Ind vs SL ಟಿ20ಯಲ್ಲಿ ವೇಗದ 1500 ರನ್‌: ಸೂರ್ಯಕುಮಾರ್ ಯಾದವ್ ದಾಖಲೆ!

By Naveen Kodase  |  First Published Jan 8, 2023, 10:08 AM IST

* ಲಂಕಾ ಎದುರು ಟಿ20 ಸರಣಿ ಗೆದ್ದ ಬೀಗಿದ ಟೀಂ ಇಂಡಿಯಾ
* ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರನಿಭಾಯಿಸಿದ ಸೂರ್ಯಕುಮಾರ್ ಯಾದವ್
* ಟಿ20 ವೇಗದ ರನ್‌ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಸೂರ್ಯ


ರಾಜ್‌ಕೋಟ್‌(ಜ.08): ಸರಣಿ ನಿರ್ಧರಿಸುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ, ಸೂರ್ಯಕುಮಾರ್‌ ಯಾದವ್‌ರ ವಿಸ್ಫೋಟಕ ಶತಕದ ನೆರವಿನಿಂದ ಬೃಹತ್‌ ಮೊತ್ತ ಕಲೆಹಾಕಿದ ಭಾರತ, ಬೌಲಿಂಗ್‌ನಲ್ಲಿ ಅತಿಯಾಗಿ ವೈಡ್‌ಗಳನ್ನು ಎಸೆದು ಎಡವಟ್ಟು ಮಾಡಿದರೂ 91 ರನ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಸತತ 7ನೇ ಸರಣಿ ಗೆಲುವು ಸಂಪಾದಿಸಿದ ಟೀಂ ಇಂಡಿಯಾ, ತವರಿನಲ್ಲಿ ಸತತ 12ನೇ ಸರಣಿಯಲ್ಲಿ ಅಜೇಯವಾಗಿ ಉಳಿಯಿತು. 6ನೇ ಯತ್ನದಲ್ಲಾದರೂ ಭಾರತ ನೆಲದಲ್ಲಿ ಟಿ20 ಸರಣಿ ಗೆಲ್ಲುವ ಶ್ರೀಲಂಕಾದ ಕನಸು ಕನಸಾಗಿಯೇ ಉಳಿಯಿತು. ಮೊದಲೆರಡು ಪಂದ್ಯಗಳಲ್ಲಿ ಕಂಡುಬರದ ಸಾಂಘಿಕ ಹೋರಾಟವನ್ನು ನಿರ್ಣಾಯಕ ಪಂದ್ಯದಲ್ಲಿ ತೋರಿ, ಭಾರತ ಟ್ರೋಫಿ ಎತ್ತಿಹಿಡಿಯಿತು.

ವಿಶ್ವ ನಂ.1 ಟಿ20 ಬ್ಯಾಟರ್‌ ಸೂರ್ಯಕುಮಾರ್‌ 2023ರ ಆರಂಭದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಅಂ.ರಾ.ಟಿ20ಯಲ್ಲಿ ಅತಿವೇಗವಾಗಿ 1500 ರನ್‌ ಪೂರೈಸಿದ ದಾಖಲೆ ಬರೆದರು. ಕೇವಲ 43 ಇನ್ನಿಂಗ್ಸಲ್ಲಿ (843 ಎಸೆತ) ಅವರು ಈ ಮೈಲಿಗಲ್ಲು ತಲುಪಿ ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಕಲಂರ ದಾಖಲೆ ಮುರಿದರು. ಮೆಕ್ಕಲಂ 49 ಇನ್ನಿಂಗ್ಸಲ್ಲಿ 1500 ರನ್‌ ಬಾರಿಸಿದ್ದರು.

Tap to resize

Latest Videos

ಸೂರ್ಯ 43 ಇನ್ನಿಂಗ್ಸಲ್ಲಿ 46.41ರ ಸರಾಸರಿಯಲ್ಲಿ 1578 ರನ್‌ ಕಲೆಹಾಕಿದ್ದಾರೆ. ಅವರ ಸ್ಟೆ್ರೖಕ್‌ರೇಟ್‌ 180.34 ಇದೆ. 3 ಶತಕ, 13 ಅರ್ಧಶತಕ ದಾಖಲಿಸಿದ್ದಾರೆ. ಭಾರತ ಪರ ಗರಿಷ್ಠ ರನ್‌ ಗಳಿಸಿದವರ ಪಟ್ಟಿಯಲ್ಲಿ ಸೂರ್ಯ ಸದ್ಯ 7ನೇ ಸ್ಥಾನದಲ್ಲಿದ್ದು, ಇನ್ನು 182 ರನ್‌ ಗಳಿಸಿದರೆ 4ನೇ ಸ್ಥಾನಕ್ಕೇರಲಿದ್ದಾರೆ.

ಮೂರು ಶತಕ: 2ನೇ ಭಾರತೀಯ

ಅಂ.ರಾ.ಟಿ20ಯಲ್ಲಿ ಸೂರ್ಯಕುಮಾರ್‌ 3 ಶತಕ ಬಾರಿಸಿದ್ದು, ಭಾರತ ಪರ ಅತಿಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ರೋಹಿತ್‌ ಶರ್ಮಾ 140 ಇನ್ನಿಂಗ್ಸ್‌ಗಳಲ್ಲಿ 4 ಶತಕ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಆರಂಭಿಕ ಕ್ರಮಾಂಕದಲ್ಲಿ ಆಡದೆ 3 ಶತಕ ಬಾರಿಸಿದ ವಿಶ್ವದ ಮೊದಲಿಗ ಎನ್ನುವ ದಾಖಲೆಯನ್ನೂ ಸೂರ್ಯ ಬರೆದಿದ್ದಾರೆ.

228 ರನ್‌: ಟಿ20ಯಲ್ಲಿ ಭಾರತದ 5ನೇ ಗರಿಷ್ಠ

228 ರನ್‌ ಟಿ20ಯಲ್ಲಿ ಭಾರತದ 5ನೇ ಅತಿದೊಡ್ಡ ಮೊತ್ತ ಎನಿಸಿದೆ. 2017ರಲ್ಲಿ ಲಂಕಾ ವಿರುದ್ಧವೇ ಇಂದೋರ್‌ನಲ್ಲಿ ಗಳಿಸಿದ್ದ 260 ರನ್‌ ತಂಡದ ಗರಿಷ್ಠ ಮೊತ್ತ ಎನಿಸಿದೆ. ಲಂಕಾ ವಿರುದ್ಧ ಭಾರತ 4 ಬಾರಿ 200ಕ್ಕೂ ಹೆಚ್ಚು ಮೊತ್ತ ದಾಖಲಿಸಿದೆ.

IND vs SL T20 ಸೂರ್ಯಕುಮಾರ್ ಸ್ಫೋಟಕ ಸೆಂಚುರಿ, ಶ್ರೀಲಂಕಾಗೆ 229 ರನ್ ಬೃಹತ್ ಗುರಿ!

25ನೇ ಬಾರಿ ಟಿ20ಯಲ್ಲಿ ಭಾರತ 200+ ರನ್‌: ದಾಖಲೆ!

ಅಂ.ರಾ.ಟಿ20ಯಲ್ಲಿ 25 ಬಾರಿ 200ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ತಂಡ ಎನ್ನುವ ದಾಖಲೆಯನ್ನು ಭಾರತ ಬರೆದಿದೆ. ಲಂಕಾ ವಿರುದ್ಧ ಬಾರಿಸಿದ 228 ರನ್‌ ಕಲೆಹಾಕುವ ಮೂಲಕ ಈ ಸಾಧನೆ ಮಾಡಿತು. 20 ಬಾರಿ 200ಕ್ಕೂ ಹೆಚ್ಚು ಗಳಿಸಿರುವ ದ.ಆಫ್ರಿಕಾ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ 18 ಬಾರಿ ಈ ಮೈಲಿಗಲ್ಲು ದಾಖಲಿಸಿದೆ. ನ್ಯೂಜಿಲೆಂಡ್‌ 17, ಆಸ್ಪ್ರೇಲಿಯಾ 16, ಪಾಕಿಸ್ತಾನ 11, ವೆಸ್ಟ್‌ಇಂಡೀಸ್‌ 10 ಬಾರಿ 200ಕ್ಕೂ ಹೆಚ್ಚು ರನ್‌ ಗಳಿಸಿವೆ.

3 ವರ್ಷದಲ್ಲಿ 20 ಸರಣಿ: ಭಾರತಕ್ಕೆ 17ರಲ್ಲಿ ಗೆಲುವು!

ಭಾರತಕ್ಕಿದು ಸತತ 7ನೇ ದ್ವಿಪಕ್ಷೀಯ ಟಿ20 ಸರಣಿ ಗೆಲುವು. ಅಲ್ಲದೇ 2019ರ ಮಾಚ್‌ರ್‍ನಿಂದ ಭಾರತ ಒಟ್ಟು 20 ದ್ವಿಪಕ್ಷೀಯ ಸರಣಿಗಳನ್ನು ಆಡಿದ್ದು 17ರಲ್ಲಿ ಗೆಲುವು ಸಾಧಿಸಿದೆ. 2021ರಲ್ಲಿ ಲಂಕಾ ಪ್ರವಾಸದಲ್ಲಿ 3 ಪಂದ್ಯಗಳ ಸರಣಿ ಸೋತರೆ, ದ.ಆಫ್ರಿಕಾ ವಿರುದ್ಧ 2019, 2022ರಲ್ಲಿ ಡ್ರಾ ಸಾಧಿಸಿತ್ತು.

click me!