ಅತಿ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರಾಯ್‌ಜಿ(100) ಇನ್ನಿಲ್ಲ

Suvarna News   | Asianet News
Published : Jun 13, 2020, 07:24 PM IST
ಅತಿ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರಾಯ್‌ಜಿ(100) ಇನ್ನಿಲ್ಲ

ಸಾರಾಂಶ

ಶತಾಯುಷಿ, ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರಾಯ್‌ಜಿ ಶನಿವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜೂ.13): ಭಾರತದ ಅತ್ಯಂತ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ, ಶತಾಯುಷಿ ವಸಂತ್ ರಾಯ್‌ಜಿ(100) ಶನಿವಾರ ದಕ್ಷಿಣ ಮುಂಬೈನ ವಾಲ್ಕೇಶ್ವರ್ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಯ್‌ಜಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ರಾಯ್‌ಜಿ 1940ರ ದಶಕದಲ್ಲಿ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 277 ರನ್ ಬಾರಿಸಿದ್ದರು. ರಾಯ್‌ಜಿ ವೈಯುಕ್ತಿಕ ಗರಿಷ್ಠ ಸ್ಕೋರ್ 68 ರನ್. 1941ರಲ್ಲಿ ವಿಜಯ್ ಮರ್ಚೆಂಟ್ ನಾಯಕರಾಗಿದ್ದಾಗ ಮುಂಬೈ ಪರ ವಸಂತ್ ರಾಯ್‌ಜಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ರಾಯ್‌ಜಿ ಬರೀ ಕ್ರಿಕೆಟ್ ಆಟಗಾರ ಮಾತ್ರ ಆಗಿರಲಿಲ್ಲ, ಬದಲಾಗಿ ಕ್ರಿಕೆಟ್ ಇತಿಹಾಸಕಾರ ಹಾಗೆಯೇ ಚಾರ್ಟೆಡ್ ಅಕೌಂಟೆಂಟ್ ಕೂಡಾ ಆಗಿದ್ದರು. ರಾಯ್‌ಜಿ 13 ವರ್ಷದವರಾಗಿದ್ದಾಗ ದಕ್ಷಿಣ ಮುಂಬೈನಲ್ಲಿರುವ ಬಾಂಬೆ ಜಿಮ್ಖಾನಾ ಮೈದಾನದಲ್ಲಿ ಟೀಂ ಇಂಡಿಯಾ ಮೊಟ್ಟ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು.

ಮಾಧ್ಯಮದ ಜೊತೆ ಮಾತನಾಡಿದರೆ ಅಮಾನತು; ನೌಕರರಿಗೆ BCCI ಎಚ್ಚರಿಕೆ!

ನೂರು ವರ್ಷ ತುಂಬಿದ ಗೌರವಾರ್ಥವಾಗಿ ಜನವರಿಯಲ್ಲಿ ಕ್ರಿಕೆಟ್‌ ದಿಗ್ಗಜರಾದ ಸಚಿನ್ ತೆಂಡುಲ್ಕರ್ ಹಾಗೂ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ವಾ ರಾಯ್‌ಜಿ ಅವರ ನಿವಾಸಕ್ಕೆ ಭೇಟಿ ನೀಡಿ 'ಸೆಂಚುರಿ' ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ರಾಯ್‌ಜಿ ಕ್ರಿಕೆಟ್ ಇತಿಹಾಸಕ್ಕೆ ಸಂಬಂಧಿಸಿದಂತೆ 8 ಅತ್ಯಮೂಲ್ಯ ಪುಸ್ತಕಗಳನ್ನು ಬರೆದಿದ್ದಾರೆ. ಸಿ.ಕೆ ನಾಯ್ಡು ಅಭಿಮಾನಿಯಾಗಿದ್ದ ರಾಯ್‌ಜಿ, ಸಿಕೆ ನಾಯ್ಡು, ದ ಶೆಹನ್ಸಾಹ ಆಫ್ ಇಂಡಿಯನ್ ಕ್ರಿಕೆಟ್ ಎನ್ನುವ ಪುಸ್ತಕವನ್ನೇ ಬರೆದಿದ್ದಾರೆ.

ವಸಂತ್ ರಾಯ್‌ಜಿ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕಂಬನಿ ಮಿಡಿದಿದ್ದಾರೆ. ಜೊತೆಗೆ ಅವರನ್ನು ನೂರನೇ ವರ್ಷದ ಹುಟ್ಟುಹಬ್ಬದಲ್ಲಿ ಭೇಟಿಯಾದ ಕ್ಷಣವನ್ನು ಮಾಸ್ಟರ್ ಬ್ಲಾಸ್ಟರ್ ಮೆಲುಕು ಹಾಕಿದ್ದಾರೆ.

ಇನ್ನು ಬಿಸಿಸಿಐ ಕೂಡಾ ರಾಯ್‌ಜಿ ನಿಧನಕ್ಕೆ ಸಂತಾಪ ಸೂಚಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?