
ಕ್ಯಾಂಡಿ(ಮೇ.01): ಬಾಂಗ್ಲಾದೇಶ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಶ್ರೀಲಂಕಾ ತಂಡವು ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ.
ಮೊದಲ ದಿನ 1 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದ್ದ ಲಂಕಾ, ಮಂದ ಬೆಳಕಿನ ಕಾರಣ 2ನೇ ದಿನದಾಟ ಒಂದು ಗಂಟೆ ಕಾಲ ಮುಂಚಿತವಾಗಿಯೇ ಅಂತ್ಯಗೊಂಡಾಗ 6 ವಿಕೆಟ್ ನಷ್ಟಕ್ಕೆ 469 ರನ್ ಗಳಿಸಿತ್ತು.
2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಲಹಿರು ತಿರಿಮನ್ನೆ 140 ರನ್ ಗಳಿಸಿದರೆ, ಒಶಾಡ ಫೆರ್ನಾಂಡೋ 81 ರನ್ ಗಳಿಸಿ ಔಟಾದರು. ನಿರೋಶನ್ ಡಿಕ್‌ವೆಲ್ಲಾ ಅಜೇಯ 64 ರನ್ ಗಳಿಸಿದ್ದು, ಮತ್ತೊಂದು ತುದಿಯಲ್ಲಿ ರಮೇಶ್ ಮೆಂಡೀಸ್ 22 ರನ್ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆತಿಥೇಯ ಶ್ರೀಲಂಕಾ ತಂಡ 500ಕ್ಕೂ ಹೆಚ್ಚು ರನ್ ಗಳಿಸುವ ವಿಶ್ವಾಸದಲ್ಲಿದೆ.
ಟೆಸ್ಟ್: ಪಾಕ್ ವಿರುದ್ಧ ಜಿಂಬಾಬ್ವೆ 176ಕ್ಕೆ ಆಲೌಟ್
ಬಾಂಗ್ಲಾದೇಶ ಪರ ವೇಗಿ ಟಸ್ಕಿನ್ ಅಹಮ್ಮದ್ 3 ವಿಕೆಟ್ ಕಬಳಿಸಿದರೆ, ಮೆಹದಿ ಹಸನ್, ಶರೀಫುಲ್ ಇಸ್ಲಾಂ ಹಾಗೂ ತೈಜುಲ್ ಇಸ್ಲಾಂ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ
ಸ್ಕೋರ್:
ಲಂಕಾ: 469/6
ಲಹಿರು ತಿರಿಮನ್ನೆ: 140
ಟಸ್ಕಿನ್ ಅಹಮ್ಮದ್ 119/3
(2ನೇ ದಿನದಂತ್ಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.