T20 World Cup 2021: ನಮಿಬಿಯಾ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ!

By Suvarna NewsFirst Published Oct 18, 2021, 7:15 PM IST
Highlights
  • ಟಿ20 ವಿಶ್ವಕಪ್ ಟೂರ್ನಿಯ 4ನೇ ಪಂದ್ಯ
  • ನಮಿಬಿಯಾ ಹಾಗೂ ಶ್ರೀಲಂಕಾ ತಂಡ ಮುಖಾಮುಖಿ
  • ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ

ಅಬು ಧಾಬಿ(ಅ.18): T20 World Cup 2021 ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ದುರ್ಬಲ ಎಂದು ಗುರುತಿಸಿಕೊಂಡಿದ್ದ ತಂಡಗಳು ಟಕ್ಕರ್ ನೀಡುತ್ತಿದೆ. ಇದೀಗ ಮತ್ತೊಂದು ರೋಚಕ ಹೋರಾಟಕ್ಕೆ ಅಬು ಧಾಬಿ ಕ್ರೀಡಾಂಗಣ ಸಜ್ಜಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ನಮಿಬಿಯಾ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

 

Sri Lanka have won the toss and elect to field in Abu Dhabi 🏏 pic.twitter.com/L5gxY7gPQy

— T20 World Cup (@T20WorldCup)

T20 World Cup: 4 ಎಸೆತಕ್ಕೆ 4 ವಿಕೆಟ್‌, ಐರ್ಲೆಂಡ್ ಎದುರು ಕೇವಲ 106 ರನ್‌ ಬಾರಿಸಿದ ನೆದರ್‌ಲೆಂಡ್ಸ್‌..!

ಶ್ರೀಲಂಕಾ ಹಾಗೂ ನಮಿಬಿಯಾ ತಂಡದ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಈ ರೋಚಕ ಹೋರಾಟದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿದೆ. ಮೊದಲ ದಿನ ಮೊದಲ ಪಂದ್ಯದಲ್ಲಿ ಒಮನ್ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಸ್ಕಾಟ್‌ಲೆಂಡ್ ಗೆಲುವು ಸಾಧಿಸಿದೆ.

ಟಿ20 ವಿಶ್ವಕಪ್ ಟೂರ್ನಿ ಗೆಲುವಿನ ನಿರೀಕ್ಷೆಯಲ್ಲಿದ್ದ ತಂಡಗಳು ಮಕಾಡೆ ಮಲಗುತ್ತಿವೆ. ಅದರಲ್ಲೂ ಸ್ಕಾಟ್‌ಲೆಂಡ್ ತಂಡ ಟಿ20ಯಲ್ಲಿ ಅದ್ಭುತ ಪದರ್ಶನ ನೀಡುವ ಹಾಗೂ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಬಾಂಗ್ಲಾದೇಶಕ್ಕೆ ಶಾಕ್ ನೀಡಿತ್ತು.  

T20 World Cup‌: ಟೂರ್ನಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ಶುರುವಾಯ್ತು ತಳಮಳ..!

ಸ್ಕಾಟ್‌ಲೆಂಡ್ ತಂಡ ಬಾಂಗ್ಲಾದೇಶಕ್ಕೆ 141 ರನ್ ಟಾರ್ಗೆಟ್ ನೀಡಿತ್ತು. ಈ ಸುಲಭ ಗುರಿ ಚೇಸ್ ಮಾಡುವ ವಿಶ್ವಾಸದಲ್ಲಿದ್ದ ಬಾಂಗ್ಲಾದೇಶಕ್ಕೆ ಸ್ಕಾಟ್‌ಲೆಂಡ್ ಬೌಲರ್‌ಗಳು ಶಾಕ್ ನೀಡಿದ್ದರು. ಹೀಗಾಗಿ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಸ್ಕಾಟ್‌ಲೆಂಡ್ ರೋಚಕ 6 ರನ್ ಗೆಲುವು ಸಾಧಿಸಿತು.

click me!