T20 World Cup 2021; ಭಾರತಕ್ಕೆ ಭರ್ಜರಿ ಜಯ.. ಸೇಮಿಸ್ ಆಸೆ ಜೀವಂತ!

By Suvarna NewsFirst Published Nov 3, 2021, 11:44 PM IST
Highlights

 * ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ
* ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಗೆಲುವಿನ ಖಾತೆ
* ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸ್ಫೋಟ
* ತಂಡಕ್ಕೆ ಮರಳಿದ ಅಶ್ವಿನ್ ಮ್ಯಾಜಿಕ್

ಅಬುದಾಬಿ(n. 03)  ಟಿ ಟ್ವೆಂಟಿ ವಿಶ್ವಕಪ್ ನಲ್ಲಿ(T20 World Cup 2021) ಭಾರತ (Team India)  ಅಫ್ಘಾನಿಸ್ತಾನದ (Afghanistan)ವಿರುದ್ದ ಭರ್ಜರಿ ಜಯ ದಾಖಲಿಸಿ ಖಾತೆ ಓಪನ್ ಮಾಡಿದೆ.  ಮೊದಲು ಬ್ಯಾಟಿಂಗ್ ಮಾಡಿದ ಭಾರತ  ರನ್ ಹೊಳೆ ಹರಿಸಿತು.   ನಿಗದಿತ 20 ಓವರ್‌ಗಳಲ್ಲಿ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು 210 ರನ್‌ಗಳಿಸಿ ದೊಡ್ಡ ಸವಾಲನ್ನು ಮುಂದಿಟ್ಟಿತು.

ಚೇಸಿಂಗ್ ಗೆ ಇಳಿದ ಅಪ್ಘನ್ ಗೆ ಅಶ್ವಿನ್ ಮಾರಕವಾದರು. ಪ್ರಮುಖ ಎರಡು ವಿಕೆಟ್ ಕಬಳಿಸಿದರು. ಕಡಿಮೆ ರನ್ ನೀಡಿ ಕಟ್ಟಿಹಾಕಿದರು.  ಭಾರತ 66 ರನ್ ಗಳ ದೊಡ್ಡ ಜಯ ಸಂಪಾದನೆ ಮಾಡಿಕೊಂಡು ಅಂಕ ಸಂಪಾದಿಸಿಕೊಂಡಿದೆ. 22 ಎಸೆತದಲ್ಲಿ  44 ರನ್ ಗಳಿಸಿ ಕಿರಾಮ್ ಜನತ್ ಅಬ್ಬರಿಸಿದರು. ಇದರ ಪರಿಣಾಮ ಅಫ್ಘಾನ್  144 ರನ್ ಗಳಿಸಿತು. 

ಭಾರತದ ಆರಂಭಿಕ ಆಟಗಾರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಶತಕದ ಜೊತೆಯಾಟ ನೀಡಿ ಅಬ್ಬರಿಸಿದರು. ಅಂತಿಮ ಹಂತದಲ್ಲಿ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಫೋಟ ಭಾಋತವನ್ನು ಇನ್ನೂರರ ಗಡಿ ದಾಟಿಸಿತು.

Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ 140 ರನ್‌ಗಳ ಜೊತೆಯಾಟ ನೀಡಿ ದಾಖಲೆ ಬರೆಯಿತು. . 47 ಎಸೆತಗಳಲ್ಲಿ 74 ರನ್‌ ಸಿಡಿಸಿದ ರೋಹಿತ್ ಶರ್ಮಾ ಅಬ್ಬರಿಸಿದರು. ನಂತರ ಕೆಎಲ್ ರಾಹುಲ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿ 69 ರನ್‌ಗಳಿಸಿದರು.

ಬ್ಯಾಟಿಂಗ್ ಆರ್ಡರ್ ಬದಲಾಯಿಸಿದ ಕೊಹ್ಲಿ ಪಂತ್ ಅವರನ್ನು ತಮ್ಮ ಜಾಗದಲ್ಲಿ ಕಳಿಸಿದರು. ರಿಷಭ್ ಪಂತ್ 13 ಎಸೆತಗಳಲ್ಲಿ 27 ರನ್ ಸಿಡಿಸಿದರು. ಇದರಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಒಳಗೊಂಡಿತ್ತು. ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 35 ರನ್ ಚಚ್ಚಿದರು. ಭಾರತ ಪಾಯಿಂಟ್ ಪಟ್ಟಿಯಲ್ಲಿ  ನಾಲ್ಕನೇ ಸ್ಥಾನಕ್ಕೆ ಏರಿದ್ದು ರನ್ ರೇಟ್ ಹೆಚ್ಚಳ ಮಾಡಿಕೊಂಡಿದೆ.  ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಭಾರತದಕ್ಕೆ ಬಹಳ ಪ್ರಮುಖವಾಗಿದೆ. 

click me!