ಭಾರತದ ಪರ ಆಡಿದ್ದು ಕೇವಲ 2 ಟಿ20 ಪಂದ್ಯ, ಈಗ ಜ್ಯೂನಿಯರ್ ತಂಡದ ಚೀಫ್ ಸೆಲೆಕ್ಟರ್! ಕನ್ನಡಿಗನಿಗೆ ಸಿಗಲಿಲ್ಲ ಚಾನ್ಸ್

Published : Oct 23, 2026, 06:37 PM IST
Parvinder Awana new chairperson of junior selection committee

ಸಾರಾಂಶ

ಟೀಂ ಇಂಡಿಯಾದ ಕಿರಿಯರ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರನ್ನಾಗಿ ಮಾಜಿ ವೇಗಿ ಪರ್ವಿಂದರ್ ಅವಾನ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ. ಈ ಸ್ಥಾನದ ರೇಸ್‌ನಲ್ಲಿದ್ದ ಕನ್ನಡಿಗ ದೊಡ್ಡ ಗಣೇಶ್‌ಗೆ ನಿರಾಸೆಯಾಗಿದೆ. ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಅವಾನ್ ಅವರು ವಿವಿಧ ವಯೋಮಿತಿಯ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಪ್ರಗ್ಯಾನ್ ಓಜಾ ಅವರು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ.. ಬಿಸಿಸಿಐ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಹಿರಿಯ ತಂಡದ ಆಯ್ಕೆಗಾರನ ನೇಮಕ ಬೆನ್ನಲ್ಲೇ ಕಿರಿಯರ ಆಯ್ಕೆ ಸಮಿತಿಗೆ ಮುಖ್ಯಸ್ಥರನ್ನ ನೇಮಕ ಮಾಡಿದೆ. ಟೀಂ ಇಂಡಿಯಾದ ಮಾಜಿ ವೇಗಿಗೆ ಬಿಸಿಸಿಐ ಮಣೆ ಹಾಕಿದೆ. ಈ ರೇಸ್‌ನಲ್ಲಿ ಕನ್ನಡಗಿ ದೊಡ್ಡ ಗಣೇಶ್ ಹೆಸರು ಕೇಳಿಬಂದಿರುವ ಬಗ್ಗೆ ವರದಿಯಾಗಿತ್ತು.

ಮಾಜಿ ವೇಗದ ಬೌಲರ್ ಪರ್ವಿಂದರ್ ಅವಾನ್ ಅವರನ್ನು ಕಿರಿಯ ತಂಡದ ಮುಖ್ಯ ಆಯ್ಕೆಗಾರರನ್ನಾಗಿ ಬಿಸಿಸಿಐ ನೇಮಕ ಮಾಡಿದೆ. ಇವತ್ತು ಮಧ್ಯಾಹ್ನ ಬಿಸಿಸಿಐ ಈ ಮಹತ್ವದ ಘೋಷಣೆಯನ್ನ ಮಾಡಿದೆ. ಬಿಸಿಸಿಐನ ಹೊಸ ಆಯ್ಕೆ ಸಮಿತಿಯಲ್ಲಿ ಕೃಷ್ಣ ದಾಸ್, ರಾಕೇಶ್ ಪಟೇಲ್ ಮತ್ತು ಎನ್. ಅರ್ಜುನ್ ಯಾದವ್ ಕೂಡ ಇದ್ದಾರೆ. ಅವರನ್ನು ವಿವಿಧ ವಲಯಗಳಿಗೆ ಆಯ್ಕೆದಾರರಾಗಿ ಬಿಸಿಸಿಐ ನೇಮಕ ಮಾಡಿದೆ.

ಹಾಗಿದ್ದರೆ.. ಪರ್ವಿಂದರ್ ಅವಾನ್ ಯಾರು ಅನ್ನೋ ವಿವರ ಹೀಗಿದೆ.. ನೋಯ್ಡಾದ ಹರೋಲಾ ಗ್ರಾಮದಿಂದ ಐಪಿಎಲ್ ಮೂಲಕ ಪರಿಚತರಾದರು. ನಂತರ ಟೀಂ ಇಂಡಿಯಾದಲ್ಲಿ ಸ್ಥಾನಪಡೆದು, ಅಷ್ಟೇ ವೇಗದಲ್ಲಿ ಮರೆಯಾದರು. ಇವರನ್ನು ಹರೋಲಾ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ಪರ್ವಿಂದರ್ ಅವಾನ ಭಾರತಕ್ಕಾಗಿ ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಹೀಗಾಗಿ 2018 ರಲ್ಲಿ ಅಂದರೆ ತಮ್ಮ 31ನೇ ವಯಸ್ಸಿನಲ್ಲಿ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು.

ಪರ್ವಿಂದರ್ ಅವಾನ್ 2004ರಲ್ಲಿ ಪರ್ವಿಂದರ್ ಅವಾನ್ ಇಎಸ್‌ಪಿಎನ್ ಮಹೀಂದ್ರಾ ಸ್ಕಾಪಿಯೋ ಸ್ಪೀಡ್‌ಸ್ಟರ್ ಟ್ಯಾಲೆಂಟ್ ಹಂಟ್ ಗೆದ್ದು ಬೀಗಿದರು. ಅಲ್ಲಿ ಅವರನ್ನು ವೇಗದ ಬೌಲರ್ ಎಂದು ಹೆಸರಿಸಲಾಯಿತು. ನಂತರ ಆಸ್ಟ್ರೇಲಿಯಾ ವೇಗಿ ಡೇಮಿಯನ್ ಫ್ಲೆಮಿಂಗ್ ಜೊತೆ ತರಬೇತಿ ಪಡೆಯುವ ಅವಕಾಶ ನೀಡಲಾಯಿತು. 20, 2012ರಂದು ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕೆ ಇಳಿಯುವ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಎಂಟ್ರಿಕೊಟ್ಟರು. ಅದೇ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳನ್ನ ಆಡಿದರು. ಅದೇ ಅವರ ಕೊನೆಯ ಪಂದ್ಯವಾಗಿ ಪರಿಣಮಿಸಿತು.

ದೇಸಿಯ ಕ್ರಿಕೆಟ್‌ನಲ್ಲಿ ಪರ್ವಿಂದರ್ ಸಾಧನೆ!

  • ಡಿಸೆಂಬರ್ 1, 2007 ರಂದು ಮೊದಲ ಪ್ರಥಮ ದರ್ಜೆ ಪಂದ್ಯ
  • 2007 ರಿಂದ 2016 ರವರೆಗೆ ದೆಹಲಿಯನ್ನು ಪ್ರತಿನಿಧಿಸಿದರು
  • 29.23 ರ ಸರಾಸರಿಯಲ್ಲಿ 191 ಪ್ರಥಮ ದರ್ಜೆ ವಿಕೆಟ್‌ ಪಡೆದರು
  • ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು
  • 2014ರ ಐಪಿಎಲ್ ಸೀಸನ್ ಕೊನೆಯ ಪಂದ್ಯವಾಗಿತ್ತು

ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಅವರು ಕೋಚಿಂಗ್‌ಗೆ ಮೇಲೆ ಗಮನ ಹರಿಸಿದರು. ದೆಹಲಿಯ U16, U19 ಮತ್ತು U23 ತಂಡಗಳೊಂದಿಗೆ ಕೆಲಸ ಮಾಡಿದರು. ಹಾಗೆಯೇ ಭಾರತ U19 ಮತ್ತು BCCI/ಸೆಂಟರ್ ಆಫ್ ಎಕ್ಸಲೆನ್ಸ್‌ನ ಹಲವಾರು ಉನ್ನತ-ಕಾರ್ಯಕ್ಷಮತೆಯ ಕಾರ್ಯಕ್ರಮಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನು ಟೀಂ ಇಂಡಿಯಾ ಜ್ಯೂನಿಯರ್ ಆಯ್ಕೆ ಸಮಿತಿಗೆ ಕನ್ನಡಿಗ ದೊಡ್ಡ ಗಣೇಶ್ ಆಯ್ಕೆ ಆಗುತ್ತಾರೆ ಎನ್ನಲಾಗಿತ್ತು. ಇದೀಗ ದೊಡ್ಡ ಗಣೇಶ್ ಬದಲಿಗೆ ಪರ್ವಿಂದರ್ ಅವಾನ್‌ಗೆ ಮಣೆ ಹಾಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಯಾಪೈಸೆ ಕಿಮ್ಮತ್ತಿಲ್ಲದೆ ಐಪಿಎಲ್‌ನಿಂದ ರಿಜೆಕ್ಟ್‌ ಆದ ಪ್ಲೇಯರ್‌ ಈಗ ಪಾಕಿಸ್ತಾನ ಸೂಪರ್‌ ಲೀಗ್‌ನ ಅತ್ಯಂತ ದುಬಾರಿ ಆಟಗಾರ!
IPL 2027 ಮಿನಿ ಹರಾಜಿಗೂ ಮುನ್ನ ಈ 3 ಆಟಗಾರರಿಗೆ ಆರ್‌ಸಿಬಿ ಗೇಟ್‌ಪಾಸ್..? ಈ ಮ್ಯಾಚ್‌ ವಿನ್ನರ್‌ನ ಕೈಬಿಡುತ್ತಾ ಬೆಂಗಳೂರು ಫ್ರಾಂಚೈಸಿ?