
ಮುಂಬೈ(ಜು.10): ಬ್ಯಾಟಿಂಗ್ ದಿಗ್ಗಜ ತಮ್ಮ 71ನೇ ಹಟ್ಟು ಹಬ್ಬವನ್ನು ಸ್ಮರಣೀಯವಾಗಿದ್ದಾರೆ. ಬಡ ಹಾಗೂ ನಿರ್ಗತಿಕ ಮಕ್ಕಳ ಹಾರ್ಟ್ ಸರ್ಜರಿಗೆ ನೆರವಾಗಿದ್ದಾರೆ. 35 ನವಿ ಮುಂಬೈನಲ್ಲಿರುವ ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಯಲ್ಲಿ 35 ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಿಸಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಗವಾಸ್ಕರ್ ಭರಿಸಿದ್ದಾರೆ.
ಸಹಜ ಸ್ಥಿತಿಗೆ ಮರಳುವವರೆಗೆ ಬ್ರ್ಯಾಂಡ್ ಪ್ರಮೋಶನ್ ಮಾಡಲ್ಲ ಎಂದ ಧೋನಿ!...
ಕಳೆದ ವರ್ಷ ಸುನಿಲ್ ಗವಾಸ್ಕರ್ ತಮ್ಮ ಹುಟ್ಟು ಹಬ್ಬಕ್ಕೆ 34 ಮಕ್ಕಳ ಹಾರ್ಟ್ ಸರ್ಜರಿಗೆ ನೆರವಾಗಿದ್ದರು. ಈ ಬಾರಿ 35 ಮಕ್ಕಳಿಗೆ ನೆರವಾಗಿದ್ದಾರೆ. ಭಾರತದಲ್ಲಿ ಹುಟ್ಟುವ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದು ದುರದೃಷ್ಟಕರ. ಮಕ್ಕಳ ಪ್ರತಿ ಮನೆಯ ಬೆಳಕು. ಮನೆಯ ಸಂತೋಷ ಮಕ್ಕಳೇ ಆಗಿರುತ್ತಾರೆ. ಆರ್ಥಿಕ ಸಮಸ್ಯೆಯಿಂದ ಮಕ್ಕಳ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಾಗದ ಪೋಷಕರು ಹಾಗೂ ಆ ಮಕ್ಕಳಿಗೆ ಹೊಸ ಬದುಕು ನೀಡುವುದರಲ್ಲಿ ಅತೀವ ಸಂತಸವಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ದಿಲ್ಲಿಯ ಪಾಕಿಸ್ತಾನ ಹಿಂದೂ ನಿರಾಶ್ರಿತ ಕ್ಯಾಂಪ್‌ಗೆ ಧವನ್ ಭೇಟಿ!...
ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆ ಸಹಾಯ ಇಲ್ಲಿ ಸ್ಮರಿಸಬೇಕು ಎಂದು ಗವಾಸ್ಕರ್ ಹೇಳಿದ್ದಾರೆ. ಭಾರತದ ಮಕ್ಕಳಲ್ಲಿ ಈ ಹಾರ್ಟ್ ಸರ್ಜರಿ ಹೆಚ್ಚಾಗುತ್ತಿದೆ. ಇದು ಉತ್ತಮವಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ವಿಶ್ವ ಕಂಡ ದಿಗ್ಗಜ ಕ್ರಿಕೆಟಿಗ. 125 ಟೆಸ್ಟ್ ಪಂದ್ಯಗಳಿಂದ 10,122 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ 34 ಶತಕ ಸಿಡಿಸಿದ್ದಾರೆ. 108 ಏಕದಿನ ಪಂದ್ಯದಿಂದ 3,092 ರನ್ ಸಿಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.