T20 World Cup: ಅಶ್ವಿನ್‌ 'ಇಂಟಲಿಜೆಂಟ್‌ ಬ್ರೇನ್‌' ಬಗ್ಗೆ ವಿರಾಟ್‌ ಕೊಹ್ಲಿ ಹೇಳಿದ್ದೇನು?

By Santosh Naik  |  First Published Oct 24, 2022, 6:39 PM IST

ಪಾಕಿಸ್ತಾನದ ವಿರುದ್ಧದ ಪಂದ್ಯದ ಗೆಲುವಿಗೆ ಎಲ್ಲರೂ ವಿರಾಟ್‌ ಕೊಹ್ಲಿಯನ್ನು ಹೊಗಳುತ್ತಿದ್ದಾರೆ. ಅದರ ನಡುವೆ ವಿರಾಟ್‌ ಕೊಹ್ಲಿ, ಪಂದ್ಯ ಕೊನೆಯ ಎರಡು ಎಸೆತಗಳನ್ನು ಎದುರಿಸಿದ ಆರ್‌.ಅಶ್ವಿನ್‌ ಅವರ ಧೈರ್ಯ ಹಾಗೂ ಅವರ ಬುದ್ದಿವಂತಿಕೆಯನ್ನು ಕೊಂಡಾಡಿದ್ದಾರೆ.
 


ಮೆಲ್ಬರ್ನ್‌ (ಅ. 24): ಸೂಪರ್‌ ಸ್ಟಾರ್‌ ಪ್ಲೇಯರ್‌ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಅಜೇಯ 82 ರನ್‌ಗಳ ನೆರವಿನಿಂದ ಟೀಮ್‌ ಇಮಡಿಯಾ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ರೋಚಕ ಗೆಲುವು ಕಂಡಿತು. ವಿರಾಟ್‌ ಕೊಹ್ಲಿ ಆಡುವಾಗ ಆರಂಭದಲ್ಲಿ ಕೊಂಚ ಮಟ್ಟಿಗೆ ಕಷ್ಟಪಟ್ಟಿದ್ದರು. ಆದರೆ, ಹಾರ್ದಿಕ್‌ ಪಾಂಡ್ಯ ಸಾಥ್‌ ದೊರೆತ ಬಳಿಕ, ತಂಡದ ಗೆಲುವಿಗೆ ನೆರವಾಗುವಂಥ ಜೊತೆಯಾಟವನ್ನು ಅವರು ಕಟ್ಟಿದರು. ಆದರೆ, ಪಂದ್ಯ ಮುಗಿದ ಬಳಿಕ ವಿರಾಟ್‌ ಕೊಹ್ಲಿ ತಮ್ಮ ಎಲ್ಲಾ ಮೆಚ್ಚುಗೆಗಳನ್ನು ಅನುಭವಿ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ ಅವರ ಧೈರ್ಯಕ್ಕೆ ನೀಡಿದರು. ಸೂಪರ್‌ 12 ಹಂತದ ಗ್ರೂಪ್‌-2 ಪಂದ್ಯದ ಕೊನೆಯ ಎರಡು ಎಸೆತಗಳನ್ನು ಅಶ್ವಿನ್‌ ಎದುರಿಸಿದ್ದರು. ಒಂದೆಡೆ ಪಾಕಿಸ್ತಾನ, ದಿನೇಶ್‌ ಕಾರ್ತಿಕ್‌ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಔಟಾದಾಗ ಐತಿಹಾಸಿಕ ಗೆಲುವಿನ ಅಂದಾಜಿನಲ್ಲಿತ್ತು. ನಾಟಕೀಯವಾಗಿ ನಡೆದ ಕೊನೆಯ ಓವರ್‌ನಲ್ಲಿ ಮೊಹಮದ್‌ ನವಾಜ್‌, ತಿರುಗೇಟು ನೀಡಿ ಕೊನೇ ಓವರ್‌ನಲ್ಲಿ ದಿನೇಶ್‌ ಕಾರ್ತಿಕ್‌ ಅವರ ವಿಕೆಟ್‌ ಉರುಳಿಸಿದ್ದರು.

| WHOLE INDIANS REACTION WHEN ASHWIN DID THIS YESTERDAY 😁| pic.twitter.com/TFyEllyisd

— 𝚁𝙰𝙹𝙰_77🇮🇳 (@Cric_News_RAJA5)


ದಿನೇಶ್‌ ಕಾರ್ತಿಕ್‌ ಔಟಾಗಿ ಹೊರನಡೆದಾಗ ಬಂದ ಬ್ಯಾಟ್ಸ್‌ಮನ್‌ಗೆ ಅಂತಾ ಒತ್ತಡದ ಸನ್ನಿವೇಶವನ್ನು ಎದುರಿಸುವುದೇ ದೊಡ್ಡ ಸವಾಲಾಗಿತ್ತು. ಅದಕ್ಕಾಗಿಯೇ ಕೆಲಹೊತ್ತು ಸಮಯ ಕೂಡ ಬೇಕಾಗುತ್ತದೆ. ಆದರೆ. ಅಶ್ವಿನ್‌ ಮಾತ್ರ ಅಂಥ ಸಂದರ್ಭದಲ್ಲೂ ತುಂಬಾ ತಾಳ್ಮೆಯಿಂದ ಮೈದಾನಕ್ಕೆ ಬಂದಿದ್ದಲ್ಲದೆ, ನವಾಜ್‌ ಅವರ ಎಸೆತವನ್ನು ಸ್ಮಾರ್ಟ್‌ ಆಗಿ ಎದುರಿಸಿದ್ದರು. ಬ್ಯಾಟಿಂಗ್‌ಗೆ ಮಾಡಲು ಬಂದಾಗ, ನವಾಜ್‌ ಖಂಡಿತವಾಗಿ ಲೆಗ್‌ಸೈಡ್‌ಗೆ ಚೆಂಡನ್ನು ಹಾಕುತ್ತಾರೆ ಎಂದು ಅಂದಾಜು ಮಾಡಿದ್ದ ಅಶ್ವಿನ್‌ ( Ravichandran Ashwin), ಆತ ಚೆಂಡೆಸೆದಾಗ ಸ್ವಲ್ಪ ಮುಂದೆ ಬಂದುಬಿಟ್ಟರು. ಅಂಪೈರ್‌ ಆ ಎಸೆತವನ್ನು ವೈಡ್‌ ಎಂದಾಗ, ಕೊನೇ ಎಸೆತದಲ್ಲಿ ಭಾರತದ ಗೆಲುವಿಗೆ ಒಂದು ರನ್‌ ಬೇಕಿತ್ತು. ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಮ್‌ (Pakistan) ಎಲ್ಲಾ ಫೀಲ್ಡರ್‌ಗಳನ್ನು ಸಮೀಪ ತಂದು ನಿಲ್ಲಿಸಿದ್ದರು. ನವಾಜ್‌ ಅವರ ಫುಲ್ಲರ್‌ ಎಸೆತವನ್ನು ಡೀಪ್‌ನತ್ತ ಸುಮ್ಮನೆ ತಳ್ಳಿದ ಅಶ್ವಿನ್‌, ಬೌಂಡರಿ ಸಿಡಿಸುವ ಮೂಲಕ ತಂಡದ ಗೆಲುವಿಗೆ ತಮ್ಮ ಪುಟ್ಟ ಹಾಗೂ ಮೇಜರ್‌ ಕಾಣಿಕೆ ನೀಡಿದರು.

Ashwin is a master mind 😅
How many W's pic.twitter.com/meyuZAmN0T

— cric_mawa (@cric_mawa_twts)

Latest Videos

undefined


ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ (Virat Kohli), ಅಶ್ವಿನ್‌ ಅವರ ಧೈರ್ಯದ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಂಥ ಹಂತದಲ್ಲಿ ಯಾವುದೇ ಪ್ಲೇಯರ್‌ ಆದರೂ, ಬೌಂಡರಿ ಬಾರಿಸುವ ಯೋಚನೆ ಮಾಡುತ್ತಾರೆ. ಆದರೆ, ಅಶ್ವಿನ್‌ ಸುಮ್ಮನೆ ಲೈನ್‌ನ ಒಳಗೆ ಬಂದು, ಒಂದು ರನ್‌ ತಂದಿದ್ದರು. ಅಶ್ವಿನ್‌ನ ಈ ಆಟ ಅದ್ಭುತವಾಗಿತ್ತು ಎಂದಿದ್ದಾರೆ.

IND VS PAK ಕೊಹ್ಲಿ ಬ್ಯಾಟಿಂಗ್‌ನಿಂದ ಸ್ಥಗಿತಗೊಂಡಿತ್ತು UPI ಟ್ರಾನ್ಸಾಕ್ಷನ್, ಶಾಪಿಂಗ್, ಕುತೂಹಲ ಮಾಹಿತಿ ಬಹಿರಂಗ!

15 ಅಥವಾ 16ರ ರನ್‌ರೇಟ್‌ ಇದ್ದಂಥ ಹಂತದಿಂದ 2 ಎಸೆತಗಳಲ್ಲಿ ಎರಡು ರನ್‌ ಬೇಕಾದ ಸಮಯ ಬಂದಾಗ, ಸಾಮಾನ್ಯವಾಗಿ ಜನರು ರಿಲಾಕ್ಸ್‌ ಆಗುತ್ತಾರೆ. ಆಟಗಾರರು ಕೂಡ ಸ್ವಲ್ಪ ಮಟ್ಟಿಗೆ ಅದನ್ನೇ ಮಾಡುತ್ತಾರೆ. ಎಲ್ಲವೂ ಮುಗಿದು ಹೋಗಿದೆ ಅನ್ನೋ ಅರ್ಥದಲ್ಲಿ ಎಕ್ಸೈಟ್‌ಮೆಂಟ್‌ ತೋರಿಸಿಕೊಳ್ಳುತ್ತಾರೆ. ಈ ಹಂತದಲ್ಲಿ ದಿನೇಶ್‌ ಕಾರ್ತಿಕ್‌  (T20 World Cup) ಔಟಾಗಿದ್ದರು. ಮೈದಾನದಲ್ಲಿ ಬಂದ ಆಶ್‌ಗೆ (ಅಶ್ವಿನ್‌) ಚೆಂಡನ್ನು ಕವರ್ಸ್‌ನತ್ತ ತಳ್ಳುವಂತೆ ಹೇಳಿದ್ದೆ. ಆದರೆ, ಅಶ್ವಿನ್‌, ತಲೆಯ ಮೇಲೆ ಇನ್ನೊಂದು ತಲೆ ಎನ್ನುವ ಅರ್ಥದಲ್ಲಿ ಯೋಚನೆ ಮಾಡಿದ್ದರು. ಅವರು ಮಾಡಿದ್ದು ನಿಜಕ್ಕೂ ಶೌರ್ಯದ ಸಾಧನೆ. ಸುಮ್ಮನೆ ಲೈನ್‌ನ ಒಳಗೆ ಬಂದುಬಿಡುವ ಮೂಲಕ ಆ ಎಸೆತವನ್ನು ವೈಡ್‌ ಬಾಲ್‌ ಆಗುವಂತೆ ಮಾಡಿದರು. ಮುಂದಿನ ಪರಿಸ್ಥಿತಿ ಏನಾಗಿತ್ತೆಂದರೆ,  ಗ್ಯಾಪ್‌ನಲ್ಲಿ ಚೆಂಡನ್ನು ಹೊಡೆಯಲು  ಸಾಧ್ಯವಾದರೆ, ನಾವು ಖಂಡಿತವಾಗಿಯೂ ಪಂದ್ಯವನ್ನು ಗೆಲ್ಲುತ್ತೇವೆ ಎನ್ನುವ ಭರವಸೆ ಇತ್ತು. ಅಶ್ವಿನ್‌ ಅದರಂತೆ ಮಾಡಿದರು' ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿದ್ದಾರೆ.

Ind vs Pak: "ಕಣ್ಣೀರಲ್ಲೇ ಹೊಟ್ಟೆ ತುಂಬೋಯ್ತಾ?"; ಪಾಕ್‌ ಫುಡ್‌ ಡೆಲಿವರಿ Appಗೆ Zomato ಏಟು

ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಪಂದ್ಯದ ಮೂಲಕ ಶುಭಾರಂಭ ಮಾಡಿರುವ ಟೀಮ್‌ ಇಂಡಿಯಾ ಮುಂದಿನ ಪಂದ್ಯದಲ್ಲಿ ಅಕ್ಟೋಬರ್‌ 27 ರಂದು ನೆದರ್ಲೆಂಡ್ಸ್‌ ಅನ್ನು ಎದುರಿಸಲಿದೆ.

click me!