ಅಳಿಯ ಕೆ ಎಲ್ ರಾಹುಲ್‌ಗೆ ವಾರ್ನಿಂಗ್ ಕೊಟ್ಟ ಮಾವ ಸುನಿಲ್ ಶೆಟ್ಟಿ..!

By Naveen Kodase  |  First Published Jul 16, 2023, 6:15 PM IST

ತಮ್ಮ ಅಳಿಯ ಕೆ ಎಲ್ ರಾಹುಲ್ ಕುರಿತಂತೆ ತುಟಿಬಿಚ್ಚಿದ ಸುನಿಲ್ ಶೆಟ್ಟಿ
ಮಗಳು ಆತಿಯಾ ಶೆಟ್ಟಿಗೆ ಉಪಯುಕ್ತ ಸಲಹೆ ನೀಡಿದ ಸುನಿಲ್ ಶೆಟ್ಟಿ
ನಿಮ್ಮನ್ನು ಕಂಡರೆ ಕೀಳರಿಮೆ ಮೂಡುತ್ತಿದೆ ಎಂದಿದ್ದೇಕೆ ಶೆಟ್ಟಿ?


ಮುಂಬೈ(ಜು.16): ಈ ವರ್ಷಾರಂಭದಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್‌, ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಾಧ್ಯಮವೊಂದರ ಜತೆ ಮಾತನಾಡುವ ವೇಳೆಯಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ, ತಮ್ಮ ಮಗಳಿಗೆ ಕೆ ಎಲ್ ರಾಹುಲ್ ಅವರ ಸಂಕಷ್ಟದ ಸಂದರ್ಭದಲ್ಲಿ ಅವರ ಜತೆಗಿರುವಂತೆ ಕಿವಿ ಮಾತು ಹೇಳಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸುನಿಲ್ ಶೆಟ್ಟಿ, ತಮ್ಮ ಅಳಿಯ ಕೆ ಎಲ್ ರಾಹುಲ್‌ಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಇದೇ ವೇಳೆ ತಮ್ಮ ಮಗಳಿಗೂ ಉಪಯುಕ್ತ ಸಲಹೆ ನೀಡಿದ್ದಾರೆ. 

ಹೌದು, ಮಿಡ್‌-ಡೇ, ಮಾಧ್ಯಮದೊಂದಿಗೆ ಮಾತನಾಡಿರುವ ಸುನಿಲ್ ಶೆಟ್ಟಿ, ಕೆ ಎಲ್ ರಾಹುಲ್‌ ಉದ್ದೇಶಿಸಿ, ನೀನು ಇಷ್ಟೊಂದು ತೀರಾ ಒಳ್ಳೆಯನಾಗಿರಬೇಡ. ಇದು ನಮಗೆ ನಮ್ಮ ಬಗ್ಗೆ ಕೀಳರಿಮೆಯನ್ನುಂಟು ಮಾಡುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ. ಮುಂದುವರೆದು, ನೀನು ಇಷ್ಟೊಂದು ಒಳ್ಳೆಯನಾಗಿರಬೇಡ. ನೀನು ಅಷ್ಟೊಂದು ಒಳ್ಳೆಯ ವ್ಯಕ್ತಿ. ನೀನು ಅದೃಷ್ಟವಂತೆ ಎಂದು ನನ್ನ ಮಗಳು ಆತಿಯಾಗೆ ನಾನು ಆಗಾಗ ಹೇಳುತ್ತಲೇ ಇರುತ್ತೇನೆ. ಕೇವಲ ಆತಿಯಾ ಮಾತ್ರವಲ್ಲ, ಇಡೀ ಕುಟುಂಬವೇ ಕೆ ಎಲ್ ರಾಹುಲ್ ಅವರನ್ನು ಅಳಿಯನಾಗಿ ಪಡೆದಿದ್ದಕ್ಕೆ ನಮ್ಮ ಸೌಭಾಗ್ಯವೆಂದು ಭಾವಿಸುತ್ತೇನೆ" ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.

Tap to resize

Latest Videos

RCB ಮ್ಯಾನೇಜ್‌ಮೆಂಟ್‌ ನಂಬಿಸಿ ಮೋಸ ಮಾಡಿತು..! ಬೆಂಗಳೂರು ಫ್ರಾಂಚೈಸಿ ವಿರುದ್ದ ನೊಂದು ನುಡಿದ ಚಹಲ್..!

ಇನ್ನು ಸುನಿಲ್ ಶೆಟ್ಟಿ ತಮ್ಮ ಪುತ್ರಿ ಆತಿಯಾ ಶೆಟ್ಟಿ ಅವರಿಗೆ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ. " ನಮ್ಮ ಜತೆಗಾರನನ್ನು ಸುಮ್ಮನೆ ಕಣ್ಮುಚ್ಚಿಕೊಂಡು ನಂಬಿ ಬಿಡಬೇಕು. ಅವನ ಮೇಲೆ ಸಂಪೂರ್ಣ ವಿಶ್ವಾಸವಿಡಬೇಕು. ಮತ್ತೆ ಅವರೊಬ್ಬ ಅಥ್ಲೀಟ್‌. ಹೀಗಾಗಿ ಆತ ಪ್ರವಾಸ ಮಾಡುತ್ತಲೇ ಇರುತ್ತಾನೆ. ಎಲ್ಲಾ ಸಮಯದಲ್ಲೂ ಆತನೊಟ್ಟಿಗೆ ನೀನು ಪ್ರಯಾಣ ಮಾಡಲು ಸಾಧ್ಯವಿಲ್ಲ. ಆದರೆ ಆತನ ಜತೆಗಿರು, ಸಿನಿಮಾ ರಂಗದಂತೆ ಕ್ರೀಡಾಪಟುಗಳು ಏಳು ಬೀಳುಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಯಾವಾಗೆಲ್ಲ ಆತ ರನ್‌ ಬಾರಿಸುತ್ತಾರೋ ಆಗ ಅವರು ಯಶಸ್ಸಿನ ಉತ್ತುಂಗದಲ್ಲಿರುತ್ತಾರೆ. ನನ್ನ ಜೀವನದಲ್ಲಿ ನಾನು ಸುನಿಲ್ ಗವಾಸ್ಕರ್ ಅವರನ್ನು ಹೆಚ್ಚು ನಂಬುತ್ತೇನೆ. ನನ್ನ ಕೊನೆಯುಸಿರಿರುವ ವರೆಗೂ ಅವರೇ ನನ್ನ ಹೀರೋ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.

ಹಲವು ವರ್ಷಗಳ ಡೇಟಿಂಗ್ ಬಳಿಕ ಆತಿಯಾ ಶೆಟ್ಟಿ ಕಳೆದ ಜನವರಿ 23, 2023ರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರನ್ನು ಕೈಹಿಡಿದಿದ್ದರು. ಈ ತಾರಾ ಜೋಡಿಯ ಮದುವೆಯು ಖಂಡೋಲಾದಲ್ಲಿರುವ ಸುನಿಲ್ ಶೆಟ್ಟಿ ಫಾರ್ಮ್‌ ಹೌಸ್‌ನಲ್ಲಿ ನಡೆದಿತ್ತು. ಈ ಮದುವೆಯ ವೇಳೆ ಎರಡು ಕುಟುಂಬಗಳ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

click me!