
ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಗೆಲುವಿನೊಂದಿಗೆ ವಿದಾಯ ಹೇಳಿದೆ. ಎಲೈಟ್ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಗುರುವಾರ ರಾಜ್ಯ ತಂಡ ಬರೋಡಾ ವಿರುದ್ಧ 8 ವಿಕೆಟ್‌ನಿಂದ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಬರೋಡಾ 20 ಓವರ್‌ಗಳಲ್ಲಿ ಕೇವಲ 118 ರನ್‌ಗೆ ಆಲೌಟಾಯಿತು. ಧ್ರುವ್ ಪಟೇಲ್ 33, ಶಾಶ್ವತ್ ರಾವತ್ 31 ರನ್ ಗಳಿಸಿದ್ದು ಬಿಟ್ಟರೆ ಇತರ ಬ್ಯಾಟರ್‌ಗಳಿಗೆ ಕರ್ನಾಟಕದ ದಾಳಿಯನ್ನು ಎದುರಿಸಲಾಗಲಿಲ್ಲ. ಶ್ರೀಶಾ ಆಚಾರ್ ಹಾಗೂ ವಿದ್ವತ್ ಕಾವೇರಪ್ಪ ತಲಾ 4 ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನತ್ತಿದ ರಾಜ್ಯ ತಂಡ 16.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 120 ರನ್ ಗಳಿಸಿತು. ರೋಹನ್ ಪಾಟೀಲ್ 48, ಕೃಷ್ಣನ್ ಶ್ರೀಜಿತ್ 33, ಕರುಣ್ ನಾಯರ್ ಔಟಾಗದೆ 30 ರನ್ ಸಿಡಿಸಿದರು.
ಈ ಗೆಲುವಿನೊಂದಿಗೆ ರಾಜ್ಯ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಯಿತು. ತಂಡ 7 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದ್ದು, 3ರಲ್ಲಿ ಸೋತಿದೆ. ಬಂಗಾಳ, ಉತ್ತರ ಪ್ರದೇಶ ಕೂಡಾ ತಲಾ 16 ಅಂಕದೊಂದಿಗೆ ಹೊರಬಿದ್ದವು. ಈ ಗುಂಪಿನಿಂದ ಬರೋಡಾ, ರಾಜಸ್ಥಾನ ಸೂಪರ್ ಲೀಗ್ ಪ್ರವೇಶಿಸಿದವು.
ಇದರೊಂದಿಗೆ ಸಯ್ಯದ್ ಮುಸ್ತಾಕ್ ಅಲಿ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಕರ್ನಾಟಕ ಹೊರಬಿದ್ದಿದೆ. ಉಳಿದಂತೆ 8 ತಂಡಗಳು ಸೂಪರ್ ಲೀಗ್ ಹಂತ ಪ್ರವೇಶಿಸಿವೆ. 'ಎ' ಗುಂಪಿನಲ್ಲಿ 7 ಪಂದ್ಯಗಳ ಪೈಕಿ ತಲಾ 5ರಲ್ಲಿ ಗೆದ್ದಿರುವ ಬರೋಡಾ, ರಾಜಸ್ಥಾನ, 'ಬಿ' ಗುಂಪಿನಲ್ಲಿ ತಲಾ 5 ಪಂದ್ಯಗಳಲ್ಲಿ ಜಯಗಳಿಸಿದ ಡೆಲ್ಲಿ, ಪಂಜಾಬ್, 'ಸಿ' ಗುಂಪಿನಲ್ಲಿ 6ರಲ್ಲಿ ಗೆದ್ದ ಆಂಧ್ರ, 5ರಲ್ಲಿ ಗೆದ್ದ ಕೇರಳ, 'ಡಿ' ಗುಂಪಿನಲ್ಲಿ ತಲಾ 6 ಪಂದ್ಯಗಳಲ್ಲಿ ಗೆದ್ದ ಮುಂಬೈ, ವಿದರ್ಭ ಸೂಪರ್ ಲೀಗ್ ಪ್ರವೇಶಿಸಿದವು. ಸೂಪರ್ ಲೀಗ್‌ನ 8 ತಂಡಗಳನ್ನು ತಲಾ 4 ತಂಡಗಳ 2 ಗುಂಪು ಗಳನ್ನಾಗಿ ವಿಂಗಡಿಸಲಾಗುತ್ತದೆ. ಪ್ರತಿ ತಂಡಕ್ಕೆ 3 ಪಂದ್ಯಗಳಿರಲಿವೆ. ಸೂಪರ್ ಲೀಗ್ ಮುಕ್ತಾಯಕ್ಕೆ 2 ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಡಿ.6ರಂದು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.