
ಮೆಲ್ಬರ್ನ್(ಜ.08): ಆಸ್ಪ್ರೇಲಿಯಾದ ಬಿಗ್‌ಬ್ಯಾಶ್ ಟಿ20 ಲೀಗ್ ಮತ್ತೊಂದು ವಿವಾದಕ್ಕೆ ಸಾಕ್ಷಿಯಾಗಿದೆ. ಶುಕ್ರವಾರ ಮೆಲ್ಬರ್ನ್ ಸ್ಟಾರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ನಡುವಿನ ಪಂದ್ಯದಲ್ಲಿ ಸಿಡ್ನಿಗೆ ಗೆಲ್ಲಲು 3 ಎಸೆತಗಳಲ್ಲಿ 2 ರನ್ ಬೇಕಿತ್ತು. ಲ್ಯೂಕ್ ವುಡ್‌ರ ಎಸೆತ ಜಾರ್ಡನ್ ಸಿಲ್ಕ್‌ರ ಬ್ಯಾಟ್‌ಗೆ ತಗುಲಿದೆ ಎಂದು ಸ್ಟಾರ್ಸ್ ನಾಯಕ ಆ್ಯಡಂ ಜಂಪಾ ಡಿಆರ್‌ಎಸ್ ಮೊರೆ ಹೋದರು.
ಆದರೆ ಬಾಲ್ ಬ್ಯಾಟ್‌ನಿಂದ ಸಾಕಷ್ಟು ದೂರದಲ್ಲಿ ಹಾದು ಹೋಗಿತ್ತು. ಆದರೆ ತಂತ್ರಜ್ಞಾನದ ದೋಷದಿಂದಾಗಿ ಬ್ಯಾಟ್‌ಗೆ ಬಾಲ್ ತಗುಲಿರುವುದಾಗಿ ಗೋಚರಿಸಿತು. ಹೀಗಾಗಿ 3ನೇ ಅಂಪೈರ್ ಔಟ್ ಎಂದು ತೀರ್ಪಿತ್ತರು. ಈ ಘಟನೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
3ನೇ ಟೆಸ್ಟ್: ಆಸೀಸ್‌ಗೆ ಒಲಿಯುತ್ತಾ ಗೆಲುವು?
ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ ಇನ್ನಿಂಗ್‌್ಸ ಜಯದ ನಿರೀಕ್ಷೆಯಲ್ಲಿದೆ. ಪಂದ್ಯದ 3ನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಬಲಿಯಾದ ಬಳಿಕ 2ನೇ ದಿನದಂತ್ಯಕ್ಕೆ ಗಳಿಸಿದ್ದ 4 ವಿಕೆಟ್‌ಗೆ 475 ರನ್‌ಗೇ ಇನ್ನಿಂಗ್‌್ಸ ಡಿಕ್ಲೇರ್ ಮಾಡಿಕೊಂಡ ಆಸ್ಪ್ರೇಲಿಯಾ, 4ನೇ ದಿನದಂತ್ಯಕ್ಕೆ ದ.ಆಫ್ರಿಕಾವನ್ನು ಮೊದಲ ಇನ್ನಿಂಗ್ಸಲ್ಲಿ 6 ವಿಕೆಟ್‌ಗೆ 149 ರನ್‌ಗೆ ನಿಯಂತ್ರಿಸಿತು. ಶನಿವಾರ ಕೇವಲ 59 ಓವರ್ ಆಟ ನಡೆಯಿತು. ಭಾನುವಾರ ಪಂದ್ಯದ ಕೊನೆ ದಿನವಾಗಿದ್ದು, ಆಸೀಸ್‌ಗೆ ಇನ್ನೂ 14 ವಿಕೆಟ್ ಅಗತ್ಯವಿದೆ. ಇನ್ನೂ 327 ರನ್ ಹಿನ್ನಡೆಯಲ್ಲಿರುವ ದ.ಆಫ್ರಿಕಾವನ್ನು ಮೊದಲ ಇನ್ನಿಂಗ್ಸಲ್ಲಿ ಆಲೌಟ್ ಮಾಡಿ ಫಾಲೋ ಆನ್ ಹೇರಿ ಮತ್ತೆ ಆಲೌಟ್ ಮಾಡಬೇಕಿದೆ.
ಮಹಿಳಾ ಐಪಿಎಲ್ ಹರಾಜು: ನೋಂದಣಿಗೆ ಜ.26ರ ಗಡುವು
ನವದೆಹಲಿ: ಚೊಚ್ಚಲ ಅವೃತ್ತಿಯ ಮಹಿಳಾ ಐಪಿಎಲ್‌ನ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಫೆಬ್ರವರಿಯಲ್ಲಿ ನಡೆಯಲಿದೆ. ಆಟಗಾರ್ತಿಯರಿಗೆ ನೋಂದಣಿ ಮಾಡಿಕೊಳ್ಳಲು ಬಿಸಿಸಿಐ ಜನವರಿ 26ರ ವರೆಗೂ ಕಾಲಾವಕಾಶ ನೀಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರ್ತಿಯರನ್ನು ಹರಾಜು ಪಟ್ಟಿಯಲ್ಲಿ 3 ವಿಭಾಗಗಳಾಗಿ ವಿಂಗಡಿಸಲಾಗಿದ್ದು, 50 ಲಕ್ಷ ರು, 40 ಲಕ್ಷ ರು. ಹಾಗೂ 30 ಲಕ್ಷ ರು. ಮೂಲಬೆಲೆ ನಿಗದಿಪಡಿಸಲಾಗಿದೆ.
ಬಿಗ್‌ಬ್ಯಾಶ್‌ನಲ್ಲಿ ರನೌಟ್ ವಿವಾದ; ಮಂಕಡಿಂಗ್ ರನೌಟ್ ಮಾಡಲು ಜಂಪಾ ಫೇಲ್..!
ಉಳಿದಂತೆ ಅಂ.ರಾ.ಕ್ರಿಕೆಟ್ ಆಡದ ಆಟಗಾರ್ತಿಯರಿಗೆ 20 ಲಕ್ಷ ರು. ಹಾಗೂ 10 ಲಕ್ಷ ರು. ಮೂಲಬೆಲೆ ನಿಗದಿಯಾಗಿದೆ. ಚೊಚ್ಚಲ ಆವೃತ್ತಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿದ್ದು, ಇನ್ನಷ್ಟೇ ತಂಡಗಳ ಖರೀದಿ ಪ್ರಕ್ರಿಯೆ ನಡೆಯಲಿದೆ. ತಂಡಗಳು ಖಚಿತಗೊಂಡ ಬಳಿಕ ಆಟಗಾರ್ತಿಯರ ಹರಾಜು ನಡೆಯಲಿದೆ.
ಬಿಸಿಸಿಐ ಆಯ್ಕೆ ಸಮಿತಿಗೆ ಮತ್ತೆ ಚೇತನ್ ಮುಖ್ಯಸ್ಥ
ನವದೆಹಲಿ: ಭಾರತ ಹಿರಿಯರ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಮರು ನೇಮಕಗೊಂಡಿದ್ದಾರೆ. ತ್ರಿಸದಸ್ಯರ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಯ ಸಂದರ್ಶನದ ಬಳಿಕ ಚೇತನ್‌ರನ್ನೇ ಮುಖ್ಯಸ್ಥರಾಗಿ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಶನಿವಾರ ಬಿಸಿಸಿಐ ಪ್ರಕಟಿಸಿದೆ.
ಚೇತನ್ ಕಳೆದ ಸಮಿತಿಯಲ್ಲಿದ್ದ ಏಕೈಕ ವ್ಯಕ್ತಿಯಾಗಿದ್ದು, ಉಳಿದಂತೆ ನಾಲ್ವರು ಹೊಸಬರನ್ನು ಸಮಿತಿಗೆ ನೇಮಕ ಮಾಡಲಾಗಿದೆ. ಕಿರಿಯರ ತಂಡದ ಆಯ್ಕೆಗಾರರಾಗಿದ್ದ ಎಸ್. ಶರತ್(ದಕ್ಷಿಣ ವಲಯ), ಶಿವಸುಂದರ್ ದಾಸ್(ಕೇಂದ್ರ ವಲಯ), ಸುಬ್ರತೋ ಬ್ಯಾನರ್ಜಿ(ಪೂರ್ವ ವಲಯ), ಸಲೀಲ್ ಅಂಕೋಲಾ(ಪಶ್ಚಿಮ ವಲಯ) ಕೂಡಾ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್ ಸೋಲಿನ ಬಳಿಕ ಚೇತನ್ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾ ಮಾಡಿತ್ತು. ಆದರೆ ಸಮಿತಿಗೆ ಮರು ಆಯ್ಕೆ ಬಯಸಿ ಚೇತನ್ ಅರ್ಜಿ ಸಲ್ಲಿಸಿದ್ದರು.
ನೂತನ ಆಯ್ಕೆ ಸಮಿತಿಯ ಸದಸ್ಯರ ನೇಮಕಕ್ಕೆ ನವೆಂಬರ್‌ನಲ್ಲಿ ಬಿಸಿಸಿಐ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಸುಮಾರು 600ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 11 ಅಭ್ಯರ್ಥಿಗಳನ್ನು ಸಿಎಸಿ ಅಂತಿಮ ಪಟ್ಟಿಗೆ ಸೇರಿಸಿತ್ತು. ಬಳಿಕ ಅವರನ್ನು ಸಂದರ್ಶನ ನಡೆಸಿ ಐವರನ್ನು ಆಯ್ಕೆ ಸಮಿತಿಗೆ ನೇಮಕಗೊಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.