ಸಿಡ್ನಿ ಟೆಸ್ಟ್: ಜಡೇಜಾ ದಾಳಿಗೆ ತತ್ತರಿಸಿದ ಆಸೀಸ್‌ 338 ರನ್‌ಗಳಿಗೆ ಆಲೌಟ್

Suvarna News   | Asianet News
Published : Jan 08, 2021, 09:32 AM IST
ಸಿಡ್ನಿ ಟೆಸ್ಟ್: ಜಡೇಜಾ ದಾಳಿಗೆ ತತ್ತರಿಸಿದ ಆಸೀಸ್‌ 338 ರನ್‌ಗಳಿಗೆ ಆಲೌಟ್

ಸಾರಾಂಶ

ಸಿಡ್ನಿ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 338 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಸಿಡ್ನಿ(ಜ.08): ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಸಿಡ್ನಿ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 338 ರನ್‌ಗಳಿಗೆ ಸರ್ವಪತನ ಕಂಡಿದೆ. ಸ್ಟೀವ್‌ ಸ್ಮಿತ್ ಆಕರ್ಷಕ ಶತಕ(131)ದ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಹೌದು, ಊಟದ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 249 ರನ್‌ ಬಾರಿಸಿದ್ದ ಆಸ್ಟ್ರೇಲಿಯಾ ಆ ಬಳಿಕ ಮತ್ತೆ ನಾಟಕೀಯ ಕುಸಿತ ಕಂಡಿತು. ನಾಯಕ ಟಿಮ್ ಪೈನ್‌ ಕೇವಲ ಒಂದು ರನ್‌ ಬಾರಿಸಿ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರೆ, ಕಮಿನ್ಸ್‌ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ನೇಥನ್ ಲಯನ್ ಕೂಡಾ ಜಡೇಜಾ ಬೌಲಿಂಗ್‌ನಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

ಸಿಡ್ನಿ ಟೆಸ್ಟ್‌: ಲಬುಶೇನ್‌ಗೆ ಶತಕ ಮಿಸ್, ಜಡ್ಡುಗೆ 2 ವಿಕೆಟ್‌

27ನೇ ಟೆಸ್ಟ್‌ ಶತಕ ಬಾರಿಸಿದ ಸ್ಟೀವ್ ಸ್ಮಿತ್‌: ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸಲು ವಿಫಲವಾಗಿದ್ದ ಸ್ಟೀವ್ ಸ್ಮಿತ್‌, ಸಿಡ್ನಿ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾದರು. ಬರೋಬ್ಬರಿ 201 ಎಸೆತಗಳನ್ನು ಎದುರಿಸಿ ಸ್ಮಿತ್ ತಮ್ಮ ವೃತ್ತಿಜೀವನದ 27ನೇ ಟೆಸ್ಟ್ ಶತಕ ಪೂರೈಸಿದರು. ಭಾರತ ವಿರುದ್ದ ಅತಿ ಕಡಿಮೆ ಇನಿಂಗ್ಸ್‌ನಲ್ಲಿ 8ನೇ ಶತಕ ಪೂರೈಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾದರು. ಅಂತಿಮವಾಗಿ ಸ್ಟೀವ್ ಸ್ಮಿತ್ 226 ಎಸೆತಗಳನ್ನು ಎದುರಿಸಿ ಬೌಂಡರಿ ಸಹಿತ 131 ರನ್‌ ಬಾರಿಸಿ ಕೊನೆಯವರಾಗಿ ರನೌಟ್‌ ಆದರು.

ಮಿಂಚಿದ ಜಡ್ಡು: ಭಾರತ ರವೀಂದ್ರ ಜಡೇಜಾ ಕೇವಲ 62 ರನ್‌ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾಗೆ ಆಘಾತ ನೀಡಿದರು. ಇನ್ನು ಬುಮ್ರಾ 2, ಸೈನಿ ತಲಾ 2 ವಿಕೆಟ್ ಪಡೆದರೆ, ಸಿರಾಜ್ ಒಂದು ವಿಕೆಟ್‌ ಪಡೆದರು.

ಸಂಕ್ಪಿಪ್ತ ಸ್ಕೋರ್:


ಆಸ್ಟ್ರೇಲಿಯಾ338/10
ಸ್ಟೀವ್ ಸ್ಮಿತ್: 131
ರವೀಂದ್ರ ಜಡೇಜಾ: 62/4

(* ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ ಮುಕ್ತಾಯದ ವೇಳೆಗೆ)


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?