ಕಾಂಗರೂಗಳಿಗೆ ಸಿಂಹಳೀಯರ ಸವಾಲ್‌ : ಇಂದು ಆಸೀಸ್‌-ಲಂಕಾ ಮುಖಾಮುಖಿ!

By Kannadaprabha NewsFirst Published Oct 28, 2021, 6:36 AM IST
Highlights

*ಮೊದಲ ಪಂದ್ಯ ಜಯಿಸಿರುವ ಉಭಯ ತಂಡಗಳು
*ದಕ್ಷಿಣ ಆಫ್ರಿಕಾವನ್ನು ಮಣಿಸಿದ್ದ ಆಸ್ಪ್ರೇಲಿಯಾ 
*ಬಾಂಗ್ಲಾದೇಶವನ್ನು ಬಗ್ಗು ಬಡಿದಿದ್ದ ಶ್ರೀಲಂಕಾ 

ದುಬೈ(ಅ. 28 ): ಟಿ20 ವಿಶ್ವಕಪ್‌ ಟೂರ್ನಿಯಲ್ಲಿ (ICC T20 World Cup) ತಾವಾಡಿರುವ ಮೊದಲ ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಪ್ರೇಲಿಯಾ(Austarlia) ಹಾಗೂ ಶ್ರೀಲಂಕಾ (Sri Lanka) ಗುರುವಾರ ಮುಖಾಮುಖಿ ಆಗಲಿದ್ದು, ಉಭಯ ತಂಡಗಳು ಜಯದ ಓಟ ಮುಂದುವರೆಸುವ ತವಕದಲ್ಲಿವೆ. ದಕ್ಷಿಣ ಆಫ್ರಿಕಾವನ್ನು ಮಣಿಸಿ ಆಸ್ಪ್ರೇಲಿಯಾ ಶುಭಾರಂಭ ಮಾಡಿದ್ದರೆ, ಬಾಂಗ್ಲಾದೇಶವನ್ನು ಬಗ್ಗು ಬಡಿದ ಶ್ರೀಲಂಕಾ ಗೆಲುವಿನೊಂದಿಗೆ ವಿಶ್ವಕಪ್‌ ಅಭಿಯಾನ ಆರಂಭಿಸಿತ್ತು. ಎರಡೂ ತಂಡಗಳು ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದು, ಗುರುವಾರದ ಪಂದ್ಯ ಮತ್ತಷ್ಟು ಕುತೂಹಲ ಕೆರಳಿಸಿದೆ.

ಸ್ಟೀವ್‌ ಸ್ಮಿತ್‌, ಆ್ಯರೊನ್‌ ಫಿಂಚ್‌, ಡೇವಿಡ್‌ ವಾರ್ನರ್‌, ಮಿಚಲ್‌ ಮಾಷ್‌ರ್‍, ಗ್ಲೆನ್‌ ಮ್ಯಾಕ್ಸ್‌ವೆಲ್‌ರಂತಹ ವಿಶ್ವ ಶ್ರೇಷ್ಠ ಬ್ಯಾಟರ್‌ಗಳ ಪಡೆಯನ್ನೇ ಆಸ್ಪ್ರೇಲಿಯಾ ಹೊಂದಿದೆ. ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಫಿಂಚ್‌ ಶೂನ್ಯಕ್ಕೆ ನಿರ್ಗಮಿಸಿದ್ದರೆ, ವಾರ್ನರ್‌, ಮಾರ್ಷ್ ರನ್‌ ಗಳಿಸಲು ತಿಣುಕಾಡಿದ್ದರು. ಆದರೆ, ಸ್ಟೀವ್‌ ಸ್ಮಿತ್‌ ಉತ್ತಮ ಫಾಮ್‌ರ್‍ನಲ್ಲಿರುವುದು ಆಸೀಸ್‌ಗೆ ಮತ್ತಷ್ಟುಬಲ ತುಂಬಿದೆ.

T20 World Cup 2021ರಲ್ಲಿ ನಮಿಬಿಯಾ ಶುಭಾರಂಭ; ಸ್ಕಾಟ್‌ಲೆಂಡ್ ವಿರುದ್ಧ 4 ವಿಕೆಟ್ ಗೆಲುವು!

ಐಪಿಎಲ್‌ನಲ್ಲಿ (IPL) ಅದ್ಭುತ ಪ್ರದರ್ಶನ ನೀಡಿದ್ದ ಗ್ಲೆನ್‌ ಮ್ಯಾಕ್ಸ್‌ವೇಲ್‌(Glenn Maxwell), ಕಳೆದ ಪಂದ್ಯದಲ್ಲಿ 4 ಓವರ್‌ ಬೌಲ್‌ ಮಾಡಿ ಒಂದು ವಿಕೆಟ್‌ ಉರುಳಿಸಿದ್ದರು. ಇದರೊಂದಿಗೆ ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ನಲ್ಲೂ ತಾವು ಅಪಾಯಕಾರಿ ಎಂಬ ಸಂದೇಶವನ್ನು ಎದುರಾಳಿಗೆ ರವಾನಿಸಿದ್ದರು. ಇನ್ನು ಮಿಚೆಲ್‌ ಸ್ಟಾರ್ಕ್, ಆ್ಯಂಡಮ್‌ ಜಂಪಾ, ಹೇಜಲ್‌ವುಡ್‌ ಆಸ್ಪ್ರೇಲಿಯಾದ ಪ್ರಮುಖ ಬೌಲಿಂಗ್‌ ಅಸ್ತ್ರಗಳಾಗಿದ್ದಾರೆ.

T20 World Cup: Ban vs Eng ಬಾಂಗ್ಲಾ ಎದುರು ಇಂಗ್ಲೆಂಡ್‌ಗೆ ಭರ್ಜರಿ ಜಯ

ಅತ್ತ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಕೊಂಚ ದುಬಾರಿ ಎನಿಸಿದರೂ, ಶ್ರೀಲಂಕಾದ ಬ್ಯಾಟರ್‌ಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಗಾಯದ ಸಮಸ್ಯೆಯಿಂದ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಸ್ಪಿನ್ನರ್‌ ಮಹೀಶ್‌ ತೀಕ್ಷಣ ಈ ಪಂದ್ಯಕ್ಕೆ ಲಭ್ಯರಿದ್ದು, ತಂಡದಲ್ಲಿ ಹೊಸ ಹುರುಪು ತಂದಿದೆ. ಆಲ್‌ರೌಂಡರ್‌ ವಾನಿಂದು ಹಸರಂಗ ಮೇಲೂ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಚರಿತ್‌ ಅಸಲಂಕ, ಪಥುಮ್‌ ನಿಸಾಂಕ, ಆವಿಷ್ಕಾ ಫರ್ನಾಂಡೊ ಲಂಕಾದ ಬ್ಯಾಟಿಂಗ್‌ ಬಲವಾಗಿದ್ದಾರೆ.

ನಮಿಬಿಯಾ ಶುಭಾರಂಭ, ಬಾಂಗ್ಲಾ ಎದುರು ಇಂಗ್ಲೆಂಡ್‌ಗೆ ಭರ್ಜರಿ ಜಯ!

ನಿನ್ನೆ (ಅ. 27) ನಡೆದ ಪಂದ್ಯಗಳಲ್ಲಿ ಬಾಂಗ್ಲಾದೇಶ ಎದುರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಇಂಗ್ಲೆಂಡ್ ತಂಡವು ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಬಾಂಗ್ಲಾದೇಶದ ಎದುರು ಇನ್ನೂ 35 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳ ಗೆಲುವು ದಾಖಲಿಸಿ  ಇಯಾನ್‌ ಮಾರ್ಗನ್‌ (Eoin Morgan) ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಸತತ 2 ಸೋಲು ಕಂಡ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ. 1ನೇ ಗುಂಪಿನಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ: ವಿವಾದ ಸೃಷ್ಟಿಸಿ, ಕ್ಷಮಿಸಿ ಎಂದ ವಕಾರ್!

ಸ್ಕಾಟ್‌ಲೆಂಡ್(Scotland) ವಿರುದ್ಧದ ಪಂದ್ಯದಲ್ಲಿ ನಮಿಬಿಯಾ 4 ವಿಕೆಟ್ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಮಿಬಿಯಾ ನ್ಯೂಜಿಲೆಂಡ್ ಹಾಗೂ ಭಾರತ ತಂಡವನ್ನು ಹಿಂದಿಕ್ಕಿ 3ನೇ ಸ್ಥಾನ ಅಲಂಕರಿಸಿದೆ.  ಸ್ಕಾಟ್‌ಲೆಂಡ್ ವಿರುದ್ದ ಗೆಲುವು ಸಾಧಿಸಿರುವ ನಮಿಬಿಯಾ ಅಕ್ಟೋಬರ್ 31 ರಂದು ಆಫ್ಘಾನಿಸ್ತಾನ ವಿರುದ್ಧ ಸೆಣಸಾಟ ನಡೆಸಲಿದೆ. ನವೆಂಬರ್ 2 ರಂದು ನಮಿಬಿಯಾ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. 2ನೇ ಗುಂಪಿನಲ್ಲಿರುವ ನಮಿಬಿಯಾ ತಂಡ ಸ್ಕಾಟ್‌ಲೆಂಡ್ ವಿರುದ್ಧ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ಆಫ್ಘಾನಿಸ್ತಾನದ ಬಳಿಕ ನಮಿಬಿಯಾ 3ನೇ ಸ್ಥಾನ ಅಲಂಕರಿಸಿದೆ.  

click me!