Aus vs SL ODI: ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಶ್ರೀಲಂಕಾ..!

By Naveen KodaseFirst Published Jun 20, 2022, 11:19 AM IST
Highlights

* ಬಲಿಷ್ಠ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಸೋಲುಣಿಸಿದ ಶ್ರೀಲಂಕಾ
* 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಲಂಕಾಗೆ 6 ವಿಕೆಟ್‌ಗಳ ಜಯ
* 5 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾಗೆ 2-1 ಅಂತರದ ಮುನ್ನಡೆ

ಕೊಲಂಬೊ(ಜೂ.20): ಪಥುಮ್ ನಿಸ್ಸಾಂಕ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡವು (Sri Lanka Cricket Team) ಬಲಿಷ್ಠ ಆಸ್ಟ್ರೇಲಿಯಾ ಎದುರು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವು 2-1ರ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಇದೀಗ ಸತತ ಎರಡು ಸೋಲು ಅನುಭವಿಸಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್‌ (Aaron Finch) ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್ (David Warner) ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ದುಸ್ಮಂತ ಚಮೀರಾ ಅವಕಾಶ ನೀಡಲಿಲ್ಲ. ನಾಯಕ ಆರೋನ್ ಫಿಂಚ್ 62 ರನ್ ಬಾರಿಸಿದರೇ, ಟ್ರಾವಿಸ್ ಹೆಡ್ ಅಜೇಯ ಅಜೇಯ 70 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 290ರ ಗಡಿ ದಾಟಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 291 ರನ್ ಬಾರಿಸಿತ್ತು. 

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಆರಂಭದಲ್ಲೇ ನಿರ್ಶೋನ್‌ ಡಿಕ್‌ವೆಲ್ಲಾ(25) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಪಥುಮ್ ನಿಸ್ಸಾಂಕ ಹಾಗೂ ಕುಸಾಲ್ ಮೆಂಡೀಸ್ ಜೋಡಿ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕುಸಾಲ್ ಮೆಂಡೀಸ್ 85 ಎಸೆತಗಳಲ್ಲಿ 8 ಬೌಂಡರಿ ಸಹಿತ 87 ರನ್ ಗಳಿಸಿ ರಿಟೈರ್ಡ್ ಹರ್ಟ್‌ ಆದರು. ಇನ್ನು ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಪಥುಮ್ ನಿಸ್ಸಾಂಕ 147 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 137 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಕೊನೆಯಲ್ಲಿ ಧನಂಜಯ ಡಿ ಸಿಲ್ವಾ (25) ಹಾಗೂ ಚರಿತ್ ಅಸಲಂಕಾ (13) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

From 0⃣–1⃣ down to 2⃣–1⃣ series lead 💥

Sri Lanka seal a tense win in the third ODI against Australia 🙌

Watch the series on https://t.co/CPDKNxoJ9v (in select regions) 📺

📝 Scorecard: https://t.co/JGMQ2j4yS4 pic.twitter.com/pbFZAiUI6x

— ICC (@ICC)

ಏಕದಿನ ಸರಣಿಗಾಗಿ ಭಾರತ ಮಹಿಳಾ ಕ್ರಿಕೆಟ್‌ ತಂಡ ಲಂಕಾಕ್ಕೆ ಆಗಮನ

ಕೊಲಂಬೊ: ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳಾ ತಂಡ ಸೀಮಿತ ಓವರ್‌ ಸರಣಿಯನ್ನು ಆಡಲು ಭಾನುವಾರ ಶ್ರೀಲಂಕಾಕ್ಕೆ ತೆರಳಿತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಜೊತೆಗಿನ ಸಂವಾದದ ಬಳಿಕ ಅವರು ಲಂಕಾಕ್ಕೆ ಪ್ರಯಾಣ ಬೆಳೆಸಿದರು. 

Ind vs SA T20I: ಬೆಂಗಳೂರು ಪಂದ್ಯದ ಟಿಕೆಟ್ ಹಣ 50% ವಾಪಾಸ್..!

ಲಂಕಾಕ್ಕೆ ಬಂದಿಳಿದ ತಂಡವನ್ನು ಅಲ್ಲಿನ ಕ್ರಿಕೆಟ್‌ ಮಂಡಳಿ ಸ್ವಾಗತಿಸಿದ್ದು, ಸಾಮಾಜಿಕ ತಾಣಗಳಲ್ಲಿ ಫೋಟೋಗಳನ್ನೂ ಹಂಚಿಕೊಂಡಿದೆ. ಇತ್ತೀಚೆಗಷ್ಟೇ ಕ್ರಿಕೆಟ್‌ಗೆ ರಾಜೀನಾಮೆ ಘೋಷಿಸಿದ್ದ ಮಿಥಾಲಿ ರಾಜ್‌ ಹಾಗೂ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ಅನುಪಸ್ಥಿತಿಯಲ್ಲಿ ಯುವ ಆಟಗಾರ್ತಿಯರೇ ತುಂಬಿರುವ ಭಾರತ, ಜೂ.23ರ ಬಳಿಕ ಲಂಕಾ ವಿರುದ್ಧ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ

ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ವಿಂಡೀಸ್‌ಗೆ ಜಯ

ಆ್ಯಂಟಿಗಾ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ * ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ. ಗೆಲುವಿಗೆ 84 ರನ್‌ಗಳ ಸುಲಭ ಗುರಿ ಪಡೆದಿದ್ದ ವಿಂಡೀಸ್‌ 4ನೇ ದಿನ * ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ಜಾನ್‌ ಕ್ಯಾಂಪ್‌ಬೆಲ್‌ * ರನ್‌ ಗಳಿಸಿದರು. ಖಾಲಿದ್‌ ಅಹ್ಮದ್‌ * ವಿಕೆಟ್‌ ಪಡೆದರು. ಇದಕ್ಕೂ ಮೊದಲು ಬಾಂಗ್ಲಾವನ್ನು ಮೊದಲ ಇನ್ನಿಂಗ್‌್ಸನಲ್ಲಿ 103 ರನ್‌ಗೆ ನಿಯಂತ್ರಿಸಿ, ವಿಂಡೀಸ್‌ 265 ರನ್‌ ಕಲೆ ಹಾಕಿ 162 ರನ್‌ಗಳ ಮುನ್ನಡೆ ಸಾಧಿಸಿತ್ತು. ಬಳಿಕ 2ನೇ ಇನ್ನಿಂಗ್‌್ಸನಲ್ಲಿ ಬಾಂಗ್ಲಾ 245ಕ್ಕೆ ಆಲೌಟ್‌ ಆಗಿತ್ತು.

click me!