2022ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದ ಸೂರ್ಯ , 2023ರಲ್ಲೂ ಟಿ20 ಮಾದರಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. 17 ಇನ್ನಿಂಗ್ಸ್‌ಗಳಲ್ಲಿ 48.86ರ ಸರಾಸರಿ, 155.95ರ ಸ್ಟ್ರೈಕ್‌ರೇಟ್‌ನಲ್ಲಿ 733 ರನ್ ಚಚ್ಚಿದ ಸೂರ್ಯ, ಕೆಲ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಅವಕಾಶವನ್ನೂ ಪಡೆದರು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವರ್ಷದ ಕೊನೆಯ ಟಿ20 ಪಂದ್ಯದಲ್ಲಿ, ದ.ಆಫ್ರಿಕಾ ವಿರುದ್ಧ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿದರು.
ದುಬೈ(ಜ.04): ಭಾರತದ ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್, 2023ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬುಧವಾರ, ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ತನ್ನ ವೆಬ್‌ಸೈಟ್‌ನಲ್ಲಿ ಅಭಿಮಾನಿಗಳು ವೋಟಿಂಗ್ ಮಾಡಲು ಅವಕಾಶ ಕಲ್ಪಿಸಿದೆ.
2022ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದ ಸೂರ್ಯ , 2023ರಲ್ಲೂ ಟಿ20 ಮಾದರಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. 17 ಇನ್ನಿಂಗ್ಸ್‌ಗಳಲ್ಲಿ 48.86ರ ಸರಾಸರಿ, 155.95ರ ಸ್ಟ್ರೈಕ್‌ರೇಟ್‌ನಲ್ಲಿ 733 ರನ್ ಚಚ್ಚಿದ ಸೂರ್ಯ, ಕೆಲ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಅವಕಾಶವನ್ನೂ ಪಡೆದರು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವರ್ಷದ ಕೊನೆಯ ಟಿ20 ಪಂದ್ಯದಲ್ಲಿ, ದ.ಆಫ್ರಿಕಾ ವಿರುದ್ಧ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿದರು.
💥 Two stylish batters
🔥 Two brilliant all-rounders
The shortlist for the ICC Men’s T20I Cricketer of the Year 2023 is out ⬇️
ಈ ರೇಸ್‌ನಲ್ಲಿರುವ ಉಳಿದ ಮೂವರೆಂದರೆ ಅದು ಜಿಂಬಾಬ್ವೆಯ ಸಿಕಂದರ್ ರಾಜಾ (11 ಇನ್ನಿಂಗ್ಸ್, 515 ರನ್), ಉಗಾಂಡದ ಅಲ್ಪೇಶ್ ರಾಮ್ಜಾನಿ (55 ವಿಕೆಟ್) ಹಾಗೂ ನ್ಯೂಜಿಲೆಂಡ್‌ನ ಮಾರ್ಕ್ ಚಾಪ್ಮನ್ (17 ಇನ್ನಿಂಗ್ಸಲ್ಲಿ 556 ರನ್).
Cape Town Test 23 ವಿಕೆಟ್ ಪತನದೊಂದಿಗೆ 2024 ಆರಂಭ: ಸಚಿನ್ ತೆಂಡುಲ್ಕರ್ ಟ್ವೀಟ್ ವೈರಲ್
ಇನ್ನು ಇದೇ ವೇಳೆ ಭಾರತದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಐಸಿಸಿ ವರ್ಷದ ಉದಯೋನ್ಮುಖ ಆಟಗಾರ ಎನ್ನುವ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇನ್ನುಳಿದಂತೆ ಐಸಿಸಿ ಉದಯೋನ್ಮುಖ ಆಟಗಾರರ ರೇಸ್‌ನಲ್ಲಿ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ, ದಕ್ಷಿಣ ಆಫ್ರಿಕಾದ ಗೆರಾರ್ಲ್ಡ್ ಕೋಟ್ಜೀ ಹಾಗೂ ಶ್ರೀಲಂಕಾದ ದಿಲ್ಷ್ಶಾನ್ ಮಧುಶನಕ ಸ್ಥಾನ ಪಡೆದಿದ್ದಾರೆ.
A pair of exciting fast bowlers and two classy left-hand batters are in the running for ICC Men’s Emerging Cricketer of the Year honours for 2023 🏆
More 👉 https://t.co/GOydtt3DE6 pic.twitter.com/0fkTLAf4DI
ಯಶಸ್ವಿ ಜೈಸ್ವಾಲ್ 2023ರಲ್ಲಿ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅಮೋಘ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಜೈಸ್ವಾಲ್ ಟೆಸ್ಟ್‌ನಲ್ಲಿ 70ರ ಸರಾಸರಿಯಲ್ಲಿ 283 ಹಾಗೂ ಟಿ20 ಕ್ರಿಕೆಟ್‌ನಲ್ಲಿ 430 ರನ್ ಬಾರಿಸಿ ಅಬ್ಬರಿಸಿದ್ದಾರೆ. ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜೈಸ್ವಾಲ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.