ಭಾರತ-ದಕ್ಷಿಣ ಆಫ್ರಿಕಾ ಟಿ20, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಚಾರ ಮಾರ್ಗ ಬದಲಾವಣೆ!

By Santosh NaikFirst Published Jun 18, 2022, 7:41 PM IST
Highlights

ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಟೀಮ್ ಇಂಡಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಪಂದ್ಯ ಬೆಂಗಳೂರಿನಲ್ಲಿ ಭಾನುವಾರ ನಡೆಯಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಸಂಚಾರ ನಿರ್ಬಂಧ ಹಾಗೂ ವಾಹನ ನಿಲುಗಡೆ ನಿರ್ಬಂಧಗಳ ಕುರಿತಾದ ನಿಯಮಾವಳಿಗಳನ್ನು ಹೊರಡಿಸಿದೆ.
 

ಬೆಂಗಳೂರು (ಜೂನ್ 18): ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ನಡೆಯಲಿದೆ. ಈಗಾಗಲೇ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿರುವ ಕಾರಣ, ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು (Viewers) ಆಗಮಿಸಲಿದ್ದಾರೆ. ಸ್ಟೇಡಿಯಂನ ಸುತ್ತಮುತ್ತಲ ಪ್ರದೇಶದಲ್ಲಿ ಸುಗಮ ಸಂಚಾರ ನಡೆಸಿಕೊಡುವ ದೃಷ್ಟಿಯಿಂದ  ಅಕ್ಕಪಕ್ಕದ ರಸ್ತೆಗಳಲ್ಲಿ ಕೆಲ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ. 

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸಲು ಬರುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಬಿಎಂಟಿಸಿ ಬಸ್‌ಗಳು ಮತ್ತು ಮೆಟ್ರೋ ರೈಲು ಸೇವೆಗಳನ್ನು ಬಳಸಲು ಸೂಚಿಸಲಾಗಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 12.30ರವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

1. ಬಾಳೇಕುಂದ್ರಿ ವೃತ್ತ ಮತ್ತು ಕ್ವೀನ್ಸ್ ವೃತ್ತದ ನಡುವಿನ ಕ್ವೀನ್ಸ್ ರಸ್ತೆಯಲ್ಲಿ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ.
2. ಎಂ.ಜಿ.ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಕಾವೇರಿ ಎಂಪೋರಿಯಂ ಜಂಕ್ಟಿಯ ನಡುವೆ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ.
3.  ಎಂಜಿ ರೋಡ್‌ನಿಂದ ಕಬ್ಬನ್ ರಸ್ತೆಯ ಲಿಂಕ್ ರೋಡ್
4. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ.
5. ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ನಡುವಿನ ಸೆಂಟ್ರಲ್ ಸ್ಟ್ರೀಟ್‌ನಲ್ಲಿ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ.
6. ಕಬ್ಬನ್ ರಸ್ತೆಯಲ್ಲಿ CT.O ವೃತ್ತದಿಂದ ಕಾಮರಾಜ ರಸ್ತೆ ಜಂಕ್ಷನ್ ನಡುವೆ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ.
7. ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ನಿಲುಗಡೆಯನ್ನು ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕನ್ಸನ್ ರಸ್ತೆ ಜಂಕ್ಷನ್‌ವರೆಗೆ ನಿಷೇಧಿಸಲಾಗಿದೆ.
8. ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದ ನಡುವೆ ಸೆಂಟ್ ಮಾರ್ಕ್ಸ್ ರಸ್ತೆ.
9. ಮ್ಯೂಸಿಯಂ ರಸ್ತೆ ಎಂ.ಜಿ.ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಯವರೆಗೆ.
10. ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದ ನಡುವೆ ಕಸ್ತೂರಬಾ ರಸ್ತೆ.
11. ಮಲ್ಯ ಆಸ್ಪತ್ರೆ ರಸ್ತೆ ಸಿದ್ದಲಿಂಗಯ್ಯ ವೃತ್ತದಿಂದ RRMR ವೃತ್ತದ ನಡುವೆ. 
12) ಕಬ್ಬನ್ ಪಾರ್ಕ್ ಒಳಗೆ, ಪ್ರೆಸ್ ಕ್ಲಬ್ ಎದುರು ಮತ್ತು ಬಾಲಭವನ ಕಾರಂಜಿ ರಸ್ತೆ.
13. ಕ್ವೀನ್ಸ್ ವೃತ್ತದ ನಡುವಿನ ಲಾವೆಲ್ಲೆ ರಸ್ತೆಯಿಂದ ವಿಟ್ಟಲ್ ಮಲ್ಯ ರಸ್ತೆ ಜಂಕ್ಷನ್
14.ಸಿದ್ದಲಿಂಗಯ್ಯ ವೃತ್ತದಿಂದ ಬಿಷಪ್ ಕಾಟನ್ ಬಾಲಕಿಯರ ಶಾಲೆಯವರೆಗೆ ಇರುವ ವಿಠ್ಟಲ್ ಮಲ್ಯ ರಸ್ತೆ.

Latest Videos

ಕ್ರಿಕೆಟ್ ಪಂದ್ಯದ ವೀಕ್ಷಕರಿಗೆ ಪಾರ್ಕಿಂಗ್‌ನ ವಿವರ
ಪಂದ್ಯ ನೋಡಲು ಆಗಮಿಸುವ ಪ್ರೇಕ್ಷಕರು ಭಾನುವಾರ ಮಧ್ಯಾಹ್ನ 3 ರಿಂದ ಮಧ್ಯರಾತ್ರಿ 12.30ರವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಬಹುದು.
* ಮಲ್ಯ ಆಸ್ಪತ್ರೆ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ.
* ಮ್ಯೂಸಿಯಂ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಮೈದಾನ.
* ಯು.ಬಿ.ಸಿಟಿ
* ಶಿವಾಜಿನಗರ ಬಸ್ ನಿಲ್ದಾಣ ಮೊದಲ ಮಹಡಿ.

ರಣಜಿ ಟ್ರೋಫಿ ಫೈನಲ್‌ಗೆ ಮುಂಬೈ, ಮಧ್ಯಪ್ರದೇಶ ಲಗ್ಗೆ..!

ಪರ್ಯಾಯ ಮಾರ್ಗ:
ಕ್ರಿಕೆಟ್ ಪ್ರೇಕ್ಷಕರು ಹೊರತುಪಡಿಸಿ ಉಳಿದ ವಾಹನ ಸವಾರರು ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಮತ್ತು ರಾತ್ರಿ 10 ಗಂಟೆಯಿಂದ 12 ಗಂಟೆವರೆಗೆ ಎಂಜಿ ರಸ್ತೆ, ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ, ಸೆಂಟ್ರಲ್ ಸ್ರೀಟ್ ರಸ್ತೆಗಳನ್ನು ಬಳಸದೆ ಇನ್‍ಫೆಂಟ್ರಿ ರಸ್ತೆಯಲ್ಲಿ ಸಂಚರಿಸಿ ಮುಂದೆ ಸಾಗಬಹುದಾಗಿದೆ. ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದ ಕಡೆಗೆ ಬರುವ ವಾಹನಗಳು ಸಿದ್ದಲಿಂಗಯ್ಯ ವೃತ್ತದಲ್ಲಿ ಬಲ ತಿರುವು ಪಡೆದು ಮಲ್ಯ ಅಸ್ಪತ್ರೆ ರಸ್ತೆಯಲ್ಲಿ ಮುಂದೆ ಹೋಗಬಹುದು.

Ind vs SA: ಇಂಡೋ-ಆಫ್ರಿಕಾ 4ನೇ ಟಿ20 ಪಂದ್ಯದಲ್ಲಿ ಹರಿದಾಡಿದ ಟಾಪ್ 10 ಮೀಮ್ಸ್‌ಗಳಿವು..!

ಪ್ರೇಕ್ಷಕರ ಪ್ರವೇಶ ದ್ವಾರ: ಸ್ಟೇಡಿಯಂನ ಕಬ್ಬನ್ ರಸ್ತೆಯಲ್ಲಿ 1 ರಿಂದ 6ನೇ ನಂಬರ್ ವರೆಗಿನ ಗೇಟ್‌ಗಳಿದ್ದರೆ, ಗೇಟ್ ನಂ.7 ರಿಂದ ಗೇಟ್ ನಂ.11ರವರೆಗೆ ಲಿಂಕ್ ರಸ್ತೆಯಲ್ಲಿದ್ದು , ಅನಿಲ್ ಕುಂಬ್ಳೆ ವೃತ್ತ ಮತ್ತು ಬಿಆರ್‍ವಿ ವೃತ್ತದ ಕಡೆಯಿಂದ ಪ್ರೇಕ್ಷಕರು, ಪಾದಚಾರಿಗಳು ಹೋಗಬಹುದು.

click me!