‘2024ನೇ ಇಸವಿ ಒಂದೇ ದಿನ 23 ವಿಕೆಟ್‌ ಪತನಗೊಳ್ಳುವುದರೊಂದಿಗೆ ಆರಂಭಗೊಂಡಿದೆ. ದ.ಆಫ್ರಿಕಾ ಮೊದಲ ಇನ್ನಿಂಗ್ಸಲ್ಲಿ ಆಲೌಟ್‌ ಆದಾಗ ನಾನು ವಿಮಾನ ಹತ್ತಿದೆ. ಮನೆಗೆ ವಾಪಸಾಗಿ ಟೀವಿ ಹಾಕಿದರೆ, ದ.ಆಫ್ರಿಕಾ ಆಗಲೇ 2ನೇ ಇನ್ನಿಂಗ್ಸಲ್ಲಿ 3 ವಿಕೆಟ್‌ ಕಳೆದುಕೊಂಡಿದೆ’ ಎಂದು ಬರೆದಿದ್ದಾರೆ.

ನವದೆಹಲಿ(ಜ.04): ಭಾರತ-ದ.ಆಫ್ರಿಕಾ 2ನೇ ಟೆಸ್ಟ್‌ನ ಮೊದಲ ದಿನವೇ 23 ವಿಕೆಟ್‌ಗಳು ಪತನಗೊಂಡಿದ್ದಕ್ಕೆ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೊದಲ ದಿನವೇ 23 ವಿಕೆಟ್‌ ಪತನಕ್ಕೆ ಕೇಪ್‌ಟೌನ್‌ ಪಂದ್ಯ ಸಾಕ್ಷಿಯಾಯಿತು. ಇದು ಟೆಸ್ಟ್‌ ಪಂದ್ಯದ ಮೊದಲ ದಿನ ಪತನಗೊಂಡ ಒಟ್ಟು ವಿಕೆಟ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. 1902ರಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್‌ ನಡುವಿನ ಪಂದ್ಯದ ಮೊದಲ ದಿನ ಒಟ್ಟು 25 ವಿಕೆಟ್‌ಗಳು ಬಿದ್ದಿದ್ದು, ಈಗಲೂ ದಾಖಲೆಯಾಗಿ ಉಳಿದಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘2024ನೇ ಇಸವಿ ಒಂದೇ ದಿನ 23 ವಿಕೆಟ್‌ ಪತನಗೊಳ್ಳುವುದರೊಂದಿಗೆ ಆರಂಭಗೊಂಡಿದೆ. ದ.ಆಫ್ರಿಕಾ ಮೊದಲ ಇನ್ನಿಂಗ್ಸಲ್ಲಿ ಆಲೌಟ್‌ ಆದಾಗ ನಾನು ವಿಮಾನ ಹತ್ತಿದೆ. ಮನೆಗೆ ವಾಪಸಾಗಿ ಟೀವಿ ಹಾಕಿದರೆ, ದ.ಆಫ್ರಿಕಾ ಆಗಲೇ 2ನೇ ಇನ್ನಿಂಗ್ಸಲ್ಲಿ 3 ವಿಕೆಟ್‌ ಕಳೆದುಕೊಂಡಿದೆ’ ಎಂದು ಬರೆದಿದ್ದಾರೆ.

Scroll to load tweet…

ಸ್ಕೋರ್‌ ಏರಿಕೆಯಾಗದೆ ಸತತ 6 ವಿಕೆಟ್‌: ಮೊದಲು!

153ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ಭಾರತ, ಆ ಮೊತ್ತಕ್ಕೆ ಒಂದೂ ರನ್‌ ಸೇರಿಸದೆ ಉಳಿದ 6 ವಿಕೆಟ್‌ಗಳನ್ನೂ ಕಳೆದುಕೊಂಡಿತು. ಸ್ಕೋರ್‌ ಏರಿಕೆಯಾಗದೆ ತಂಡವೊಂದು ಸತತ 6 ವಿಕೆಟ್‌ ಕಳೆದುಕೊಂಡಿದ್ದು, ಅಂ.ರಾ. ಕ್ರಿಕೆಟ್‌ನಲ್ಲಿ ಇದೇ ಮೊದಲು.

153ಕ್ಕೆ 4 ವಿಕೆಟ್, 153ಕ್ಕೆ ಆಲೌಟ್, ಒಂದೂ ರನ್‌ಗಳಿಸದೇ 6 ವಿಕೆಟ್ ಕಳೆದುಕೊಂಡ ಭಾರತ!

55 ರನ್‌: ಟೆಸ್ಟ್‌ನಲ್ಲಿ ಭಾರತ ವಿರುದ್ಧ ಕನಿಷ್ಠ!

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55 ರನ್‌ಗೆ ಆಲೌಟ್‌ ಆದ ದ.ಆಫ್ರಿಕಾ, ಭಾರತ ವಿರುದ್ಧ ಟೆಸ್ಟ್‌ನಲ್ಲಿ ಕನಿಷ್ಠ ರನ್‌ ದಾಖಲಿಸಿದ ತಂಡ ಎನ್ನುವ ಅಪಖ್ಯಾತಿಗೆ ಗುರಿಯಾಯಿತು. ಈ ಮೊದಲು 2021ರಲ್ಲಿ ನ್ಯೂಜಿಲೆಂಡ್‌ ಗಳಿಸಿದ್ದ 62 ರನ್‌ ಕನಿಷ್ಠ ಮೊತ್ತದ ದಾಖಲೆ ಆಗಿತ್ತು.

ಕೇಪ್‌ಟೌನ್‌ನಲ್ಲಿ ಸಿರಾಜ್ ಬಿರುಗಾಳಿ ಬೌಲಿಂಗ್‌; 55 ರನ್‌ಗೆ ಹರಿಣಗಳು ಧೂಳೀಪಟ..!

1932ರ ಬಳಿಕ ಟೆಸ್ಟ್‌ನಲ್ಲಿ ದ.ಆಫ್ರಿಕಾ ಕನಿಷ್ಠ ಸ್ಕೋರ್‌!

55 ರನ್‌ಗೆ ಆಲೌಟ್‌ ಆಗುವ ಮೂಲಕ, ದ.ಆಫ್ರಿಕಾ 1932 ಬಳಿಕ ಟೆಸ್ಟ್‌ನಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು. 1932ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದ.ಆಫ್ರಿಕಾ ವಿರುದ್ಧ 36 ರನ್‌ಗೆ ಆಲೌಟ್‌ ಆಗಿತ್ತು. ಅದೇ ಪಂದ್ಯದ 2ನೇ ಇನ್ನಿಂಗ್ಸಲ್ಲಿ 45 ರನ್‌ಗೆ ಮುಗ್ಗರಿಸಿತ್ತು.

ಮಣೀಂದರ್‌ ದಾಖಲೆ ಸರಿಗಟ್ಟಿದ ಸಿರಾಜ್‌!

ಟೆಸ್ಟ್‌ ಪಂದ್ಯವೊಂದರ ಮೊದಲ ದಿನದಾಟದ ಮೊದಲ ಅವಧಿಯಲ್ಲೇ 5 ವಿಕೆಟ್‌ ಗೊಂಚಲು ಪಡೆದ ಭಾರತದ 2ನೇ ಬೌಲರ್‌ ಎನ್ನುವ ಹಿರಿಮೆಗೆ ಮೊಹಮದ್‌ ಸಿರಾಜ್‌ ಪಾತ್ರರಾದರು. 1987ರಲ್ಲಿ ಬೆಂಗಳೂರಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಟೆಸ್ಟ್‌ನಲ್ಲಿ ಮಣೀಂದರ್‌ ಸಿಂಗ್‌ ಈ ಸಾಧನೆ ಮಾಡಿದ್ದರು.

02ನೇ ಕನಿಷ್ಠ

ಈ ಟೆಸ್ಟ್‌ನ ಮೊದಲೆರಡು ಇನ್ನಿಂಗ್ಸ್‌ಗಳು ಕೇವಲ 349 ಎಸೆತಗಳಲ್ಲಿ ಮುಗಿದವು. ಇದು 2ನೇ ಕನಿಷ್ಠ. 1902ರಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್‌ ಟೆಸ್ಟ್‌ನ ಮೊದಲೆರಡು ಇನ್ನಿಂಗ್ಸ್‌ 287 ಎಸೆತದಲ್ಲಿ ಮುಗಿದಿತ್ತು.