ರಾಹುಲ್ ಬ್ಯಾಟಿಂಗ್, ಹರ್ಪ್ರೀತ್ ಬೌಲಿಂಗ್; RCBಗೆ ಶಾಕಿಂಗ್ ಸೋಲು!

By Suvarna News  |  First Published Apr 30, 2021, 11:11 PM IST

ಬ್ಯಾಟಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ ಹರ್ಪ್ರೀತ್ ಬ್ರಾರ್ ಮಿಂಚಿನ ದಾಳಿ ಸಂಘಟಿಸಿದರು. ಪರಿಣಾಮ ಸವಾಲಿನ ಮೊತ್ತ ಬೆನ್ನಟ್ಟಲು ಆರ್‌ಸಿಬಿ ವಿಫಲವಾಯಿತು. 


ಅಹಮ್ಮದಾಬಾದ್(ಏ.30): ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ನೀಡಿದ 180 ರನ್ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗಿಲ್ಲ. ಘಟಾನುಘಟಿ ಬ್ಯಾಟ್ಸ್‌ಮನ್ ವೈಫಲ್ಯದಿಂದ ಆರ್‌ಸಿಬಿ ಸೋಲಿಗೆ ಗುರಿಯಾಗಿದೆ.

180 ರನ್ ಟಾರ್ಗೆಟ್ ಪಡೆದ ಆರ್‌ಸಿಬಿ ಆರಂಭದಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಜೊತೆಯಾಟ ಆರ್‌ಸಿಬಿ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಕೊಹ್ಲಿ 35 ರನ್ ಸಿಡಿಸಿ ಔಟಾದರು.

Tap to resize

Latest Videos

ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್ ಅಬ್ಬರಿಸಲಿಲ್ಲ. ಇತ್ತ ರಜತ್ ಪಾಟಿದಾರ್ 31 ರನ್ ಸಿಡಿಸಿ ಔಟಾದರು. ಶಹಬ್ಬಾಝ್ ಅಹಮ್ಮದ್ ಹಾಗೂ ಡೇನಿಯಲ್ ಸ್ಯಾಮ್ಸ್ ಕೂಡ ನೆರವಾಗಲಿಲ್ಲ. ಅಂತಿಮ ಹಂತದಲ್ಲಿ ಕೈಲ್ ಜಾಮಿನ್ಸ್ ಹಾಗೂ ಹರ್ಶಲ್ ಪಟೇಲ್ ಹೋರಾಟ ನಡೆಸಿದರು.

ಹರ್ಶಲ್ ಪಟೇಲ್ 31 ರನ್ ಸಿಡಿಸಿ ಔಟಾದರು. ಕೈಲ್ ಜಾಮಿನ್ಸನ್ ಅಜೇಯ 16 ರನ್ ಹಾಗೂ  ಈ ಮೂಲಕ ಆರ್‌ಸಿಬಿ ವಿಕೆಟ್ 58 ನಷ್ಟಕ್ಕೆ 145 ರನ್ ಸಿಡಿಸಿತು. ಹರ್ಪ್ರೀತ್ ಬ್ರಾರ್ 3 ವಿಕೆಟ್ ಕಬಳಿಸಿ ಮಿಂಚಿದರು.  34 ರನ್ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ಅಂಕಪಟ್ಟಿಲ್ಲಿ ಸ್ಥಾನಕ್ಕೇರಿತು.

click me!