Syed Mushtaq Ali Trophy : ನಾಕೌಟ್ ಪಂದ್ಯಕ್ಕೆ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ, 4 ಮಹತ್ವದ ಬದಲಾವಣೆ..!

By Suvarna NewsFirst Published Nov 14, 2021, 10:16 AM IST
Highlights

* ಮುಷ್ತಾಕ್ ಅಲಿ ಟೂರ್ನಿಯ 4 ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

* ಮಹತ್ವದ ಪಂದ್ಯಕ್ಕೆ ಕರ್ನಾಟಕ ತಂಡದಲ್ಲಿ 4 ಬದಲಾವಣೆ

* ನವೆಂಬರ್ 16ರಂದು ಪ್ರೀ ಕ್ವಾರ್ಟರ್‌ ಫೈನಲ್ ಪಂದ್ಯ ಆರಂಭ

ಬೆಂಗಳೂರು(ನ.14): ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ (Syed Mushtaq Ali Trophy) ನಾಕೌಟ್‌ ಪಂದ್ಯಕ್ಕೆ ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) ಪ್ರಕಟಗೊಂಡಿದ್ದು, 4 ಬದಲಾವಣೆಗಳನ್ನು ಮಾಡಲಾಗಿದೆ. ಸದ್ಯ ಕರ್ನಾಟಕ ತಂಡವು ಡೆಲ್ಲಿಯಲ್ಲಿ ಬೀಡುಬಿಟ್ಟಿದ್ದು, ಮನೀಶ್ ಪಾಂಡೆ (Manish Pandey) ನಾಯಕರಾಗಿ ಮುಂದುವರೆಯಲಿದ್ದಾರೆ.

ಟೀಂ ಇಂಡಿಯಾ (Team India) ತಾರಾ ಅಟಗಾರರಾದ ಮಯಾಂಕ್‌ ಅಗರ್‌ವಾಲ್‌ (Mayank Agarwal) ಹಾಗೂ ಪ್ರಸಿದ್ಧ್ ಕೃಷ್ಣ, ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಇನ್ನು ಯುವ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ (Devdutt Padikkal) ಹಾಗೂ ಅನುಭವಿ ಆಲ್ರೌಂಡರ್‌ ಕೃಷ್ಣಪ್ಪ ಗೌತಮ್‌ ಭಾರತ 'ಎ' ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದಾರೆ. ಹೀಗಾಗಿ ಈ ನಾಲ್ವರು ಆಟಗಾರರ ಬದಲಿಗೆ ರವಿಕುಮಾರ್ ಸಮರ್ಥ್, ವಿ. ಕೌಶಿಕ್, ರಿತೇಶ್ ಭಟ್ಕಳ್ ಹಾಗೂ ಆದಿತ್ಯ ಸೋಮಣ್ಣ ಅವರಿಗೆ ಕರ್ನಾಟಕ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. 

Syed Mushtaq Ali Trophy: 4 ಮೇಡನ್‌ ಓವರ್‌ ಎಸೆದ ಮರುದಿನವೇ ಅಕ್ಷಯ್‌ಗೆ ಹ್ಯಾಟ್ರಿಕ್‌ !

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಎಲೈಟ್ 'ಬಿ' ಗ್ರೂಪ್‌ ಹಂತದಲ್ಲಿ ಎರಡನೇ ಸ್ಥಾನ ಪಡೆದಿದ್ದ ಕರ್ನಾಟಕ ತಂಡವು ಇದೀಗ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಾಟ ನಡೆಸಲಿದೆ. ನವೆಂಬರ್ 16ರಂದು ಕರ್ನಾಟಕ ತಂಡವು ಸೌರಾಷ್ಟ್ರ ವಿರುದ್ದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನಾಡಲಿದೆ. 

ಪ್ರೀ ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ತಂಡ ಹೀಗಿದೆ ನೋಡಿ:

ಮನೀಶ್ ಪಾಂಡೆ (ನಾಯಕ), ಕೆ.ವಿ. ಸಿದ್ದಾರ್ಥ್, ರೋಹನ್ ಕದಂ, ಅನಿರುದ್ದ್ ಜೋಶಿ, ಅಭಿನವ್ ಮನೋಹರ್, ಕರುಣ್ ನಾಯರ್, ರವಿಕುಮಾರ್ ಸಮರ್ಥ್, ಶರತ್ ಬಿ.ಆರ್ & ನಿಹಾಲ್ ಉಲ್ಲಾಳ್(ಇಬ್ಬರೂ ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಸುಚಿತ್ ಜೆ, ಪ್ರವಿಣ್ ದುಬೆ, ಕರಿಯಪ್ಪ ಕೆ.ಸಿ, ಪ್ರತೀಕ್ ಜೈನ್, ವಿ. ವಿಜಯಕುಮಾರ್, ದರ್ಶನ್‌ ಎಂ.ಬಿ, ವಿದ್ಯಾಧರ್ ಪಾಟೀಲ್, ರಿತೇಶ್ ಭಟ್ಕಳ್, ಆದಿತ್ಯ ಸೋಮಣ್ಣ, ಕೌಶಿಕ್ ವಿ.

ಇಂದಿನಿಂದ ಭುವನೇಶ್ವರದಲ್ಲಿ ಪುರುಷರ ಹಾಕಿ ಶಿಬಿರ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಐತಿಹಾಸಿಕ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ (Indian Hockey Team), ಮುಂದಿನ ತಿಂಗಳು ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಗೆ ಸಿದ್ಧತೆ ನಡೆಸಲು ಭಾನುವಾರದಿಂದ ಭುವನೇಶ್ವರದಲ್ಲಿ ಅಭ್ಯಾಸ ಶಿಬಿರ ಆರಂಭಿಸಲಿದೆ. 

FIH Hockey Awards: ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ

ನಾಯಕ ಮನ್‌ಪ್ರೀತ್‌ ಸಿಂಗ್‌, ಹಿರಿಯ ಗೋಲ್‌ಕೀಪರ್‌ ಶ್ರೀಜೇಶ್‌ ಸೇರಿ ಪ್ರಮುಖ ಆಟಗಾರರೆಲ್ಲರೂ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿ.9ರ ವರೆಗೂ ಶಿಬಿರ ನಡೆಯಲಿದೆ. ಡಿ.14ರಿಂದ 22ರ ವರೆಗೂ ಢಾಕಾದಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದ್ದು ಭಾರತ, ಪಾಕಿಸ್ತಾನ, ಕೊರಿಯಾ, ಜಪಾನ್‌, ಮಲೇಷ್ಯಾ, ಬಾಂಗ್ಲಾದೇಶ ತಂಡಗಳು ಸ್ಪರ್ಧಿಸಲಿವೆ.

ಚೊಚ್ಚಲ ರಾಷ್ಟ್ರೀಯ ಯೋಗ: ಮಹಾರಾಷ್ಟ್ರ ಚಾಂಪಿಯನ್‌

ಭುವನೇಶ್ವರ: ಚೊಚ್ಚಲ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಮಹಾರಾಷ್ಟ್ರ ಪ್ರಶಸ್ತಿ ಜಯಿಸಿದೆ. ತಮಿಳುನಾಡು 2ನೇ ಸ್ಥಾನ ಪಡೆದರೆ, ಪಶ್ಚಿಮ ಬಂಗಾಳ ಹಾಗೂ ಗೋವಾ ತಂಡಗಳು 3ನೇ ಸ್ಥಾನವನ್ನು ಹಂಚಿಕೊಂಡವು. 

ಬಾಲಕ, ಬಾಲಕಿಯರ ಸಬ್‌-ಜೂನಿಯರ್‌, ಜೂನಿಯರ್‌ ವೈಯಕ್ತಿಕ ಹಾಗೂ ತಂಡಗಳ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. 50 ಪದಕಗಳನ್ನು ಪ್ರದಾನ ಮಾಡಲಾಯಿತು. 30 ರಾಜ್ಯಗಳು 560ಕ್ಕೂ ಹೆಚ್ಚು ಯೋಗಾಪಟುಗಳು ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಯೋಗಾಸನ ಕ್ರೀಡಾ ಫೆಡರೇಷನ್‌(ಎನ್‌ವೈಎಸ್‌ಎಫ್‌) ಈ ಚಾಂಪಿಯನ್‌ಶಿಪ್‌ ಅನ್ನು ಆಯೋಜಿಸಿತ್ತು.

click me!