ಅಭಿಮಾನಿಗಳಿಗಿಲ್ಲ ಪ್ರವೇಶ, ಸ್ಯಾನಿಟೈಸರ್ ಕಡ್ಡಾಯ; ಹೊಸ ರೂಪದಲ್ಲಿ ಟಿ10 ಲೀಗ್!

By Suvarna NewsFirst Published May 24, 2020, 7:45 PM IST
Highlights

ಕೊರೋನಾ ವೈರಸ್ ಕಾರಣ ಎಲ್ಲಾ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಂಡಿದೆ. ಆದರೆ ವೆಸ್ಟ್‌ಇಂಡೀಸ್‌ನಲ್ಲಿ ಟಿ20 ಲೀಗ್ ಟೂರ್ನಿ ಆರಂಭವಾಗುತ್ತಿದೆ. ಆದರೆ ಕೊರೋನಾ ವೈರಸ್ ನಡುವೆ ಶುರುವಾಗುತ್ತಿರುವ ಟಿ20 ಲೀಗ್ ಹಲವು ನಿಯಮಗಳನ್ನು ಜಾರಿಗೆ ತಂದಿದೆ.

ಕಿಂಗ್‌ಸ್ಟನ್(ಮೇ.24) ಟಿ10 ಪ್ರಿಮಿಯರ್ ಲೀಗ್ ಆರಂಭಗೊಳ್ಳುತ್ತಿದೆ. ಕೊರೋನಾ ವೈರಸ್ ಆತಂಕದ ನಡುವೆ ಆರಂಭವಾಗುತ್ತಿರುವ ಮೊದಲ ಕ್ರಿಕೆಟ್ ಟೂರ್ನಿ ಇದಾಗಿದ್ದು, ಬಿಸಿಸಿಐ ಸೇರಿದಂತೆ ಎಲ್ಲಾ ಕ್ರಿಕೆಟ್ ಮಂಡಳಿಗಳು ಈ ಟೂರ್ನಿಯತ್ತ ಚಿತ್ತ ನೆಟ್ಟಿದೆ. ಕಾರಣ ಈ ಟೂರ್ನಿಯ ಫಲಿತಾಂಶದ ಹಿಂದೆ ಇತರ ಟೂರ್ನಿಗಳ ಭವಿಷ್ಯ ನಿಂತಿದೆ.

ಟೀಂ ಇಂಡಿಯಾ ಕ್ರಿಕೆಟಿಗರ ತರಬೇತಿ ಶಿಬಿರ ಬೆಂಗಳೂರಿನಿಂದ ಧರ್ಮಶಾಲಾಗೆ ಶಿಫ್ಟ್!.

ಕಿಂಗ್ಸ್‌ಸ್ಟನ್‌ನಲ್ಲಿ ಆರಂಭವಾಗುತ್ತಿರುವ ಟಿ10 ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳುತ್ತಿದೆ. ಆದರೆ ಕ್ರೀಡಾಂಗಣದೊಳಕ್ಕೆ ಅಭಿಮಾನಿಗಳ ಪ್ರವೇಶ ನಿರ್ಬಂಧಿಸಲಾಗಿದೆ. ಇತ್ತ ಕ್ರಿಕೆಟಿಗರು ಬಾಲ್‌ಗೆ ಎಂಜಲು ಸವರುವಂತಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ಸಾಮಾಜಿಕ ಅಂತರ ಕಡ್ಡಾಯ, ಮಾಸ್ಕ್ ಕಡ್ಡಾಯ, ಬೌಂಡರಿ ಲೈನ್ ಬಳಿ ಸಾನಿಟೈಸರ್ ಇಡಲಾಗುತ್ತದೆ. 

ಕ್ರಿಕೆಟ್ ಆರಂಭಿಸಲು ಹಲವು ವಿಘ್ನ; ಚೆಂಡಿಗೂ ಸೋಂಕು ನಿವಾರಕ ಸಿಂಪಡಿಸಲು ಚಿಂತನೆ!.

ಇಂದು ರಾತ್ರಿ(ಮೇ.24) ಟಿ10 ಪ್ರಿಮಿಯರ್ ಲೀಗ್ ಟೂರ್ನಿಯ  ಮೊದಲ ಪಂದ್ಯ ನಡೆಯಲಿದೆ.  ಕೊರೋನಾ ವೈರಸ್ ನಡುವೆ ಶುರುವಾಗುತ್ತಿರುವ ಈ ಟೂರ್ನಿ ಇದೀಗ ಇತರ ಕ್ರಿಕೆಟ್ ಟೂರ್ನಿಗಳ ಭವಿಷ್ಯ ಬರೆಯಲಿದೆ. ಅಭಿಮಾನಿಗಳಿಲ್ಲದೆ ಟೂರ್ನಿ ಆಯೋಜಿಸಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಇತರ ಕ್ರಿಕೆಟ್ ಮಂಡಳಿಗಳು ಇದೇ ರೀತಿ ಟೂರ್ನಿ ಆಯೋಜಿಸುವ ಸಾಧ್ಯತೆ ಇದೆ.
 

click me!