Syed Mushtaq Ali Trophy ಕ್ವಾರ್ಟರ್‌ ಫೈನಲ್‌: ಕರ್ನಾಟಕಕ್ಕಿಂದು ಬೆಂಗಾಲ್ ಸವಾಲು

By Suvarna News  |  First Published Nov 18, 2021, 10:18 AM IST

*  ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿಂದು ಕರ್ನಾಟಕ-ಬೆಂಗಾಲ್ ಮುಖಾಮುಖಿ

* ಸೆಮೀಸ್ ಮೇಲೆ ಕಣ್ಣಿಟ್ಟಿದೆ ಮನೀಶ್ ಪಾಂಡೆ ಬಳಗ

* ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಕರ್ನಾಟಕ?


ನವದೆಹಲಿ(ನ.18): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ (Syed Mushtaq Ali Trophy) ರೋಚಕ ಘಟ್ಟತಲುಪಿದ್ದು, ಕ್ವಾರ್ಟರ್‌ ಫೈನಲ್‌ನಲ್ಲಿ ಗುರುವಾರ ಮಾಜಿ ಚಾಂಪಿಯನ್‌ ಕರ್ನಾಟಕ (Karnataka Cricket Team), ಬೆಂಗಾಲ್‌ (Bengal Cricket Team) ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ ಬೆಂಗಾಲ್‌ ವಿರುದ್ಧ ಅನುಭವಿಸಿದ್ದ ಸೋಲಿಗೆ ರಾಜ್ಯ ತಂಡ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಎಲೈಟ್‌ ‘ಬಿ’ ಗುಂಪಿನಲ್ಲಿದ್ದ ಉಭಯ ತಂಡಗಳು, ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಗೆದ್ದು ಬೆಂಗಾಲ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದರೆ, 2ನೇ ಸ್ಥಾನ ಪಡೆದ ಕರ್ನಾಟಕ, ಪ್ರಿ ಕ್ವಾರ್ಟರ್‌ ಫೈನಲ್‌ ಆಡಬೇಕಾಯಿತು. ಪ್ರಿ ಕ್ವಾರ್ಟರ್‌ನಲ್ಲಿ ಸೌರಾಷ್ಟ್ರ ವಿರುದ್ಧ ಕೊನೆ ಓವರಲ್ಲಿ ಗೆದ್ದ ಮನೀಶ್‌ ಪಾಂಡೆ (Manish Pandey) ಪಡೆ, ಬೆಂಗಾಲ್‌ ವಿರುದ್ಧ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ. ಕಳೆದ ವರ್ಷ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದ ಕರ್ನಾಟಕ, ಈ ಬಾರಿ ಮತ್ತೆ ತಪ್ಪಾಗದಂತೆ ಎಚ್ಚರ ವಹಿಸಲು ಎದುರು ನೋಡುತ್ತಿದೆ.

Tap to resize

Latest Videos

undefined

ರಾಷ್ಟ್ರೀಯ ಮಹಿಳಾ ಏಕದಿನ: ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ | ಮುಷ್ತಾಕ್‌ ಅಲಿ: ಕ್ವಾರ್ಟರ್‌ಗೆ ಕರ್ನಾಟಕ!

ಅನುಭವಿ ಬ್ಯಾಟರ್‌ಗಳಾದ ಪಾಂಡೆ, ಕರುಣ್‌ ನಾಯರ್‌, ಅನಿರುದ್ಧ ಜೋಶಿ, ರೋಹನ್‌ ಕದಂ ಹೆಚ್ಚು ಜವಾಬ್ದಾರಿ ವಹಿಸಿ ಆಡಬೇಕಿದೆ. ಚೊಚ್ಚಲ ಪಂದ್ಯದಲ್ಲೇ 70 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದ್ದ ಅಭಿನವ್‌ ಮನೋಹರ್‌ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸ್ಪಿನ್ನರ್‌ಗಳಾದ ಜೆ.ಸುಚಿತ್‌ ಹಾಗೂ ಕೆ.ಸಿ.ಕರಿಯಪ್ಪ ಮೇಲೆ ನಾಯಕ ಪಾಂಡೆ ಹೆಚ್ಚು ವಿಶ್ವಾಸವಿರಿಸಿದ್ದಾರೆ. ಯುವ ವೇಗದ ಪಡೆ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಬೇಕಿದೆ.

Team Indiaದಲ್ಲಿ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ತುಟಿಬಿಚ್ಚಿದ ಕ್ಯಾಪ್ಟನ್ ರೋಹಿತ್ ಶರ್ಮಾ..!

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್, ಮಯಾಂಕ್‌ ಅಗರ್‌ವಾಲ್ ಹಾಗೂ ಪ್ರಸಿದ್ಧ್ ಕೃಷ್ಣ ಅನುಪಸ್ಥಿತಿಯ ಹೊರತಾಗಿಯೂ ಅಮೋಘ ಪ್ರದರ್ಶನ ತೋರುವ ಮೂಲಕ ಸೌರಾಷ್ಟ್ರ ಎದುರು ರೋಚಕ ಜಯ ಸಾಧಿಸಿತ್ತು. ಇದೀಗ ಅಂತಹದ್ದೇ ಪ್ರದರ್ಶನ ತೋರುವ ಮೂಲಕ ಸೆಮೀಸ್‌ಗೇರುವ ಲೆಕ್ಕಾಚಾರದಲ್ಲಿದೆ ಕರ್ನಾಟಕ ಕ್ರಿಕೆಟ್ ತಂಡ.

ಕ್ವಾರ್ಟರ್‌ ಫೈನಲ್‌ ಪಂದ್ಯಗಳು

ರಾಜಸ್ಥಾನ-ವಿದರ್ಭ, ಬೆಳಗ್ಗೆ 8.30ಕ್ಕೆ.
ತಮಿಳುನಾಡು-ಕೇರಳ, ಬೆಳಗ್ಗೆ 8.30ಕ್ಕೆ. 
ಕರ್ನಾಟಕ-ಬೆಂಗಾಲ್‌ ಮಧ್ಯಾಹ್ನ 1ಕ್ಕೆ, 
ಗುಜರಾತ್‌-ಹೈದರಾಬಾದ್‌, ಮಧ್ಯಾಹ್ನ 1ಕ್ಕೆ.

ಮಹಿಳಾ ಏಕದಿನ: ಕರ್ನಾಟಕ, ಪಂಜಾಬ್‌ ಸೆಮಿಫೈನಲ್‌ ಇಂದು

ಬೆಂಗಳೂರು: ಚೊಚ್ಚಲ ಬಾರಿಗೆ ರಾಷ್ಟ್ರೀಯ ಮಹಿಳಾ ಏಕದಿನ ಚಾಂಪಿಯನ್‌ (National Women's ODI Championships) ಆಗುವ ಉತ್ಸಾಹದಲ್ಲಿರುವ ಕರ್ನಾಟಕಕ್ಕೆ ಗುರುವಾರ ಸೆಮಿಫೈನಲ್‌ನಲ್ಲಿ ಬಲಿಷ್ಠ ಪಂಜಾಬ್‌ ಎದುರಾಗಲಿದೆ. ಇಲ್ಲಿನ ಆಲೂರು ಮೈದಾನದಲ್ಲಿ ಪಂದ್ಯ ನಡೆಯಲಿದೆ. 

ಗುಂಪು ಹಂತದಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಗೆದ್ದಿದ್ದ ಕರ್ನಾಟಕ, ಕ್ವಾರ್ಟರ್‌ ಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಜಯಗಳಿಸಿತ್ತು. ಮತ್ತೊಂದೆಡೆ ಪಂಜಾಬ್‌, ಗುಂಪು ಹಂತದಲ್ಲಿ ಒಂದು ಪಂದ್ಯ ಸೋತರೂ ನಾಕೌಟ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಪ್ರಿ ಕ್ವಾರ್ಟರ್‌ನಲ್ಲಿ ಗೋವಾ ವಿರುದ್ಧ ಜಯಿಸಿದ್ದ ಪಂಜಾಬ್‌, ಕ್ವಾರ್ಟರ್‌ ಫೈನಲ್‌ನಲ್ಲಿ ಮಹಾರಾಷ್ಟ್ರ ವಿರುದ್ಧ ದೊಡ್ಡ ಗೆಲುವು ಸಂಪಾದಿಸಿತ್ತು.

IPL 2022: ಲಖನೌ ಐಪಿಎಲ್ ತಂಡಕ್ಕೆ ಗ್ಯಾರಿ ಕರ್ಸ್ಟನ್‌ ಕೋಚ್‌..?

ಕಳೆದ ವರ್ಷ ಕರ್ನಾಟಕ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡಿತ್ತು. ಪಂಜಾಬ್‌ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಗುರುವಾರ 2ನೇ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ರೈಲ್ವೇಸ್‌ ಹಾಗೂ ಬೆಂಗಾಲ್‌ ಸೆಣಸಲಿವೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ


 

click me!