ಈ ಸಲ್ ಕಪ್ ನಿಮ್ದೆ; RCB ಟ್ರೋಲ್ ಮಾಡಿದ CSK!

By Suvarna NewsFirst Published May 26, 2020, 2:54 PM IST
Highlights

ಈ ಸಲ ಕಪ್ ನಮ್ದೆ ಅನ್ನೋ ಅಭಿಮಾನಿಗಳ ಅಭಿಯಾನ ಭಾರಿ ಸದ್ದು ಮಾಡಿದೆ. ಆದರೆ RCB ಮಾತ್ರ ಪ್ರಶಸ್ತಿ ಗೆಲ್ಲಲೇ ಇಲ್ಲ. ಈ ಬಾರಿ ಕೊರೋನಾ ವೈರಸ್ ಕಾರಣ ಐಪಿಎಲ್ ಸ್ಥಗಿತಗೊಂಡಿದೆ. ಇಜರ ಬೆನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸಲ ಕಪ್ ನಿಮ್ದೆ ಅಂತ ಟ್ರೋಲ್ ಮಾಡಿದೆ.  

ಬೆಂಗಳೂರು(ಮೇ.26):IPL ಟೂರ್ನಿಯಲ್ಲಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB)ಪ್ರಶಸ್ತಿ ಕೊರತೆಯನ್ನು ನೀಗಿಸಿಕೊಂಡಿಲ್ಲ. ಕಳೆದ ಕೆಲ ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಸಲ್ ಕಪ್ ನಮ್ದೆ ಅನ್ನೋ ಅಭಿಯಾನ ಭಾರಿ ಸದ್ದು ಮಾಡಿತ್ತು. ಈ ಅಭಿಯಾನ ಆರಂಭವಾದ ಬಳಿಕ RCB ನಾಕೌಟ್ ಪ್ರವೇಶವೂ ಕಷ್ಟವಾಗಿತ್ತು. ಬೆಂಗಳೂರು ಫ್ರಾಂಚೈಸಿಗಳಾದ ಫುಟ್ಬಾಲ್, ಬ್ಯಾಡ್ಮಿಂಟನ್, ಕಬಡ್ಡಿ ಎಲ್ಲಾ ತಂಡಗಳು ಕಪ್ ಗೆದ್ದಾಗಿದೆ. ಆದರೆ RCB ಸರದಿ ಬರಲೇ ಇಲ್ಲ. ಹೀಗಾಗಿ CSK ಸೇರಿದಂತೆ ಇತರ ತಂಡದ ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಭಿಯಾನಕ್ಕೆ ಟ್ರೋಲ್ ಮಾಡಿದ್ದರು. ಇದೀಗ  CSKಕೆ ಈ ಸಲ್ ಕಪ್ ನಿಮ್ದೆ ಅಂತ ಟ್ರೋಲ್ ಮಾಡಿದೆ. 

ಅಕ್ಟೋ​ಬರ್‌-ನವೆಂಬರ್‌ನಲ್ಲಿ ಐಪಿ​ಎಲ್‌ ಟಿ20 ಟೂರ್ನಿ, BCCI ಕಸರತ್ತು ಆರಂಭ?

ಲಾಕ್‌ಡೌನ್ ಕಾರಣ ಐಪಿಎಲ್ ಟೂರ್ನಿ ತಾತ್ಕಾಲಿಕ ಸ್ಥಗಿತಗೊಂಡಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣದಲ್ಲಿ ವೋಟಿಂಗ್ ಆರಂಂಭಿಸಿತ್ತು. 8 ತಂಡಗಳಲ್ಲಿ ಗರಿಷ್ಠ ಮತ ಸಿಗುವ ತಂಡ ವಿಜಯಶಾಲಿ ಎಂದು ಆರ್‌ಸಿಬಿ ಅಭಿಯಾನ ಆರಂಭಿಸಿತ್ತು. ಲೀಗ್ ಹಂತ, ಪ್ಲೇ ಆಫ್, ಫೈನಲ್ ಹೀಗೆ ಎಲ್ಲಾ ಹಂತದಲ್ಲಿ RCB ಗರಿಷ್ಠ ಮತಗಳನ್ನು ಪಡೆದಿತ್ತು. ಪೈನಲ್ ರೌಂಡ್‌ನಲ್ಲಿ ಸೈನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ RCB ಇಂಡಿಯನ್ ಪೋಲ್ ಲೀಗ್‌ನಲ್ಲಿ ಚಾಂಪಿಯನ್ ಆಗಿದೆ.

 

A big thank you to everyone who made RCB the champions of the by voting consistently, every day for the last 55 days. In the final, beat with an incredible 8️⃣5️⃣% of the votes! 🏆 pic.twitter.com/1WBbU4WCU1

— Royal Challengers Bangalore (@RCBTweets)

IPL 2020 ಸಂಪೂರ್ಣ ರದ್ದಾದರೆ BCCIಗೆ ಆಗುವ ನಷ್ಟವೆಷ್ಟು? ಇಲ್ಲಿದೆ ವಿವರ!

ಈ ಸಂತಸವನ್ನು RCB ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿತ್ತು. ಇಷ್ಟೇ ಅಲ್ಲ, ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ ಎಂದಿತ್ತು. ಇದಕ್ಕೆ ಪ್ರತಿಕ್ರಿಯೆಸಿರುವ ಚೆನ್ನೈ ಸೂಪರ್ ಕಿಂಗ್ಸ್. ಈ ಬಾರಿ ಕಪ್ ನಿಮ್ದೆ ಎಂದು ಟ್ರೋಲ್ ಮಾಡಿದೆ.

 

😍 pic.twitter.com/8c706fXxDb

— Chennai Super Kings (@ChennaiIPL)

13ನೇ ಆವೃತ್ತಿ IPL ಟೂರ್ನಿಗೆ RCB ತಂಡದ ಬಲಿಷ್ಠ ತಂಡವನ್ನ ಸಜ್ಜುಗೊಳಿಸಿತ್ತು. ತಂಡದ ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ, ಕೋಟ್, ನಿರ್ದೇಶಕ ಸೇರಿದಂತೆ ಎಲ್ಲವೂ ಬದಲಾಗಿತ್ತು. ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿ ಸಮತೋಲನದ ತಂಡ ರೆಡಿ ಮಾಡಿತ್ತು. ಅಷ್ಟರಲ್ಲೇ ಕೊರೋನಾ ವೈರಸ್ ವಕ್ಕರಿಸಿ ಟೂರ್ನಿ ಸ್ಥಗಿತಗೊಂಡಿತು. 

click me!