ಮುಷ್ತಾಕ್‌ ಅಲಿ ಟಿ20: ಬರೋಡಾ ಮಣಿಸಿ ತಮಿಳುನಾಡು ಚಾಂಪಿಯನ್‌

By Suvarna News  |  First Published Feb 1, 2021, 8:32 AM IST

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಲಿಷ್ಠ ತಂಡವನ್ನು ಅನಾಯಾಸವಾಗಿ ಮಣಿಸಿದ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ತಂಡ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ಅಹಮದಾಬಾದ್(ಫೆ.01)‌: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ತಮಿಳುನಾಡು, ಬರೋಡಾ ವಿರುದ್ಧ 7 ವಿಕೆಟ್‌ಗಳಿಂದ ಜಯಿಸಿತು. ತಂಡಕ್ಕಿದು 2ನೇ ಟ್ರೋಫಿ. 2006-07ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ತಂಡ ಚಾಂಪಿಯನ್‌ ಆಗಿತ್ತು. ಎರಡೂ ಬಾರಿ ದಿನೇಶ್‌ ಕಾರ್ತಿಕ್‌ ಅವರೇ ತಂಡದ ನಾಯಕ ಅನ್ನುವುದು ವಿಶೇಷ. 

Tap to resize

Latest Videos

ಮುಷ್ತಾಕ್ ಅಲಿ ಟ್ರೋಫಿ ಫೈನಲ್: ಪ್ರಶಸ್ತಿಗಾಗಿಂದು ತಮಿಳುನಾಡು, ಬರೋಡಾ ಫೈಟ್‌

ಮೊದಲು ಬ್ಯಾಟ್‌ ಮಾಡಿದ ಬರೋಡಾ ತಂಡ ಎಂ ಸಿದ್ದಾರ್ಥ್‌ ಮಾರಕ ದಾಳಿಗೆ ತತ್ತರಿಸಿ 36 ರನ್‌ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡುಕೊಂಡು.  ವಿಷ್ಣು (49) ಹೋರಾಟದಿಂದ 9 ವಿಕೆಟ್‌ಗೆ 120 ರನ್‌ ಕಲೆಹಾಕಿತು. ಸಿದ್ದಾರ್ಥ್‌ ಕೇವಲ 20 ರನ್‌ ನೀಡಿ 4 ವಿಕೆಟ್ ಪಡೆದರೆ, ಎಂ ಮೊಹಮ್ಮದ್, ಸೋನು ಯಾದವ್‌, ಬಾಬಾ ಅಪರಾಜಿತ್ ತಲಾ ಒಂದೊಂದು ವಿಕೆಟ್ ಪಡೆದರು.

Mr , Honorary Secretary, BCCI, hands over the Trophy to the Tamil Nadu skipper . 👏🏆 pic.twitter.com/drv5eGAldn

— BCCI Domestic (@BCCIdomestic)

ಇನ್ನು ಸಾಧಾರಣ ಗುರಿ ಬೆನ್ನತ್ತಿದ ತಮಿಳುನಾಡು ತಂಡ ಕೇವಲ 3 ವಿಕೆಟ್‌ ಕಳೆದುಕೊಂಡು ಇನ್ನೂ ಎರಡು ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಕಳೆದ ಆವೃತ್ತಿಯ ಮುಷ್ತಾಕ್ ಅಲಿ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ತಮಿಳುನಾಡು ತಂಡ ಈ ಬಾರಿ ಕಪ್ ಜಯಿಸುವಲ್ಲಿ ಯಶಸ್ವಿಯಾಗಿದೆ. 

ಸ್ಕೋರ್‌: 
ಬರೋಡಾ 120/9 
ತಮಿಳುನಾಡು 123/3
 

click me!