ಶ್ರೀಲಂಕಾ ಕ್ಯಾಪ್ಟನ್‌ಗೆ ಕೋಚ್ ಆಗಿದ್ದ ವ್ಯಕ್ತಿಯ ದುರಂತ ಸಾವು! ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು?

Published : Aug 14, 2026, 10:46 AM IST
cricket ball

ಸಾರಾಂಶ

ಕುಡಿಯುವ ನೀರಿನ ವಿಚಾರದಲ್ಲಿ ನಡೆದ ಜಗಳದಲ್ಲಿ ಮಧ್ಯಪ್ರವೇಶಿಸಿದ ಶ್ರೀಲಂಕಾದ 62 ವರ್ಷದ ಕ್ರಿಕೆಟ್ ಕೋಚ್ ಸುಮಿತ್ ಫೆರ್ನಾಂಡೊ ಗಾಯಗೊಂಡು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಆಟಗಾರನನ್ನು ಬಂಧಿಸಲಾಗಿದ್ದು, ಫೆರ್ನಾಂಡೊ ಅವರ ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

ಕೊಲಂಬೊ: ಕುಡಿಯುವ ನೀರಿನ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ಶ್ರೀಲಂಕಾದ 62 ವರ್ಷದ ಕೋಚ್‌ ಸುಮಿತ್‌ ಫೆರ್ನಾಂಡೊ ನಿಧನರಾಗಿದ್ದಾರೆ. ಶ್ರೀಲಂಕಾ ಏಕದಿನ ತಂಡದ ನಾಯಕ ಕುಸಾಲ್ ಮೆಂಡಿಸ್ ಸೇರಿದಂತೆ ಹಲವು ಯುವ ಕ್ರಿಕೆಟಿಗರಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಸುಮಿತ್‌ ಫೆರ್ನಾಂಡೊ ಮೈದಾನದಲ್ಲಿಯೇ ದುರಂತ ಸಾವು ಕಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಆಗಸ್ಟ್‌ 8ರಂದು ಅಕಾಡೆಮಿಯೊಂದರಲ್ಲಿ ಆಟಗಾರರು ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ನೀರಿನ ವಿಚಾರದಲ್ಲಿ ಮಾತಿನ ಘರ್ಷಣೆ ನಡೆದಿದೆ. ಈ ವೇಳೆ ಸುಮಿತ್‌ ಮಧ್ಯಪ್ರವೇಶಿಸಿದ್ದಾರೆ. ಆದರೆ ಗಲಾಟೆಯಲ್ಲಿ ಅವರಿಗೆ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಎರಡು ದಿನಗಳ ಬಳಿಕ ಅಂದರೆ ಆಗಸ್ಟ್‌ 10ರ ಮಂಗಳವಾರ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಕೊಲಂಬೊ ಮ್ಯಾಜಿಸ್ಟೇಟ್ ಕೋರ್ಟ್ ಆಗಸ್ಟ್‌ 11ರಂದು ಅಪ್ರಾಪ್ತ ಆಗಿರುವುದರಿಂದ ಆತನನ್ನು ಬಾಲ ಮಂದಿರಕ್ಕೆ ಸೇರಿಸಲಾಗಿದೆ.

ಪೊಲೀಸರ ಪ್ರಕಾರ, ವಾಗ್ವಾದದ ವೇಳೆ ಫರ್ನಾಂಡೋ ಆಟಗಾರನೊಬ್ಬನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆಗ 17 ವರ್ಷದ ಆ ಆಟಗಾರ ಆತನಿಗೆ ಹೊಡೆದಿದ್ದಾನೆ ಎಂದು ವರದಿಯಾಗಿದೆ. ನಂತರ ತೀವ್ರವಾಗಿ ಗಾಯಗೊಂಡ ಫರ್ನಾಂಡೋ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸಾವಿನ ತನಿಖೆ ಆರಂಭಿಸಿರುವ ಪೊಲೀಸರು

ಆದಾಗ್ಯೂ, ಅವರ ಸಾವಿಗೆ ಸಂಬಂಧಿಸಿದ ಸಂದರ್ಭಗಳ ಕುರಿತು ತನಿಖೆ ನಡೆಯುತ್ತಿದೆ. ಫರ್ನಾಂಡೋ ಅವರಿಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆ ಇತ್ತೆಂದು ವೈದ್ಯಕೀಯ ದಾಖಲೆಗಳು ಸೂಚಿಸಿವೆ; ಹೀಗಾಗಿ, ಅವರ ಸಾವಿಗೆ ಆರೋಪಿತ ಹಲ್ಲೆ ಕಾರಣವೋ ಅಥವಾ ಆಂತರಿಕ ವೈದ್ಯಕೀಯ ಸಮಸ್ಯೆಯೋ ಎಂಬುದನ್ನು ನಿರ್ಧರಿಸಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ನ್ಯಾಯಾಂಗ ವೈದ್ಯಾಧಿಕಾರಿಯು ನಿರ್ದಿಷ್ಟ ತೀರ್ಮಾನಕ್ಕೆ ಬರದೇ 'ಮುಕ್ತ ತೀರ್ಪು' (open verdict) ನೀಡಿದ್ದಾರೆ ಮತ್ತು ಹೆಚ್ಚಿನ ಪರೀಕ್ಷೆಗಾಗಿ ಅಂಗಾಂಶದ ಮಾದರಿಗಳನ್ನು ಸರ್ಕಾರಿ ವಿಶ್ಲೇಷಕರಿಗೆ ಕಳುಹಿಸಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ದಾವಣಗೆರೆ ಎಕ್ಸ್‌ಪ್ರೆಸ್‌’ ವಿನಯ್‌ ಕುಮಾರ್‌ ಕರ್ನಾಟಕ ತಂಡದ ನೂತನ ಕೋಚ್‌!
IND Vs AFG: ಅಫ್ಘಾನಿಸ್ತಾನ-ಭಾರತ ಟೆಸ್ಟ್‌ ಸರಣಿಗೆ ಗಣೇಶ ಚತುರ್ಥಿ ಟ್ವಿಸ್ಟ್; ಬಿಸಿಸಿಐಗೆ ದಿನಾಂಕ ಬದಲಿಸುವಂತೆ ಅಫ್ಘಾನ್ ಪಟ್ಟು!