನ್‌ಗಳ ಐತಿಹಾಸಿಕ ಇನ್ನಿಂಗ್‌್ಸ ಮೂಲಕ ಅವರು ಈ ಮೈಲಿಗಲ್ಲು ತಲುಪಿದರು.

ಸದ್ಯ ವಿರಾಟ್‌ 474 ಪಂದ್ಯಗಳಲ್ಲಿ 71 ಶತಕ, 126 ಅರ್ಧಶತಕಗಳೊಂದಿಗೆ 24,212 ರನ್‌ ಕಲೆ ಹಾಕಿದ್ದು, ಭಾರತದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ರನ್ನು ಹಿಂದಿಕ್ಕಿದರು. ದ್ರಾವಿಡ್‌ 509 ಪಂದ್ಯಗಳಲ್ಲಿ 48 ಶತಕ, 146 ಅರ್ಧಶತಕಗಳೊಂದಿಗೆ 24,208 ರನ್‌ ಕಲೆ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್‌ ತೆಂಡುಲ್ಕರ್‌ 34357 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕುಮಾರ್‌ ಸಂಗಕ್ಕರ(28016), ಆಸ್ಪ್ರೇಲಿಯಾದ ರಿಕಿ ಪಾಂಟಿಂಗ್‌(27483), ಶ್ರೀಲಂಕಾದ ಜಯವರ್ಧನೆ(25957) ಹಾಗೂ ದ.ಆಫ್ರಿಕಾದ ಜ್ಯಾಕ್‌ ಕಾಲಿಸ್‌(25534) ನಂತರದ ಸ್ಥಾನಗಳಲ್ಲಿದ್ದಾರೆ.

Tap to resize

Latest Videos

undefined

ವರ್ಷದಲ್ಲಿ ಹೆಚ್ಚು ಜಯ: ಭಾರತ ವಿಶ್ವ ದಾಖಲೆ

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಅವಿಸ್ಮರಣೀಯ ಗೆಲುವಿನ ಮೂಲಕ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ಜಯಗಳಿಸಿದ ವಿಶ್ವದಾಖಲೆ ನಿರ್ಮಿಸಿದೆ. ಟೀಂ ಇಂಡಿಯಾ ಈ ವರ್ಷ 56 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಟಿ20ಯಲ್ಲಿ 24 ಸೇರಿದಂತೆ 39 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಆಸ್ಪ್ರೇಲಿಯಾ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದೆ. 2003ರಲ್ಲಿ ಆಸ್ಪ್ರೇಲಿಯಾ 38 ಪಂದ್ಯಗಳಲ್ಲಿ ಗೆದ್ದು ದಾಖಲೆ ಬರೆದಿತ್ತು. ಇನ್ನು 2017ರಲ್ಲಿ ಭಾರತ 53 ಪಂದ್ಯಗಳಲ್ಲಿ 21 ಏಕದಿನ ಸೇರಿ ಒಟ್ಟು 37 ಪಂದ್ಯಗಳಲ್ಲಿ ಗೆದ್ದಿತ್ತು. 1999ರಲ್ಲಿ ಆಸ್ಪ್ರೇಲಿಯಾ 35, 2011ರಲ್ಲಿ ಪಾಕಿಸ್ತಾನ 34 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು.

ಕೊಹ್ಲಿ ಸಮಯಪ್ರಜ್ಞೆಗೆ ಒಲಿದ ಜಯ!

ಮೆಲ್ಬರ್ನ್‌: ವಿರಾಟ್‌ ಕೊಹ್ಲಿಯ ಕಲಾತ್ಮಕ 82 ರನ್‌ಗಳ ಇನ್ನಿಂಗ್‌್ಸನ ಗುಂಗಿನಿಂದ ಕ್ರಿಕೆಟ್‌ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ. ಎಲ್ಲೆಲ್ಲೂ ಕೊಹ್ಲಿಯ ಚಮತ್ಕಾರದ್ದೇ ಮಾತು. ಅದರಲ್ಲೂ ಅವರ ಸಮಯಪ್ರಜ್ಞೆ ಬಗ್ಗೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೊನೆ ಓವರಲ್ಲಿ ಕೊಹ್ಲಿ ಫ್ರೀ ಹಿಟ್‌ನಲ್ಲಿ ಬೌಲ್ಡ್‌ ಆದರೂ 3 ರನ್‌ ಓಡಿ ಒತ್ತಡ ತಗ್ಗಿಸಿದರು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಭಾರತ, ಗೆಲುವಿನತ್ತ ಹೆಜ್ಜೆ ಹಾಕಿತು. ಆದರೆ ಫ್ರೀ ಹಿಟ್‌ ನಿಯಮದ ಬಗ್ಗೆ ಸ್ವತಃ ಪಾಕಿಸ್ತಾನಿ ಆಟಗಾರರಿಗೂ ಅರಿವಿದ್ದಂತೆ ತೋರಲಿಲ್ಲ. ನಾಯಕ ಬಾಬರ್‌ ಸೇರಿ ಹಲವು ಆಟಗಾರರು ಅಂಪೈರ್‌ ಬಳಿ ಬಂದು ‘ಇದು ಡೆಡ್‌ ಬಾಲ್‌ ಅಲ್ಲವೇ, ರನ್‌ ಓಡಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು. ಹಲವು ಮಾಜಿ ಕ್ರಿಕೆಟಿಗರು ಸಹ ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಚರ್ಚಿಸಿದರು. ಆದರೆ ಕೊಹ್ಲಿ ಮಾಡಿದ್ದು ಐಸಿಸಿ ನಿಯಮದ ಪ್ರಕಾರ ಸರಿ.

T20 World Cup ಮಳೆಯಿಂದ ಜಿಂಬಾಬ್ವೆ-ದಕ್ಷಿಣ ಆಫ್ರಿಕಾ ಪಂದ್ಯ ರದ್ದು, ಟೀಂ ಇಂಡಿಯಾ ಸೆಮೀಸ್ ಹಾದಿ ಸಲೀಸು..!

ನಿಯಮ ಏನು?: ಐಸಿಸಿ ನಿಯಮದ ಪ್ರಕಾರ ಒಂದು ಎಸೆತವನ್ನು ‘ಡೆಡ್‌ ಬಾಲ್‌’ ಎಂದು ಪರಿಗಣಿಸಲು ಚೆಂಡು ವಿಕೆಟ್‌ ಕೀಪರ್‌ ಇಲ್ಲವೇ ಬೌಲರ್‌ ಕೈ ಸೇರಿರಬೇಕು. ಬೌಂಡರಿ ಗೆರೆ ತಲುಪಿರಬೇಕು ಇಲ್ಲವೇ ವಿಕೆಟ್‌ ಪತನಗೊಂಡಿರಬೇಕು. ಫ್ರೀ ಹಿಟ್‌ ವೇಳೆ ಕೇವಲ ನಾಲ್ಕು ರೀತಿಯಲ್ಲಿ ಒಬ್ಬ ಬ್ಯಾಟರ್‌ ಔಟ್‌ ಆಗಬಹುದು. ಚೆಂಡನ್ನು ಉದ್ದೇಶಪೂರ್ವಕವಾಗಿ ಕೈಯಲ್ಲಿ ಮುಟ್ಟುವುದು, ಚೆಂಡನ್ನು ಎರಡು ಬಾರಿ ಬ್ಯಾಟ್‌ನಿಂದ ಹೊಡೆಯುವುದು, ರನೌಟ್‌ ಮತ್ತು ಕ್ಷೇತ್ರರಕ್ಷಣೆಗೆ ಅಡಚಣೆ.

ಫ್ರೀ ಹಿಟ್‌ನಲ್ಲಿ ಬೌಲ್ಡ್‌ ಆದರೆ ಅದನ್ನು ಔಟ್‌ ಎಂದು ಪರಿಗಣಿಸುವುದಿಲ್ಲ. ಹೀಗಾಗಿ ಚೆಂಡು ಸ್ಟಂಫ್ಸ್‌ಗೆ ಬಡಿದರೂ ಬ್ಯಾಟರ್‌ಗಳು ಓಡಬಹುದು. ಚೆಂಡು ಬ್ಯಾಟ್‌ಗೆ ತಗುಲಿ ಆ ಬಳಿಕ ಬೌಲ್ಡ್‌ ಆದಾಗ ಓಡಿದರೆ ರನ್‌ ಬ್ಯಾಟರ್‌ ಖಾತೆಗೆ ಸೇರಲಿದೆ. ಚೆಂಡು ಪ್ಯಾಡ್‌ಗೆ ತಗುಲಿ ಬೌಲ್ಡ್‌ ಆದಾಗ ಓಡಿದರೆ ಲೆಗ್‌ ಬೈ ಆಗಲಿದೆ. ಕ್ಲೀನ್‌ ಬೌಲ್ಡ್‌ ಆದಾಗ ಓಡಿದರೆ ಬೈ ರೂಪದಲ್ಲಿ ರನ್‌ ದೊರೆಯಲಿದೆ.

 

click me!