ಆಸ್ಪತ್ರೆಯಿಂದ ದಿಗ್ಗಜ ದಾದಾ ಡಿಸ್ಚಾರ್ಜ್.. ಬಿಸಿಸಿಐ ಅಧ್ಯಕ್ಷನಿಗೆ ವೈದ್ಯರ ಸಲಹೆ

By Suvarna NewsFirst Published Jan 31, 2021, 6:19 PM IST
Highlights

ಆಸ್ಪತ್ರೆಯಿಂದ ದಾದಾ ಡಿಸ್ಚಾರ್ಜ್/ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು/ ಕರ್ನಾಟಕ ಮೂಲದ ಡಾ. ದೇವಿ ಶೆಟ್ಟಿ ಹಾಗೂ ಡಾ. ಅಶ್ವಿನ್ ಮೆಹ್ತಾ ತಂಡದಿಂದ ಚಿಕಿತ್ಸೆ

ಕೋಲ್ಕತ್ತಾ( ಜ.  31) ಬಿಸಿಸಿಐ ಅಧ್ಯಕ್ಷ ಹಾಗೂ  ಭಾರತ ಕಂಡ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಭಾನುವಾರ ಬೆಳಗ್ಗೆ ಕೋಲ್ಕತ್ತಾದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಎರಡನೇ ಯಶಸ್ವಿ ಆ್ಯಂಜಿಯೋಪ್ಲಾಸ್ಟಿಯ ನಂತರ ಎರಡು ದಿನ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದ ಗಂಗೂಲಿ ಬಿಡುಗಡೆಯಾದರು.

48 ವಯಸ್ಸಿನ ಸೌರವ್ ಗಂಗೂಲಿ ಜನವರಿ 27ರಂದು ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 28ರಂದು ಗಂಗೂಲಿಗೆ ಆ್ಯಜಿಯೋಪ್ಲಾಸ್ಟಿ ನಡೆಸಿದ ಎರಡು ಸ್ಟಂಟ್‌ಗಳನ್ನು ಅಳವಡಿಸಲಾಗಿತ್ತು.  ಹೃದ್ರೋಗ ತಜ್ಞರಾದ ಕರ್ನಾಟಕ ಮೂಲದ ಡಾ. ದೇವಿ ಶೆಟ್ಟಿ ಹಾಗೂ ಡಾ. ಅಶ್ವಿನ್ ಮೆಹ್ತಾ ತಂಡ ಚಿಕಿತ್ಸೆ ಜವಾಬ್ದಾರಿ ಹೊತ್ತಿತ್ತು.

ಕ್ಯಾಲ್ಸಿಯಂ ಮಾತ್ರೆಗೂ ಹೃದಯಾಘಾತಕ್ಕೂ ಸಂಬಂಧ ಇದೇಯಾ?

ಇದಕ್ಕೂ ಮೊದಲು ಎದೆ ನೋವು ಕಾಣಿಸಿಕೊಂಡಿದ್ದರಿಂದ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದು. ಮನೆಯ ಜಿಮ್‌ನಲ್ಲಿದ್ದಾಗ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಆ ಸಂದರ್ಭದಲ್ಲಿ ಒಂದು ಸ್ಟಂಟ್ ಅಳವಡಿಸಿದ್ದ ತಜ್ಞ ವೈದ್ಯರು ಬಳಿಕ ಎರಡು ಸ್ಟಂಟ್‌ಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸುವ ನಿರ್ಧಾರ ಕೈಗೊಂಡಿದ್ದರು.

ಟೀಂ ಇಂಡಿಯಾಕ್ಕೆ ಗೆಲುವಿನ ರುಚಿ ಹಚ್ಚಿಸಿದ್ದ ನಾಯಕ ಭಾರತ ತಂಡವನ್ನು  2003  ರ ವಿಶ್ವಕಪ್ ಫೈನಲ್ ವರೆಗೆ ತಂಡವನ್ನು ತೆಗೆದುಕೊಂಡು ಹೋಗಿದ್ದರು.  ನಂತರ ಬದಲಾದ ಸ್ಥಿತಿಯಲ್ಲಿ ಬಿಸಿಸಿಐ ಅಧಿಕಾರದ ಚುಕ್ಕಾಣಿಯೂ ಗಂಗೂಲಿ ಕೈಸೇರಿತು.  ದುಬೈನಲ್ಲಿ ಕಳೆದ ವರ್ಷ ಯಶಸ್ವಿಯಾಗಿ ಐಪಿಎಲ್ ಟೂರ್ನಿಯನ್ನು   ಆಯೋಜಿಸಿದ್ದರು.

 

click me!