Suryakumar Yadav T20 World Cup: ಅಭ್ಯಾಸ ಮಾಡಲ್ಲ, ಕ್ರಿಕೆಟ್‌ ಬಗ್ಗೆ ಮಾತಾಡಲ್ಲ, ಹೆಂಡ್ತಿ ಜೊತೆ ಟೈಮ್‌ ಕಳೆಯೋದು ಅಷ್ಟೆ..!

By Santosh Naik  |  First Published Sep 17, 2022, 7:36 PM IST

ಸೂರ್ಯಕುಮಾರ್ ಕೆಲ ಸಮಯದಿಂದ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಅವರು ಏಷ್ಯಾಕಪ್‌ನಲ್ಲಿ ಹಾಂಗ್ ಕಾಂಗ್ ವಿರುದ್ಧ 68 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಸೂರ್ಯಕುಮಾರ್ ಕಳೆದ 5 ಪಂದ್ಯಗಳನ್ನು ಟಿ20 ಮಾದರಿಯಲ್ಲಿ ಮಾತ್ರ ಆಡಿದ್ದು, ಇದರಿಂದ ಅವರು 139 ರನ್ ಗಳಿಸಿದ್ದಾರೆ. ಇದೀಗ ಸೂರ್ಯಕುಮಾರ್ ಪಂದ್ಯಕ್ಕೂ ಮುನ್ನ ತಮ್ಮ ಗೇಮ್ ಪ್ಲಾನ್ ಬಹಿರಂಗಪಡಿಸಿದ್ದಾರೆ.


ಬೆಂಗಳೂರು (ಸೆ.17): ಏಷ್ಯಾಕಪ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಇದೀಗ 2022ರ ಟಿ20 ವಿಶ್ವಕಪ್‌ಗೆ ಸಜ್ಜಾಗಿದ್ದಾರೆ. ಈಗಾಗಲೇ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿರುವ ಸೂರ್ಯಕುಮಾರ್‌ ಇತ್ತೀಚೆಗಷ್ಟೇ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಸೂರ್ಯಕುಮಾರ್ ಅವರು ವಿಶ್ವಕಪ್‌ಗೂ ಮುನ್ನ ತಮ್ಮ ಗೇಮ್ ಪ್ಲಾನ್‌ನ ಬಗ್ಗೆ ಕೆಲವು ಮಾಹಿತಿ ಬಹಿರಂಗಪಡಿಸಿದ್ದಾರೆ. ಪಂದ್ಯಕ್ಕೆ ಎರಡು ದಿನ ಮೊದಲು ಬ್ಯಾಟ್‌ ಕೂಡ ಮುಟ್ಟುವುದಿಲ್ಲ ಎಂದು ಸೂರ್ಯಕುಮಾರ್‌ ಹೇಳಿದ್ದಾರೆ. ಪಂದ್ಯಕ್ಕೆ ಒಂದು ದಿನ ಮೊದಲು ಅವರು ತಮ್ಮ ರಜೆಯ ಸಮಯವನ್ನು ಕಳೆಯುತ್ತಾರೆ. ಈ ಸಮಯದಲ್ಲಿ, ಅವರು ತಮ್ಮ ಹೆಂಡತಿಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾರೆ ಮತ್ತು ಕ್ರಿಕೆಟ್ ಬಗ್ಗೆ ಒಂದು ಸ್ವಲ್ಪವೂ ಮಾತನಾಡುವುದಿಲ್ಲ. ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಪಂದ್ಯಕ್ಕೆ ಒಂದು ದಿನ ಮೊದಲು ಸೂರ್ಯಕುಮಾರ್ ಏನು ಗೇಮ್ ಪ್ಲಾನ್ ಮಾಡುತ್ತಾರೆ ಎನ್ನುವ ಪ್ರಶ್ನೆಯನ್ನು ಈ ವೇಳೆ ಕೇಳಲಾಯಿತು. ನೀವು ನೆಟ್ಸ್‌ನಲ್ಲಿ ತೀವ್ರವಾಗಿ ಅಭ್ಯಾಸ ಮಾಡುತ್ತೀರಾ ಅಥವಾ ಬೇರೆ ಯಾವುದಾದರೂ ತಂತ್ರದಲ್ಲಿ ಕೆಲಸ ಮಾಡುತ್ತೀರಾ ಎಂದು ಪ್ರಶ್ನಿಸಲಾಯಿತು.

ನಾಲ್ಕು ವರ್ಷದಿಂದ ಇದೇ ಅಭ್ಯಾಸ: ಈ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್ (Suryakumar Yadav), 'ಕಳೆದ 4 ವರ್ಷಗಳಿಂದ ನಾನು ಅದೇ ತಂತ್ರವನ್ನು ಅನುಸರಿಸಿದ್ದೇನೆ. ಇದರಿಂದ ನನಗೂ ಸಾಕಷ್ಟು ಲಾಭವಾಗಿದೆ. ಪಂದ್ಯಕ್ಕೂ ಮುನ್ನ ಒಂದು ದಿನ ರಜೆ ತೆಗೆದುಕೊಳ್ಳುತ್ತೇನೆ. ಏನೇ ಅಭ್ಯಾಸ ಮಾಡಬೇಕೋ ಅದನ್ನು ಎರಡು ದಿನ ಮುಂಚಿತವಾಗಿಯೇ ಮಾಡುತ್ತೇನೆ. ಸರಿಯಾಗಿ ಹಿಂದಿನ ದಿನ, ನಾನು ನನ್ನ ಹೆಂಡತಿಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ ಮತ್ತು ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ. ಈ ಕುರಿತಾಗಿ ಮತ್ತಷ್ಟು ವಿವರಣೆ ನೀಡಿದ ಸೂರ್ಯಕುಮಾರ್, 'ನಾನು ಚೆನ್ನಾಗಿ ಆಡಲಿ ಅಥವಾ ಇಲ್ಲದಿರಲಿ, ನನ್ನ ಹೆಂಡತಿ ಪ್ರತಿ ಸನ್ನಿವೇಶದಲ್ಲಿ ನನಗೆ ಬೆಂಬಲ ನೀಡುತ್ತಾಳೆ. ನಾನು ಚೆನ್ನಾಗಿ ಆಡ್ತೀನೋ ಅಥವಾ ಇಲ್ಲವೋ,  ನಾನು ಹೇಗಿದ್ದೀನೋ ಹಾಗೆಯೇ ಇರಬೇಕು ಎನ್ನುವ ಮಾತನ್ನು ನನ್ನ ಮನಸ್ಸಿನಲ್ಲಿ ಆಕೆ ಬಿತ್ತಿದ್ದಾಳೆ ಎಂದು ಹೇಳಿದ್ದಾರೆ.

'ICC T20 World Cup ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ವಿದಾಯ ಘೋಷಿಸಬಹುದು..!'

ಸೂರ್ಯಕುಮಾರ್ ಕೆಲ ಸಮಯದಿಂದ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಅವರು ಏಷ್ಯಾಕಪ್‌ನಲ್ಲಿ (Asia Cup) ಹಾಂಗ್ ಕಾಂಗ್ (Hong Kong) ವಿರುದ್ಧ 68 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಸೂರ್ಯ ಇದುವರೆಗೆ ಟೀಂ ಇಂಡಿಯಾ (Team India) ಪರ 13 ಏಕದಿನ ಹಾಗೂ 28 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಸೂರ್ಯ ಏಕದಿನದಲ್ಲಿ(T20 World Cup) 340 ರನ್ ಮತ್ತು ಟಿ20ಯಲ್ಲಿ 811 ರನ್ ಗಳಿಸಿದ್ದಾರೆ. ಸೂರ್ಯ ಟಿ20ಯಲ್ಲೂ ಶತಕ ಸಿಡಿಸಿದ್ದಾರೆ.

Tap to resize

Latest Videos

ICC T20 World Cup: ಇಂಡೋ-ಪಾಕ್‌ ಪಂದ್ಯದ ಹೆಚ್ಚುವರಿ ಟಿಕೆಟ್ಸ್‌ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್‌..!

ಸೂರ್ಯಕುಮಾರ್ ಯಾದವ್ ಅವರಿಗೆ 32 ವರ್ಷ ತುಂಬಿದೆ. ಅವರು ಬುಧವಾರವಷ್ಟೇ (ಸೆಪ್ಟೆಂಬರ್ 14) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದರೊಂದಿಗೆ ಸೂರ್ಯ ಕೆಲವು ವಿಡಿಯೋ ಮತ್ತು ಫೋಟೋಗಳನ್ನು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್ ಪತ್ನಿ ದೇವಿಶಾ ಕೂಡ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಳ್ಳುವಾಗ ರೊಮ್ಯಾಂಟಿಕ್ ಪೋಸ್ಟ್ ಅನ್ನು ಸಹ ಅವರು ಬರೆದಿದ್ದಾರೆ. ದೇವಿಶಾ (Devisha) ಜೊತೆ ಸೂರ್ಯ ಮೊದಲ ಭೇಟಿಯಾಗಿದ್ದು 2012 ರಲ್ಲಿ. ಆಗ 22 ವರ್ಷದ ಸೂರ್ಯ ಮುಂಬೈನ ಪೊದ್ದಾರ್ ಪದವಿ ಕಾಲೇಜಿನಲ್ಲಿಸೂರ್ಯ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದರು. 19 ವರ್ಷದ ದೇವಿಶಾ ಪಿಯುಸಿಗಾಗಿ ಆಗಷ್ಟೇ ಕಾಲೇಜಿಗೆ ಬಂದಿದ್ದರು. ದೇವಿಶಾ ಅವರ ಡ್ಯಾನ್ಸ್ ಸೂರ್ಯ ತುಂಬಾ ಇಷ್ಟಪಟ್ಟಿದ್ದಾರೆ. ದೇವಿಶಾ ಕೂಡ ಸೂರ್ಯನ ಬ್ಯಾಟಿಂಗ್ ಅನ್ನು ತುಂಬಾ ಇಷ್ಟಪಟ್ಟಿದ್ದಾರೆ. ಇಲ್ಲಿಂದ ಇಬ್ಬರೂ ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 2016 ರಲ್ಲಿ ವಿವಾಹವಾದರು.

click me!